ಜಗತ್ತು ವೇಗವಾಗಿ ಆಧುನಿಕತೆ ಕಡೆ ಸಾಗುತ್ತಿದ್ದು, ಅದರ ಪರಿಣಾಮ ಧಾರ್ಮಿಕ ಆಚರಣೆಗಳ ಮೇಲೂ ಕಾಣಿಸುತ್ತಿದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ತೆಂಗಿನಕಾಯಿ, ಲಡ್ಡು, ಪಾಯಸ ಅಥವಾ ಪುಳಿಯೋಗರೆ ಪ್ರಸಾದವಾಗಿ ನೀಡಲಾಗುತ್ತದೆ. ಆದರೆ ಗುಜರಾತ್ ಮತ್ತು ತಮಿಳುನಾಡಿನ ಎರಡು ಪ್ರಸಿದ್ಧ ದೇವಾಲಯಗಳಲ್ಲಿ ಈ ಪದ್ಧತಿಗೆ ಸಂಪೂರ್ಣ ವಿರೋಧವಾಗಿ ಪಿಜ್ಜಾ, ಸ್ಯಾಂಡ್‌ವಿಚ್, ಬರ್ಗರ್, ಪಾನಿಪುರಿ ಹಾಗೂ ತಂಪು ಪಾನೀಯಗಳನ್ನು ಪ್ರಸಾದವಾಗಿ ವಿತರಿಸಲಾಗುತ್ತಿದೆ. ಈ ವಿಶಿಷ್ಟ ಆಚರಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ಜೀವಿಕಾ ಮಾತಾಜಿ ದೇವಾಲಯದ ವಿಶೇಷತೆ
ರಪುತಾನಾ ಗ್ರಾಮದಲ್ಲಿರುವ ಜೀವಿಕಾ ಮಾತಾಜಿ ದೇವಾಲಯದಲ್ಲಿ ಸುಮಾರು 65–70 ವರ್ಷಗಳಿಂದ ಮಕ್ಕಳಿಗಾಗಿ ವಿಶೇಷ ಸಂಪ್ರದಾಯವನ್ನು ಪಾಲಿಸಲಾಗುತ್ತಿದೆ. ತಾಯಂದಿರು ತಮ್ಮ ಮಕ್ಕಳ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಮೊದಲಿನಲ್ಲಿ ಇಲ್ಲಿ ತೆಂಗಿನಕಾಯಿ ಮತ್ತು ಸಕ್ಕರೆಯಿಂದ ಮಾಡಿದ ಸರಳ ಪ್ರಸಾದ ನೀಡಲಾಗುತ್ತಿತ್ತು. ಆದರೆ ಮಕ್ಕಳು ಈ ಪ್ರಸಾದವನ್ನು ತಿನ್ನಲು ಆಸಕ್ತಿ ತೋರದ ಕಾರಣ, ದೇವಾಲಯ ಸಮಿತಿಯವರು ಮಕ್ಕಳಿಗೆ ಇಷ್ಟವಾಗುವ ಆಹಾರವನ್ನು ಪ್ರಸಾದವಾಗಿ ನೀಡಲು ನಿರ್ಧರಿಸಿದರು. ಅದರಂತೆ ಪಿಜ್ಜಾ, ಬರ್ಗರ್, ಸ್ಯಾಂಡ್‌ವಿಚ್ ಮತ್ತು ಪಾನಿಪುರಿ ಪ್ರಸಾದವಾಗಿ ನೀಡಲಾಗುತ್ತಿದೆ. ಭಕ್ತರು ಈ ಆಹಾರವನ್ನು ತಂದು ದೇವಿಗೆ ನೈವೇದ್ಯವಾಗಿ ಅರ್ಪಿಸಿ ನಂತರ ಮಕ್ಕಳಿಗೆ ಹಂಚುತ್ತಾರೆ.
ಚೆನ್ನೈ ಪಡಪ್ಪೈ ಜೈ ದುರ್ಗಾ ಪೀಠಂ ದೇವಾಲಯದಲ್ಲೂ ಇದೇ ಪದ್ಧತಿ
ಚೆನ್ನೈ ಬಳಿಯ ಪಡಪ್ಪೈನಲ್ಲಿರುವ ಜೈ ದುರ್ಗಾ ಪೀಠಂ ದೇವಾಲಯವನ್ನು ಹರ್ಬಲ್ ಆಂಕೋಲಜಿಸ್ಟ್ ಡಾ. ಕೆ. ಶ್ರೀಧರ್ ಸ್ಥಾಪಿಸಿದ್ದಾರೆ. ಇಲ್ಲಿ ಸಹ ಪಿಜ್ಜಾ, ಬರ್ಗರ್, ಪಾನಿಪುರಿ, ತಂಪು ಪಾನೀಯಗಳನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ.
ಭಕ್ತರು ತಮ್ಮ ಮಕ್ಕಳ ಹುಟ್ಟುಹಬ್ಬಗಳನ್ನು ದೇವಾಲಯದಲ್ಲಿ ಆಚರಿಸಲು ಸಹ ಅವಕಾಶವಿದ್ದು, ಕೇಕ್ ಕಟ್ ಮಾಡಿ ಪ್ರಸಾದವಾಗಿ ಹಂಚಬಹುದು. ಎಲ್ಲಾ ಆಹಾರ ಪದಾರ್ಥಗಳನ್ನು ದೇವಾಲಯದ ಅಡುಗೆಮನೆಯಲ್ಲಿ ಸ್ವಚ್ಛತೆಯಿಂದ ತಯಾರಿಸಲಾಗುತ್ತದೆ.
ಈ ಸಂಪ್ರದಾಯದ ಹಿಂದೆ ಇರುವ ಕಾರಣ
ಇರುವುದೇನಂದರೆ—ಮಕ್ಕಳು ಸಾಂಪ್ರದಾಯಿಕ ಪ್ರಸಾದವನ್ನು ಇಷ್ಟಪಡದ ಸಂದರ್ಭಗಳಲ್ಲಿ, ಅವರು ದೇವಾಲಯಕ್ಕೆ ಬರಲು ಆಸಕ್ತಿ ತೋರಲಿಲ್ಲ. ಆದ್ದರಿಂದ ಮಕ್ಕಳಿಗೆ ಸಂತೋಷವಾಗುವಂತೆ, ಅವರು ದೇವಾಲಯಕ್ಕೆ ಆಕರ್ಷಿತರಾಗುವಂತೆ, “ದೇವಿಯು ಆಧುನಿಕ ಮಕ್ಕಳ ಆಹಾರವನ್ನೂ ಸ್ವೀಕರಿಸುತ್ತಾಳೆ” ಎಂಬ ನಂಬಿಕೆಯನ್ನು ರೂಪಿಸಲಾಗಿದೆ.
ಇದರ ಮೂಲಕ ತಾಯಿ ಮಾಡಿದ ಪ್ರತಿಜ್ಞೆ ಈಡೇರುವುದೂ ಆಗಿ, ಮಕ್ಕಳು ಮಂದಿರಕ್ಕೆ ಹರ್ಷದಿಂದ ಆಗಮಿಸುತ್ತಾರೆ ಎಂದು ದೇವಾಲಯ ಆಯಾ ಸಮಿತಿಗಳು ತಿಳಿಸಿವೆ.






