ಆಗಸ್ಟ್ 5 ರಂದು ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಹಲವರು ಬೇಡಿಕೆಗಳನ್ನು ಎದುರಿಸಲು ಈ ಮುಷ್ಕರ ಎರ್ಪಡಿಸಲಾಗಿತ್ತು. ಆದರೆ ಇದೀಗ ನೌಕರರಿಗೆ ಸಾರಿಗೆ ಇಲಾಖೆ ಶಾಕ್ ನೀಡಿದೆ.
ಮುಷ್ಕರದಲ್ಲಿ ಭಾಗವಹಿಸುವ ಯಾವುದೇ ಉದ್ಯೋಗಿಗೆ ರಜೆ ನಿರಾಕರ.
ಸಾರಿಗೆ ನೌಕರರ ನಿರ್ಧಾರದಂತೆ ಆಗಸ್ಟ್ 5 ರಂದು ಮುಷ್ಕರ ನಡೆಯಬೇಕಿತ್ತು. ಆದರೆ ಸಾರಿಗೆ ಇಲಾಖೆಯು ಕಟ್ಟುನಿಟ್ಟಾಗಿ ಎಚ್ಚರಿಕೆಯನ್ನು ನೀಡಿದೆ. ಮುಷ್ಕರ ದಲ್ಲಿ ಪಾಲ್ಗೊಂಡಿದ್ದೆ ಆದರೇ, ಯಾವುದೇ ರಜೆಯನ್ನು ಮಂಜೂರು ಮಾಡಲು ನಿರಾಕರಿಸಲಗುತ್ತದೆ. ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಾತ್ರವಲ್ಲದೇ ಕೆಲಸ ಮಾಡಿಲ್ಲ ಎಂದಾದರೆ ಸಂಬಳವನ್ನೂ ನೀಡಲ್ಲ ಎಂದು ಇಲಾಖೆ ವಾರ್ನಿಂಗ್ ಮಾಡಿದೆ.
ಇಂದು ಮಧ್ಯರಾತ್ರಿಯಿಂದಲೇ ಸಾರಿಗೆ ನೌಕರರ ಮುಷ್ಕರ ಆರಂಭ ಆಗಬೇಕಿತ್ತು. ಆದರೆ ನಾಳೆಯಿಂದ ಸಾರಿಗೆ ನೌಕರರಿಗೆ ಯಾವುದೇ ರಜೆ ಮಂಜೂರು ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಾತ್ರವಲ್ಲದೇ ಅಗತ್ಯ ಬಿದ್ದರೆ ವಾರದ ರಜೆಯನ್ನೂ ರದ್ದು ಮಾಡಲು ಸೂಚಿಸಿದೆ.
ಮುಷ್ಕರ ನಿಭಾಯಸಲು ಸರ್ಕಾರ ಸಮರ್ಥವಾಗಿದೆ: ಪರಮೇಶ್ವರ್
ಇನ್ನು ವೇತನ ಪರಿಷ್ಕರಣೆ ಮತ್ತು ಇತರ ಬೇಡಿಕೆಗಳನ್ನು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳ ನೌಕರರು ನಾಳೆಯಿಂದ ಅನಿರ್ದಾಷ್ಟವಧಿಗೆ ಮುಷ್ಕರ ಆರಂಭಿಸಲಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ ಪರಮೇಶ್ವರ್, ಇದು ಬೇರೆ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ. ಆದರೂ ಯಾವುದೇ ಸಮಸ್ಯೆ, ಪರಿಸ್ಥಿತಿಯನ್ನು ನಿಭಾಯಿಸಲು ತಮ್ಮ ಸರ್ಕಾರ ಸಮರ್ಥವಾಗಿದೆ. ಸಿಎಂ ಜೊತೆ ಮಾತುಕತೆ ವಿಫಲಗೊಂಡರೆ ಮುಷ್ಕರ ಶುರುವಾಗೋದು ನಿಶ್ಚಿತ, ಹಾಗಾಗಿ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆಯೇ ಅಂತ ಕೇಳಿದರೆ ಎಲ್ಲ ಕಡೆಯೂ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಅವರು ಹೇಳಿದರು.
ನಾಲ್ಕೂ ನಿಗಮಗಳ ನೌಕರರು ಇಂದಿನಿಂದ ಪ್ರತಿಭಟನೆಯಲ್ಲಿ ಭಾಗಿ ಆಗುತ್ತಾರೆ. ಯಾವುದೇ ಬಸ್ ಸಂಚಾರ ವ್ಯತ್ಯಯ ಅಗಲ್ಲ. ರಜೆ ಇರುವ ನೌಕರರು, ವೀಕ್ ಆಫ್ ಸಿಬ್ಬಂದಿಗಳು ಪ್ರತಿಭಟನೆ ಯಲ್ಲಿ ಭಾಗಿಯಾಗ್ತಾರೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಕಳೆದ 4 ವರ್ಷಗಳಿಂದ ವೇತನ ಹೆಚ್ಚಳದಲ್ಲಿ ತಾರತಮ್ಯ ಆಗ್ತಿದೆ. ಸರ್ಕಾರ ಬಂದು ಎರಡು ವರ್ಷ ಕಳೆದಿದ್ರೂ ನಮ್ಮಬೇಡಿಕೆ ಈಡೇರಿಸಿಲ್ಲ, ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಅಂತ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
2020ರ ಜ.1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿ ಪಾವತಿ ಹಾಗೂ 2024ರ ಜ.1ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಸಂಬಂಧ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಆದರೆ, ಈವರೆಗೆ ಬೇಡಿಕೆಗಳ ಈಡೇರಿಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ ಕಾರಣ ಮತ್ತೊಂದು ಬಣದಿಂದ ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ನಿರ್ಧರಿಸಲಾಗಿದೆ.
1 thought on “ನಾಳಿನ ಸಾರಿಗೆ ನೌಕರ ಮುಷ್ಕರಕ್ಕೆ ದೊಡ್ಡ ಶಾಕ್! ಕರ್ನಾಟಕ ಸರ್ಕಾರದಿಂದ ಎಚ್ಚರಿಕೆ. Transport strike jolted! Karnataka govt issues warning.”