---Advertisement---

ಬಿಗ್ ಬಾಸ್ ಕನ್ನಡ: ಮುಚ್ಚುಮರೆ ಇಲ್ಲದೇ 3 ರಿಲೇಷನ್ಶಿಪ್ ಬಗ್ಗೆ ನಿಜ ಹೇಳಿದ ಸೂರಜ್ ಸಿಂಗ್

On: December 29, 2025 3:11 PM
Follow Us:
---Advertisement---

ಬಿಗ್ ಬಾಸ್ ಕನ್ನಡ ಸೀಸನ್ 12 (BBK 12) ಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದ ಸೂರಜ್ ಸಿಂಗ್ ಅವರು ನಿಜ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿಕೊಂಡಿದ್ದಾರೆ. ಬಿಗ್ ಬಾಸ್ ವೇದಿಕೆ ಅವರಿಗೆ ದೊಡ್ಡ ಮಟ್ಟದ ಖ್ಯಾತಿಯನ್ನು ತಂದುಕೊಟ್ಟಿದ್ದು, ಇದೀಗ ಅವರು ಎಲಿಮಿನೇಟ್ ಆಗಿ ದೊಡ್ಮನೆಯಿಂದ ಹೊರಬಂದಿದ್ದಾರೆ.
ಟಿವಿ9 ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಬದುಕಿನ ಹಲವು ಆಸಕ್ತಿದಾಯಕ ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ವೇಳೆ ತಮ್ಮ ರಿಲೇಷನ್‌ಶಿಪ್ ಕುರಿತು ಕೂಡ ಮಾತನಾಡಿದ ಸೂರಜ್ ಸಿಂಗ್, “ಈಗ ನನಗೆ ಯಾರೂ ಲವರ್ ಇಲ್ಲ. ಇದುವರೆಗೆ ಮೂರು ರಿಲೇಷನ್‌ಶಿಪ್‌ಗಳಲ್ಲಿ ಇದ್ದೇನೆ. ಸತ್ಯವಾಗಿ ಹೇಳಬೇಕೆಂದರೆ, ಕಳೆದ 10–12 ವರ್ಷಗಳಲ್ಲಿ ಮೊದಲ ಎರಡು ರಿಲೇಷನ್‌ಶಿಪ್‌ಗಳು ಹೆಚ್ಚು ಗಂಭೀರವಾಗಿರಲಿಲ್ಲ. ಮೂರನೆಯದು ಸೀರಿಯಸ್ ಆಗಿತ್ತು, ಆದರೆ ಕೆಲವು ಕಾರಣಗಳಿಂದ ಅದು ಮುರಿದುಹೋಯಿತು” ಎಂದು ಹೇಳಿದ್ದಾರೆ.

Join WhatsApp

Join Now

RELATED POSTS

Leave a Comment