ಹೊಟ್ಟೆಯ ಭಾಗದಲ್ಲಿ ಕೊಬ್ಬು ಜಮೆಯಾಗುವುದು ಬಹುಮಂದಿಗೆ ತಲೆನೋವಾಗಿ ಪರಿಣಮಿಸಿದೆ. ಇದು ದೇಹದ ಆಕರ್ಷಕತೆಯನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ಮಧುಮೇಹ, ಸಂಧಿವಾತ ಮತ್ತು ರಕ್ತದೊತ್ತಡದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಹೊಟ್ಟೆಯ ಕೊಬ್ಬು ಹೆಚ್ಚಾದರೆ ರಕ್ತದ ಕೊಲೆಸ್ಟ್ರಾಲ್ ಪ್ರಮಾಣವೂ ಏರಿಕೆಯಾಗುತ್ತದೆ. ಇದರ ಪರಿಣಾಮವಾಗಿ ಹೃದಯಾಘಾತ ಸೇರಿದಂತೆ ಹಲವು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚುತ್ತದೆ. ಆದ್ದರಿಂದ ಹೊಟ್ಟೆಯ ಕೊಬ್ಬು ನಿಯಂತ್ರಣದಲ್ಲಿಡುವುದು ಅತ್ಯಗತ್ಯ.
ಹೊಟ್ಟೆಯ ಕೊಬ್ಬು ಕಡಿಮೆ ಮಾಡಲು ಆಹಾರ ಪದ್ಧತಿ ಮತ್ತು ದಿನನಿತ್ಯದ ಜೀವನ ಶೈಲಿಯಲ್ಲಿ ಬದಲಾವಣೆ ತರಬೇಕು. ತಜ್ಞರ ಸಲಹೆಯಂತೆ ನಿಯಮಿತ ವ್ಯಾಯಾಮ ಮಾಡುವುದು ಹಾಗೂ ಮಲಗುವ ಮುನ್ನ ಕೆಲವು ಆಹಾರಗಳನ್ನು ಸೇವಿಸುವುದು ತೂಕವನ್ನು ಸಮತೋಲನದಲ್ಲಿಡಲು ಸಹಕಾರಿಯಾಗುತ್ತದೆ.
ಬಾದಾಮಿಯಲ್ಲಿರುವ ಪೋಷಕಾಂಶಗಳು ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರೋಟೀನ್, ವಿಟಮಿನ್ ಇ, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಫೈಬರ್‌ನಿಂದ ಸಮೃದ್ಧವಾಗಿರುವ ಬಾದಾಮಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನೀವು ಮಲಗುವ ಮುನ್ನ ಬಾದಾಮಿಯನ್ನು ಸಹ ತಿನ್ನಬಹುದು.
ಊಟವಾದ ಬಳಿಕ ಚೆರ್ರಿ ಸೇವನೆ ಅತ್ಯುತ್ತಮ ಆಯ್ಕೆ. ಆರೋಗ್ಯ ತಜ್ಞರ ಪ್ರಕಾರ, ಚೆರ್ರಿಗಳಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತವೆ ಮತ್ತು ಜೀರ್ಣಕ್ರಿಯೆ ಸುಧಾರಣೆಗೆ ಸಹಕಾರಿ.
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಬ್ರೊಕೊಲಿಯನ್ನು ನಿಮ್ಮ ರಾತ್ರಿ ಊಟದಲ್ಲಿ ಸೇರಿಸಿಕೊಳ್ಳಿ. ನೀವು ಅದನ್ನು ಕಚ್ಚಾ, ಬೇಯಿಸಿ ಅಥವಾ ಸಲಾಡ್ ರೂಪದಲ್ಲಿ ಸೇವಿಸಬಹುದು. ಬ್ರೊಕೊಲಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಬ್ಬಿನ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಗ್ರೀನ್ ಟೀ ಸೇವನೆಯಿಂದ ದೇಹದ ಚಯಾಪಚಯ ಕ್ರಿಯೆ ವೇಗಗೊಳ್ಳುತ್ತದೆ, ಇದು ಕೊಬ್ಬು ಕರಗಿಸಲು ಸಹಕಾರಿ. ಮಲಗುವ ಮುನ್ನ ಒಂದು ಕಪ್ ಗ್ರೀನ್ ಟೀ ಕುಡಿಯುವುದರಿಂದ ತೂಕ ಕಡಿಮೆ ಮಾಡಲು ಸಹಾಯವಾಗುತ್ತದೆ. ದಿನಕ್ಕೆ 2-3 ಲೀಟರ್ ನೀರು ಕುಡಿಯುವುದರಿಂದ ಚಯಾಪಚಯ ಸುಧಾರಿಸಿ ದೇಹದ ವಿಷಪದಾರ್ಥಗಳು ಹೊರಹೋಗುತ್ತವೆ.
ಮೊದಲು ಒಂದು ಪಾತ್ರೆಗೆ ಕೊತ್ತುಂಬರಿ, ಮೆಂತ್ಯೆ, ಸೋಂಪು, ದಾಲ್ಮೀನ್ನಿ ಮತ್ತು ಶುಂಠಿ ಸೇರಿಸಿ ಮಿಕ್ಸಿ ಮಾಡಿ ಪ್ರತಿದಿನ ರಾತ್ರಿ ಕುಡಿಯಿರಿ. ಇದು ಹೊಟ್ಟೆಯಲ್ಲಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ವ್ಯಾಯಾಮವು ಕೊಬ್ಬು ಕರಗಿಸಲು ಅತ್ಯಂತ ಪರಿಣಾಮಕಾರಿ ಮಾರ್ಗ. ವೇಗದ ನಡಿಗೆ, ಓಟ, ಸೈಕ್ಲಿಂಗ್ ಅಥವಾ ಈಜು ಮಾಡುವುದರಿಂದ ದೇಹದ ಕೊಬ್ಬು ತ್ವರಿತವಾಗಿ ಕರಗುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ಶ್ರಮ ನೀಡುವ ವ್ಯಾಯಾಮಗಳು (ಉದಾ: ಬರ್ಪೀಸ್, ಜಂಪಿಂಗ್ ಜ್ಯಾಕ್ಸ್) ಇನ್ನಷ್ಟು ಪರಿಣಾಮಕಾರಿ. ಭುಜಂಗಾಸನ, ಧನುರಾಸನ ಮತ್ತು ನೌಕಾಸನದಂತಹ ಯೋಗಾಸನಗಳು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತವೆ.
ಸಕ್ಕರೆಯ ಸೇವನೆಯನ್ನು ತಪ್ಪಿಸಿ! ಬಿಳಿ ಬ್ರೆಡ್, ಸಿಹಿತಿಂಡಿಗಳಂತಹ ಸಂಸ್ಕರಿಸಿದ ಆಹಾರಗಳನ್ನು ದೂರವಿಡಿ. ಬದಲಾಗಿ ಆಲಿವ್ ಎಣ್ಣೆ, ಬಾದಾಮಿ, ವಾಲ್‌ನಟ್, ಮೀನು ಮತ್ತು ಅವಕಾಡೊಗಳಲ್ಲಿ ಇರುವ ಆರೋಗ್ಯಕರ ಕೊಬ್ಬನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.






