ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹೃದಯವಿದ್ರಾಹಕ ಘಟನೆೊಂದು ನಡೆದಿದೆ. ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಏರ್ ಗನ್ ಗುಂಡು ಸಿಡಿದು, ತಮ್ಮ ಕೈಯಿಂದಲೇ ಅಣ್ಣ ಮೃತಪಟ್ಟ ದಾರುಣ ಘಟನೆ ಇದು.
ಶಿರಸಿಯ ಸೋಮನಳ್ಳಿಯ ರಾಘವೇಂದ್ರ ಕೇಶವ ಹೆಗಡೆ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಉಂಡಿಯರ್ ಅವರ ಇಬ್ಬರು ಮಕ್ಕಳು ಆಟವಾಡುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಅಕಸ್ಮಿಕವಾಗಿ ಗುಂಡು ಹಾರುತ್ತಿದ್ದಂತೆಯೇ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಸಂತೋಷದ ಆಟವೇ ಕ್ಷಣಾರ್ಧದಲ್ಲಿ ದುಃಖದ ಘಟನೆಗೆ ಕಾರಣವಾಯಿತು.
ಬಸಪ್ಪ ರಾಘವೇಂದ್ರ ಕೇಶವ ಹೆಗಡೆಯವರ ತೋಟದಲ್ಲಿ ಆಳಾಗಿ ಕೆಲಸ ಮಾಡುತ್ತಿದ್ದು, ಮಂಗಗಳನ್ನು ಓಡಿಸಲು ರಾಘವೇಂದ್ರ ಅವರ ಏರ್ಗನ್ ಬಳಸುತ್ತಿದ್ದ.
ಮನೆಗೆ ಹಿಂತಿರುಗಿದ ಬಳಿಕ ಬಸಪ್ಪ ಉಂಡಿಯರ್ ಅವರ ಮಕ್ಕಳು ಮನೆಯ ಆವರಣದಲ್ಲಿ ಆಟವಾಡುತ್ತಿದ್ದರು. ಈ ವೇಳೆ 7 ವರ್ಷದ ಮಗುವಿನ ಕೈಯಿಂದ ಆಕಸ್ಮಿಕವಾಗಿ ಏರ್ಗನ್ ಗುಂಡು ಹಾರಿದ್ದು, ಅದರಿಂದ ಅಣ್ಣ ಕರಿಯಪ್ಪ (9) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.






