ಕಲಬುರಗಿ-ಬೆಂಗಳೂರು ಮಧ್ಯೆ ಸಂಚರಿಸುತ್ತಿರುವ ವಂದೇ ಭಾರತ್ ರೈಲಿನ ಸಮಯವನ್ನು 2026ರ ಜನವರಿ 1ರಿಂದ ಅನ್ವಯವಾಗುವಂತೆ ದಕ್ಷಿಣ ಮಧ್ಯ ರೈಲ್ವೆಯು ಬದಲಾಯಿಸಿದ್ದು, ಕಲಬುರಗಿಯಿಂದ ಬೆಳಿಗ್ಗೆ 5.15ರ ಬದಲು ಬೆಳಿಗ್ಗೆ 6.10ಕ್ಕೆ ಹೊರಟು ಮಧ್ಯಾಹ್ನ 2.10ಕ್ಕೆ ಬೆಂಗಳೂರು ತಲುಪಲಿದೆ. ಕಲಬುರಗಿ ಮತ್ತು ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ನಡುವೆ ಕೇಸರಿ ಬಣ್ಣದ 8 ಬೋಗಿಯ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ನಡೆಸುತ್ತದೆ.
ಈ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಬೇಕು ಎಂಬ ಬೇಡಿಕೆ ಇತ್ತು. ಬೆಂಗಳೂರು ನಗರದಿಂದ ಮಂತ್ರಾಲಯಕ್ಕೆ ಹೋಗುವ ಭಕ್ತರಿಗೆ ಸಹ ಅನುಕೂಲ ಮಾಡಿಕೊಡುವ ವಂದೇ ಭಾರತ್ ರೈಲು ಸೇವೆ ಇದಾಗಿದೆ. ಕಲಬುರಗಿ ಮತ್ತು ಬೆಂಗಳೂರು ನಡುವಿನ ವಂದೇ ಭಾರತ್ ರೈಲು ಸೇವೆಗೆ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಯಲಂ (ಎಸ್ಎಸ್ಪಿಎನ್) ಹೊಸ ನಿಲುಗಡೆ ನೀಡಲಾಗಿದೆ. ಎರಡು ನಿಮಿಷಗಳ ಕಾಲ ರೈಲು ಇಲ್ಲಿ ನಿಲುಗಡೆಗೊಳ್ಳಲಿದೆ.
ಕಲಬುರಗಿ-ಬೆಂಗಳೂರು ನಡುವಿನ ರೈಲು ನಂಬರ್ 22231 ಕಲಬುರಗಿಯಿಂದ ಬೆಳಗ್ಗೆ 6.10ಕ್ಕೆ ಹೊರಟು 6.40ಕ್ಕೆ ವಾಡಿಗೆ ತಲುಪಲಿದೆ. 6.48/ 6.50 ಯಾದಗಿರಿ, 7.38/ 7.40 ರಾಯಚೂರು, 7.58/ 8 ಗಂಟೆ ಮಂತ್ರಾಲಯ ರೋಡ್, 9/ 9.05 ಗುಂತಕಲ್, 10.03/ 10.05 ಅನಂತಪುರ, 11/ 11.02 ಶ್ರೀ ಸತ್ಯಸಾಯಿ ಪ್ರಶಾಂತಿ ನಿಯಲಂ, ಧರ್ಮಾವರಂ 11.10, 12.28/ 12.30 ಯಲಹಂಕ, 14.10ಕ್ಕೆ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ತಲುಪಲಿದೆ.
ಬೈಯಪ್ಪನಹಳ್ಳಿಯಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ನಿಂದ ಕಲಬುರಗಿಗೆ ರೈಲು ನಂಬರ್ 22232 ಸಂಚಾರವನ್ನು ನಡೆಸಲಿದೆ. ಈ ರೈಲು 14.40ಕ್ಕೆ ಹೊರಡಲಿದೆ.
15.05/ 15.07 ಯಲಹಂಕ, 16.23/16.25 ಶ್ರೀ ಸತ್ಯಸಾಯಿ ಪ್ರಶಾಂತಿ ನಿಯಲಂ, 17.40 ಧರ್ಮಾವರಂ, 17.33/ 17.35 ಅನಂತಪುರ, 18.37/ 18.42 ಗುಂತಕಲ್, 19.48/ 19.50 ಮಂತ್ರಾಲಯ ರೋಡ್, 20.18/ 20.20 ರಾಯಚೂರು, 21.03/ 21.05 ಯಾದಗಿರಿ, ವಾಡಿ 22.15 ಮತ್ತು 22.45ಕ್ಕೆ ಕಲಬುರಗಿ ತಲುಪಲಿದೆ. ಕಲಬುರಗಿ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿತ್ತು ಕಲಬುರಗಿ-ಬೆಂಗಳೂರು ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು. ಮಾರ್ಚ್ 12, 2024ರಂದು ಈ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.
ರೈಲಿಗೆ ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ ರೋಡ್, ಗುಂತಕಲ್, ಅನಂತಪುರ, ಧರ್ಮಾವರಂ, ಯಲಹಂಕ ಮತ್ತು ಬೆಂಗಳೂರು ಬೈಯಪ್ಪನಹಳ್ಳಿ ನಿಲುಗಡೆ ಇತ್ತು. ಈಗ ಹೊಸ ನಿಲುಗಡೆಯೊಂದನ್ನು ಸೇರಿಸಲಾಗಿದೆ.






