ದಿನೇ ದಿನೇ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಬೆಳ್ಳಿಗೂ (Silver) ಚಿನ್ನದಂತೆ ಹಾಲ್ಮಾರ್ಕ್ ಗುರುತು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಮನಿಕಂಟ್ರೋಲ್ ವರದಿ ಪ್ರಕಾರ, ಹಾಲ್ಮಾರ್ಕ್ ಗುರುತು ಹೊಂದಿರುವ ಬೆಳ್ಳಿ ವಸ್ತುಗಳನ್ನೇ ಮಾರಾಟ ಮಾಡುವಂತೆ ಶೀಘ್ರದಲ್ಲೇ ನಿಯಮ ಜಾರಿಗೆ ತರಬಹುದು.
ಇದನ್ನು ಓದಿ: ಕೇವಲ ಒಂದೇ ನಿಮಿಷದಲ್ಲಿ ವಾಟ್ಸಪ್ ಮೂಲಕ ಆಧಾರ್ ಕಾರ್ಡ್ ಡೌನ್ಲೋಡ ಮಾಡಿಕೋಳ್ಳುವುದು ಹೇಗೆ
ಈಗಾಗಲೇ ಚಿನ್ನಕ್ಕೆ ಹಾಲ್ಮಾರ್ಕ್ ಗುರುತು ಕಡ್ಡಾಯವಾಗಿದ್ದು, ಬೆಳ್ಳಿಗೂ ಹಾಲ್ಮಾರ್ಕಿಂಗ್ ಪ್ರಕ್ರಿಯೆ ನಡೆಯುತ್ತಿದರೂ ಅದು ಇನ್ನೂ ಕಡ್ಡಾಯವಾಗಿಲ್ಲ. ಆದರೆ ಗ್ರಾಹಕರಿಗೆ ನೈಜ ಹಾಗೂ ಪರಿಶುದ್ಧ ಬೆಳ್ಳಿ ವಸ್ತುಗಳು ಲಭ್ಯವಾಗುವಂತೆ ಈ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ.
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಅಧಿಕಾರಿಯೊಬ್ಬರು ಮಾಹಿತಿ ನೀಡಿರುವಂತೆ, ಬೆಳ್ಳಿ ಆಭರಣಗಳು ಮತ್ತು ಗಟ್ಟಿಗಳಿಗೆ ಈಗಾಗಲೇ ಹಾಲ್ಮಾರ್ಕ್ ಗುರುತು ಹಾಕಲಾಗುತ್ತಿದ್ದು, ಇದುವರೆಗೆ 20 ಲಕ್ಷಕ್ಕೂ ಅಧಿಕ ಬೆಳ್ಳಿ ವಸ್ತುಗಳಿಗೆ ಹಾಲ್ಮಾರ್ಕ್ ನೀಡಲಾಗಿದೆ. ಚಿನ್ನದ ಹಾಲ್ಮಾರ್ಕಿಂಗ್ ಕಡ್ಡಾಯಗೊಳಿಸುವ ಮುಂಚೆಯೂ ಸ್ವಯಂಪ್ರೇರಿತವಾಗಿ ಹಾಲ್ಮಾರ್ಕ್ ಹಾಕಲಾಗುತ್ತಿದ್ದುದನ್ನು ಉದಾಹರಣೆಯಾಗಿ ತೆಗೆದುಕೊಂಡು, ಬೆಳ್ಳಿಗೂ ಇದೇ ಮಾದರಿಯಲ್ಲಿ ಕಡ್ಡಾಯ ನಿಯಮ ಜಾರಿಗೆ ತರಲು ಸಾಧ್ಯತೆ ಇದೆ.
ಬೆಳ್ಳಿಗೆ ಹಾಲ್ಮಾರ್ಕ್ ಹೇಗೆ ಪಡೆಯಬಹುದು?
ಸರ್ಕಾರ ಬೆಳ್ಳಿಗೆ ಹಾಲ್ಮಾರ್ಕ್ ಕಡ್ಡಾಯಗೊಳಿಸಿದ ನಂತರ, ಮಾರಾಟವಾಗುವ ಎಲ್ಲಾ ಬೆಳ್ಳಿ ವಸ್ತುಗಳಲ್ಲೂ ಹಾಲ್ಮಾರ್ಕ್ ಇರಲಿದೆ. ಈಗಾಗಲೇ ಖರೀದಿಸಿರುವ ಬೆಳ್ಳಿ ಆಭರಣಗಳಿಗೆ ಹಾಲ್ಮಾರ್ಕ್ ಇಲ್ಲದಿದ್ದರೂ, ಅದನ್ನು ಪಡೆಯಲು ಅವಕಾಶವಿರುತ್ತದೆ.
ಗ್ರಾಹಕರು ತಮ್ಮ ಸಮೀಪದ ಬಿಐಎಸ್ ಮಾನ್ಯತೆ ಪಡೆದ ಅಸ್ಸಾಯಿಂಗ್ ಮತ್ತು ಹಾಲ್ಮಾರ್ಕಿಂಗ್ ಸೆಂಟರ್‌ಗಳಿಗೆ (AHC) ಭೇಟಿ ನೀಡಿ, ಚಿನ್ನದಂತೆ ಬೆಳ್ಳಿ ವಸ್ತುಗಳ ಶುದ್ಧತೆ ಪರೀಕ್ಷೆ ಮಾಡಿಸಬಹುದು. ಪ್ರತಿ ವಸ್ತುವಿಗೆ 45 ರೂ ಶುಲ್ಕ ವಿಧಿಸಲಾಗುತ್ತದೆ. ಪರೀಕ್ಷೆಯ ನಂತರ ಬೆಳ್ಳಿಯ ಶುದ್ಧತೆ ವಿವರದೊಂದಿಗೆ 6 ಅಂಕಿಯ ಎಚ್‌ಯುಐಡಿ ಸಂಖ್ಯೆ, ಬಿಐಎಸ್ ಲೋಗೋ ಸೇರಿದಂತೆ ಹಾಲ್ಮಾರ್ಕ್ ಗುರುತನ್ನು ವಸ್ತುವಿನ ಮೇಲೆ ಮುದ್ರಿಸಲಾಗುತ್ತದೆ.
ಕಳೆದ ಒಂದೆರಡು ವರ್ಷಗಳಿಂದ ಬೆಳ್ಳಿಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಆಭರಣಗಳ ಜೊತೆಗೆ ಹಲವು ಕೈಗಾರಿಕೆಗಳಲ್ಲಿ ಬೆಳ್ಳಿ ಬಳಕೆಯಾಗುತ್ತಿರುವುದರಿಂದ, ಚಿನ್ನಕ್ಕಿಂತಲೂ ವೇಗವಾಗಿ ಬೆಳ್ಳಿ ಬೆಲೆ ಏರಿಕೆಯಾಗುತ್ತಿದೆ.






