---Advertisement---

“ತೆಲುಗು ನಟಿಯರ ಮೂಲಕ ಹನಿಟ್ರ್ಯಾಪ್ ಯತ್ನ ನಡೆದಿತ್ತು”..ಸಿ.ಜೆ. ರಾಯ್ ಸಾವಿನ ಬಗ್ಗೆ ಚಂದ್ರಚೂಡ್ ಹೇಳಿಕೆ..!

On: February 1, 2026 3:06 PM
Follow Us:
---Advertisement---

ಖ್ಯಾತ ಉದ್ಯಮಿ ಸಿ.ಜೆ. ರಾಯ್ ಅವರ ನಿಧನದ ನಂತರ, ಅವರ ಆಪ್ತ ಸ್ನೇಹಿತ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಗಂಭೀರ ಆರೋಪಗಳನ್ನು ಮುಂದಿಟ್ಟಿದ್ದಾರೆ. ಇದು ಸಾಮಾನ್ಯ ಆತ್ಮಹತ್ಯೆಯಲ್ಲ, ಇದರ ಹಿಂದೆ ಪ್ರಭಾವಿ ರಾಜಕಾರಣಿಗಳ ದೊಡ್ಡ ಜಾಲ ಹಾಗೂ ಕೇಂದ್ರ ಸರ್ಕಾರದ ಒತ್ತಡ ಕೆಲಸ ಮಾಡಿದೆ ಎಂದು ಅವರು ಹೇಳಿದ್ದಾರೆ.

ರಾಯ್ ಅವರು ಹಣದ ಭಯದಿಂದ ಅಥವಾ ಸಣ್ಣ ಕಾರಣಗಳಿಗೆ ಜೀವ ತ್ಯಜಿಸುವ ವ್ಯಕ್ತಿಯಲ್ಲ. ಯಾರೋ ಹೇರಿದ ಒತ್ತಡಕ್ಕೆ ಅವರು ಬಲಿಯಾದಂತೆ ಕಾಣುತ್ತಿದೆ ಎಂದು ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ: ವೃದ್ಧ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ನಂತರ ಕೋಲೆ ಮಾಡಿ ಮನೆ ಕೆಲಸಗಾರ ಆತ್ಮಹತ್ಯೆ!!!!

ಇದನ್ನು ಓದಿ: ತಿರುಪತಿ ಗೋವಿಂದರಾಜಸ್ವಾಮಿ ದೇವಸ್ಥಾನದಲ್ಲಿ ಕುಡುಕನ ಅವಾಂತರ; ಗೋಪುರ ಏರಿ ಕಳಶ ಎಳೆಯಲು ಯತ್ನ

ಇದನ್ನು ಓದಿ: ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ಕೊನೆಯ 20 ನಿಮಿಷಗಳ ವಿವರ ಬಹಿರಂಗ, ಏನಾಯಿತು ಗೊತ್ತಾ?

ಸಿ.ಜೆ. ರಾಯ್ ಕೇವಲ ಉದ್ಯಮಿಯಷ್ಟೇ ಅಲ್ಲ, ಹಲವು ರಾಜಕೀಯ ನಾಯಕರಿಗೆ ಭಾರಿ ಪ್ರಮಾಣದಲ್ಲಿ ಹಣಕಾಸು ನೆರವು ನೀಡುತ್ತಿದ್ದವರು. ಹ್ಯಾರಿಸ್, ನಲಪಾಡ್ ಹಾಗೂ ಕೆ.ಜೆ. ಜಾರ್ಜ್ ಅವರಂತಹ ಪ್ರಭಾವಿ ನಾಯಕರೊಂದಿಗೆ ವ್ಯವಹಾರಿಕ ಸಂಬಂಧವೂ ಇತ್ತು. ರಾಜಕಾರಣಿಗಳ ಆಟಕ್ಕೆ ಅವರು ಸಿಲುಕಿದರು, ವಿಶೇಷವಾಗಿ ಕೇರಳ ಚುನಾವಣೆ ಹತ್ತಿರವಾಗಿದ್ದ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಫಂಡಿಂಗ್ ಮಾಡುತ್ತಿದ್ದುದೇ ಅವರನ್ನು ಗುರಿಯಾಗಿಸಲು ಕಾರಣವಾಯಿತು ಎಂದು ಚಂದ್ರಚೂಡ್ ಆರೋಪಿಸಿದ್ದಾರೆ.

ಚಂದ್ರಚೂಡ್ ಹೇಳುವಂತೆ, ರಾಯ್ ಅವರನ್ನು ಹಣದ ವಿಚಾರದಲ್ಲಿ ಬೆದರಿಸಿ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಎಂದು ಹೇಳಲಾಗದು. 2016ರಲ್ಲಿ ದೊಡ್ಡಬಳ್ಳಾಪುರದ ರೆಸಾರ್ಟ್ ಒಂದರಲ್ಲಿ ತೆಲುಗಿನ ಮೂವರು ಖ್ಯಾತ ನಟಿಯರ ಮೂಲಕ ಹನಿಟ್ರ್ಯಾಪ್ ಮಾಡುವ ಯತ್ನ ನಡೆದಿತ್ತು. ಅದು ಆಗ ಸುದ್ದಿಯೂ ಆಯಿತು. ಆದರೂ ರಾಯ್ ಅವರು ಈ ಕುರಿತು ಯಾವುದೇ ಅಧಿಕೃತ ದೂರು ದಾಖಲಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ಹಣಕಾಸು ನೆರವು ನೀಡುವವರನ್ನು ಗುರಿಯಾಗಿಸಿ ಕಿರುಕುಳ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಐಟಿ ಅಧಿಕಾರಿಗಳ ನಿರಂತರ ಒತ್ತಡದಿಂದ ಬೇಸತ್ತು ರಾಯ್ ಅವರು ದೇಶ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದರು ಮತ್ತು ವಿದೇಶದ ಪೌರತ್ವ ಪಡೆಯಲು ಮುಂದಾಗಿದ್ದರು ಎಂದು ಚಂದ್ರಚೂಡ್ ಹೇಳಿದ್ದಾರೆ.

ತನಿಖೆಯ ವಿಚಾರದಲ್ಲಿ ಮಾತನಾಡಿದ ಅವರು, ಸಿಐಡಿ ತನಿಖೆಯಿಂದ ಸ್ವಲ್ಪ ಮಟ್ಟಿನ ಮಾಹಿತಿ ಸಿಗಬಹುದು. ಆದರೆ ಸಿಬಿಐ ತನಿಖೆಯಲ್ಲೂ ನಿಜವಾದ ಸತ್ಯ ಹೊರಬರಲು ಸಾಧ್ಯವಿಲ್ಲ, ಅಲ್ಲಿ ಕೂಡ ಶಕ್ತಿಶಾಲಿಗಳೇ ಕುಳಿತಿದ್ದಾರೆ. ಇದು ಕೇಂದ್ರ ಸರ್ಕಾರದ ವ್ಯವಸ್ಥಿತ ಯುಕ್ತಿ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಓದಿ: ಬೆಳಗಾವಿ: ಪತ್ನಿ ಕೊಂದು 2 ದಿನ ಶವದೊಂದಿಗೆ ಕಳೆದ ಪತಿ, ಹೆಣವನ್ನು ಬೆಡ್ ಕೆಳಗೆ ಅಡಗಿಸಿಟ್ಟು ಪರಾರಿ!!ಕೊಲೆಗೆ ಕಾರಣವೇನು?

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment