ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ತಾರೆಯಾದ ಸ್ಮೃತಿ ಮಂಧಾನಾ ಅವರ ವಿವಾಹ ಸಮಾರಂಭ ಭಾನುವಾರ ತುರ್ತುವಾಗಿ ಮುಂದೂಡಬೇಕಾಯಿತು. ಸ್ಮೃತಿ ಅವರ ತಂದೆಯಲ್ಲಿ ಹೃದಯಾಘಾತದಂತೆ ತೋರುವ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ತಕ್ಷಣ ಆಂಬ್ಯುಲೆನ್ಸ್ನ್ನು ಮದುವೆ ಸ್ಥಳಕ್ಕೆ ಕರೆದೊಯ್ಯಲಾಯಿತು ಮತ್ತು ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಅನಿರೀಕ್ಷಿತ ವೈದ್ಯಕೀಯ ಪರಿಸ್ಥಿತಿಯಿಂದಾಗಿ ಮದುವೆಯ ಸಂಭ್ರಮಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು, ತಂದೆಯ ಸಾನ್ನಿಧ್ಯವಿಲ್ಲದೆ ಕಾರ್ಯಕ್ರಮ ಮುಂದುವರಿಸುವುದಿಲ್ಲ ಎಂದು ಸ್ಮೃತಿ ಸ್ಪಷ್ಟಪಡಿಸಿದರು.
ಇದೇ ವೇಳೆ, ಸ್ಮೃತಿ ಅವರ ನಿಶ್ಚಿತ ವರ ಪಲಾಶ್ ಮುಚ್ಚಲ್ ಅವರಿಗೂ ಆರೋಗ್ಯ ತೊಂದರೆ ಕಾಣಿಸಿಕೊಂಡಿದ್ದು, ಅವರನ್ನು ಕೂಡ ಆಸ್ಪತ್ರೆಗೆ ಕರೆದೊಯ್ಯಬೇಕಾದ ಪರಿಸ್ಥಿತಿ ಉದ್ಭವಿಸಿದುದು ತಿಳಿದುಬಂದಿದೆ. ವೈರಲ್ ಸೋಂಕು ಹಾಗೂ ಹೆಚ್ಚಿದ ಆಮ್ಲೀಯತೆ ಕಾರಣವಾಗಿ ಪಲಾಶ್ ಚಿಕಿತ್ಸೆ ಪಡೆದಿದ್ದು, ಎನ್ಡಿಟಿವಿಗೆ ತಿಳಿದ ಮೂಲಗಳ ಪ್ರಕಾರ ಗಂಭೀರ ಸಮಸ್ಯೆಯಾಗಿರಲಿಲ್ಲ. ಅಗತ್ಯ ಚಿಕಿತ್ಸೆ ಪಡೆದ ಬಳಿಕ ಅವರು ಆಸ್ಪತ್ರೆಯಿಂದ ಹೋಟೆಲ್ಗೆ ಹಿಂತಿರುಗಿದ್ದಾರೆ.
ಸ್ಮೃತಿ ಮಂಧಾನಾ ಅವರ ತಂದೆಯ ಆರೋಗ್ಯ ಸ್ಥಿತಿ ಕುರಿತು ಕುಟುಂಬದ ವೈದ್ಯೆ ಡಾ. ನಮನ್ ಶಾ ಮಾಹಿತಿ ನೀಡಿದ್ದು, ವೈದ್ಯಕೀಯ ತಂಡ ನಿರಂತರವಾಗಿ ಅವರ ಆರೋಗ್ಯ ಏರುಪೇರನ್ನು ಪರಿಶೀಲಿಸುತ್ತಿದೆ ಎಂದರು. “ಅಗತ್ಯ ಮಟ್ಟದ ಸುಧಾರಣೆ ಕಂಡುಬಂದರೆ ಇಂದು ಸಂಜೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ” ಎಂದು ಅವರು ತಿಳಿಸಿದ್ದಾರೆ.
ತಂದೆಯ ಬಳಿಕ ಮದುಮಗ ಪಲಾಶ್ ಮುಚ್ಚಲ್ ಕೂಡ ಆಸ್ಪತ್ರೆಗೆ ದಾಖಲು!
By krutika naik
On: November 24, 2025 10:17 AM
---Advertisement---






