---Advertisement---

ವೃದ್ಧ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ನಂತರ ಕೋಲೆ ಮಾಡಿ ಮನೆ ಕೆಲಸಗಾರ ಆತ್ಮಹತ್ಯೆ!!!!

On: February 1, 2026 2:51 PM
Follow Us:
---Advertisement---

ಬೆಂಗಳೂರಿನ ಸಿಲ್ಕ್ ಬೋರ್ಡ್ ಸಮೀಪದ ಕೆಎಎಸ್ ಕಾಲೋನಿಯಲ್ಲಿ ಮನಕಲಕುವ ಘಟನೆೊಂದು ನಡೆದಿದೆ. 65 ವರ್ಷದ ವೃದ್ಧ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿ, ಬಳಿಕ ಕೊಲೆ ಮಾಡಿರುವ ಭೀಕರ ಪ್ರಕರಣ ಬೆಳಕಿಗೆ ಬಂದಿದೆ. ಈ ಅಮಾನುಷ ಕೃತ್ಯದ ನಂತರ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಮಹಿಳೆಯನ್ನು ಸರಿತಾ ಎಂದು ಗುರುತಿಸಲಾಗಿದ್ದು, ಮನೆ ಕೆಲಸ ಮಾಡುತ್ತಿದ್ದ ದೇವರಾಜು (50) ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಶನಿವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಭಾನುವಾರ ಬೆಳಗಿನ ಜಾವ ಸುಮಾರು 4.30ರ ವೇಳೆಗೆ ಈ ದಾರುಣ ಘಟನೆ ಬಗ್ಗೆ ಮಾಹಿತಿ ಹೊರಬಂದಿದೆ.

ಇದನ್ನು ಓದಿ: ಸಹಾಯಕ್ಕೆ ಯಾರೂ ಸಂಬಂಧಿಕರು ಇಲ್ಲ, ತಾಯಿಯ ಅಂತ್ಯಕ್ರಿಯೆಯನ್ನು ಏಕಾಂಗಿಯಾಗಿ ಮಾಡಿದ ಇಬ್ಬರು ಹೆಣ್ಣುಮಕ್ಕಳು…!

ಇದನ್ನು ಓದಿ: ದೇವರನ್ನು ನೆನೆದ ಕ್ಷಣವೇ ಜೈಲು ಅಥವಾ ಸಾವು! ಧರ್ಮವೇ ದೇಶದ್ರೋಹವಾಗಿರುವ ಈ ಕತ್ತಲ ಲೋಕದ ಒಳಗುಟ್ಟುಗಳು!!!

ಇದನ್ನು ಓದಿ: ದೇವಾಲಯದ ಆವರಣದ ಹೂವಿನ ತೋಟದಲ್ಲಿ ಗಾಂಜಾ ಬೆಳೆದ ಪೂಜಾರಿ ಬಂಧನ

ಸರಿತಾ ಅವರ ಪತಿ ಉದ್ಯೋಗದ ನಿಮಿತ್ತ ದುಬೈನಲ್ಲಿ ಇದ್ದು, ಮುಂಜಾನೆ 4.30ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದ್ದರು. ಮನೆಗೆ ಬಂದು ಬೆಲ್ ಮಾಡಿದಾಗ ಮೊದಲ ಮಹಡಿಯಲ್ಲಿ ಇದ್ದ 27 ವರ್ಷದ ಮಗಳು ಬಾಗಿಲು ತೆರೆದು, ಮತ್ತೆ ತನ್ನ ಕೊಠಡಿಗೆ ತೆರಳಿದ್ದಾಳೆ. ನಂತರ ಪತಿ ಕೆಳ ಮಹಡಿಯಲ್ಲಿ ಇದ್ದ ಪತ್ನಿಯ ಕೋಣೆಗೆ ತೆರಳಿದಾಗ ಭೀಕರ ದೃಶ್ಯ ಎದುರಾಗಿದೆ.

ಘಟನೆ ನಡೆದ ಸಮಯದಲ್ಲೇ ಮನೆಯ ಮೇಲ್ಮಹಡಿಯಲ್ಲಿ ಮಗಳು ಇದ್ದರೂ, ಕೆಳ ಮಹಡಿಯಲ್ಲಿ ನಡೆದ ಕ್ರೂರ ಕೃತ್ಯದ ಬಗ್ಗೆ ಆಕೆಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆರೋಪಿ ದೇವರಾಜು ಅಪರಾಧ ಎಸಗಿದ ಬಳಿಕ ಅದೇ ಮನೆಯಲ್ಲಿ ನೇಣು ಹಾಕಿಕೊಂಡು ಜೀವ ಕೊನೆಗೊಳಿಸಿದ್ದಾನೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಮೈಕೋ ಲೇಔಟ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಹಿಳೆ ಹಾಗೂ ಆರೋಪಿಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.

ಇದನ್ನು ಓದಿ: ಆಗ್ರಾದಲ್ಲಿ ಚೀಲದಲ್ಲಿ ಶಿರರಹಿತ ಯುವತಿಯ ಶವ ಪತ್ತೆ: ಪ್ರೇಮ ಸಂಬಂಧದ ಅನುಮಾನಕ್ಕೆ ಕೊಲೆ

ನಗರದೊಳಗೆ ವೃದ್ಧ ಮಹಿಳೆಯರ ಮೇಲೂ ಇಂತಹ ಪಾಶವಿಕ ಕೃತ್ಯಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಭಾರೀ ಆಕ್ರೋಶ ಮತ್ತು ಆತಂಕ ಮೂಡಿಸಿದ್ದು, ಇಡೀ ಸಮಾಜವನ್ನು ಬೆಚ್ಚಿಬೀಳಿಸಿದೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment