ಸೂಪರ್ ಹಿಟ್ ಚಿತ್ರ ‘ಸು ಫ್ರಮ್ ಸೋ’ ಕುದುರೆಯ ಹಾಗೆ ಓಡುತ್ತಿದೆ. ದಿನದಿಂದ ದಿನಕ್ಕೆ ಈ ಸಿನಿಮಾದ ಕಲೆಕ್ಷನ್ ಜಾಸ್ತಿ ಆಗುತ್ತಲೇ ಇದೆ. ಹಾರರ್ ಕಾಮಿಡಿ ಕಹಾನಿ ಇರುವ ಈ ಚಿತ್ರವನ್ನು ಪ್ರೇಕ್ಷಕರು ತುಂಬಾ ಇಷ್ಟಪಟ್ಟಿದ್ದಾರೆ.
ವಿಶೇಷವಾಗಿ ಫ್ಯಾಮಿಲಿ ಪ್ರೇಕ್ಷಕರು ಬಂದು ಸಿನಿಮಾ ನೋಡುತ್ತಿದ್ದಾರೆ. ಮತ್ತೆ ಮತ್ತೆ ಸಿನಿಮಾ ನೋಡುವವರ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ‘ಸು ಫ್ರಮ್ ಸೋ’ ಸಿನಿಮಾಗೆ ಎರಡನೇ ಶನಿವಾರ ಕೂಡ ಉತ್ತಮ ಕಲೆಕ್ಷನ್ ಆಗಿದೆ. ಹೊಸ ಸಿನಿಮಾಗಳ ಪೈಪೋಟಿ ನಡುವೆಯೂ ಈ ಸಿನಿಮಾ ಕಮಾಲ್ ಮಾಡುತ್ತಿದೆ.
‘ಸು ಫ್ರಮ್ ಸೋ’ ಸಿನಿಮಾಗೆ ಪ್ರೇಕ್ಷಕರಿಂದ ಬಾಯಿ ಮಾತಿನ ಪ್ರಚಾರ ಅತ್ಯುತ್ತಮವಾಗಿ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ಈ ಸಿನಿಮಾದ ಬಗ್ಗೆ ಮನಸಾರೆ ಹೊಗಳಿ ಮಾತನಾಡುತ್ತಿದ್ದಾರೆ. ಅಚ್ಚರಿ ಏನೆಂದರೆ, ಮೊದಲ ವಾರ ಸಿನಿಮಾ ನೋಡಲು ಎಷ್ಟೋ ಮಂದಿಗೆ ಟಿಕೆಟ್ ಸಿಕ್ಕಿಲ್ಲ! ಅಂಥವರೆಲ್ಲ 2ನೇ ವಾರಕ್ಕಾಗಿ ಕಾದು ಈಗ ಸಿನಿಮಾ ನೋಡುತ್ತಿದ್ದಾರೆ. ಅದರ ಪರಿಣಾಮವಾಗಿ ‘ಸು ಫ್ರಮ್ ಸೋ’ ಸಿನಿಮಾಗೆ ಎರಡನೇ ಶನಿವಾರ ಅಂದರೆ, ಆಗಸ್ಟ್ 2ರಂದು ಭರ್ಜರಿ ಕಲೆಕ್ಷನ್ ಆಗಿದೆ.
ಸು ಫ್ರಮ್ ಸೋ ಒಟ್ಟು ಕಲೆಕ್ಷನ್ Su From So collection
ವರದಿ ಪ್ರಕಾರ ಆಗಸ್ಟ್ 2ರಂದು ‘ಸು ಫ್ರಮ್ ಸೋ’ ಸಿನಿಮಾ ಬರೋಬ್ಬರಿ 5.91 ಕೋಟಿ ರೂಪಾಯಿ ಗಳಿಕೆ ಮಾಡಿದೆ! ಅಲ್ಲಿಗೆ 9 ದಿನಕ್ಕೆ ಈ ಚಿತ್ರದ ಒಟ್ಟು ಕಲೆಕ್ಷನ್ 29.81 ಕೋಟಿ ರೂಪಾಯಿ ಆಗಿದೆ. ಮಲಯಾಳಂ ವರ್ಷನ್ ಕಲೆಕ್ಷನ್ ಕೂಡ ಸೇರಿಸಿದರೆ 30.02 ಕೋಟಿ ರೂಪಾಯಿ ಆಗಲಿದೆ. ಅಲ್ಲದೇ, ವಿದೇಶದಲ್ಲಿ ಕೂಡ ಈ ಸಿನಿಮಾ ಅತ್ಯುತ್ತಮವಾಗಿ ಪ್ರದರ್ಶನ ಕಾಣುತ್ತಿದೆ.
ಜೆಪಿ ತುಮಿನಾಡು ಅವರು ‘ಸು ಫ್ರಮ್ ಸೋ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಾಜ್ ಬಿ. ಶೆಟ್ಟಿ, ಜೆಪಿ ತುಮಿನಾಡು, ಸಂದ್ಯಾ ಅರಕೆರೆ, ಪ್ರಕಾಶ್ ತುಮಿನಾಡು, ಶನೀಲ್ ಗೌತಮ್, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್ ಸೇರಿದಂತೆ ಹಲವರು ‘ಸು ಫ್ರಮ್ ಸೋ’ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಶೀಘ್ರದಲ್ಲೇ ಹಿಂದಿ ಮತ್ತು ತೆಲುಗಿನಲ್ಲಿ ಕೂಡ ಈ ಸಿನಿಮಾ ಬಿಡುಗಡೆ ಆಗಲಿದೆ.
1 thought on “ಅತ್ಯುತ್ತಮ ಬಾಕ್ಸ್ ಆಫೀಸ್ ಕಲೆಕ್ಷನ್‌ನೊಂದಿಗೆ ‘ಸು ಫ್ರಮ್ ಸೋ’ ಇಲ್ಲಿಯವರೆಗೆ ಕಲೆಕ್ಷನ್ ಎಷ್ಟು ಗೊತ್ತಾ? Su From So box office collection”