ಪೋಷಕರು ಬೈದಿದ್ದಕ್ಕೆ ಬೇಸರಗೊಂಡು 13 ವರ್ಷದ ಬಾಲಕಿ ತನ್ನ 9 ವರ್ಷದ ತಮ್ಮನೊಂದಿಗೆ ಮನೆ ಬಿಟ್ಟು ಹೋಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಉಚಿತ ಬಸ್‌ಗಳಲ್ಲಿ ಸುತ್ತಾಡಿದ ಅಚ್ಚರಿಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ನಗರದ ಮಾರತ್ತಹಳ್ಳಿಯ ಅಶ್ವತ್ಥನಗರ ನಿವಾಸಿಗಳಾದ ಈ ಅಕ್ಕ–ತಮ್ಮ, ಟ್ಯೂಷನ್‌ಗೆ ಹೋಗಿಲ್ಲ ಎಂಬ ಕಾರಣಕ್ಕೆ ಪೋಷಕರು ಗದರಿಸಿದ ಬಳಿಕ ಮನೆಬಿಟ್ಟು ಹೊರಟಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯ ಲಾಭ ಪಡೆದು, ಬಾಲಕಿ ಆಧಾರ್ ಕಾರ್ಡ್ ಬಳಸಿ ಉಚಿತವಾಗಿ ಪ್ರಯಾಣಿಸಿದ್ದಾಳೆ. ತಮ್ಮನಿಗೆ ಟಿಕೆಟ್ ಮಾಡದೆ ಕರೆದೊಯ್ದಿದ್ದಳು ಎನ್ನಲಾಗಿದೆ.
ಇದನ್ನು ಓದಿ: KSRTC ಬಸ್‌ನಲ್ಲಿ ಬೆಕ್ಕಿನ ಮರಿಗೂ ಟಿಕೆಟ್; ನಿರ್ವಾಹಕ
ಇದನ್ನು ಓದಿ: ಶಕ್ತಿ ಯೋಜನೆ ದುರ್ಬಳಕೆಗೆ ಯತ್ನ: ಬೇರೊಬ್ಬರ ಆಧಾರ್ ಕಾರ್ಡ್ ತೋರಿಸಿ ಉಚಿತ ಬಸ್ ಪ್ರಯಾಣಕ್ಕೆ ಪ್ರಯತ್ನ
ಇದನ್ನು ಓದಿ: ಶಕ್ತಿ ಯೋಜನೆಯೇ ಬಂಡವಾಳ, ಮಹಿಳೆಯರೇ ಟಾರ್ಗೆಟ್ : ಕಳ್ಳಿಯರ ಗ್ಯಾಂಗ್‌ನ್ನು ಬಂಧಿಸಿದ ಖಾಕಿ
ಅಕ್ಕ–ತಮ್ಮ ಮೊದಲಿಗೆ ಮಾರತ್ತಹಳ್ಳಿಯಿಂದ ಮೆಜೆಸ್ಟಿಕ್‌ಗೆ ತೆರಳಿ, ಅಲ್ಲಿಂದ ಶಿವಮೊಗ್ಗ ಮತ್ತು ಚಿತ್ರದುರ್ಗ ಕಡೆಗೆ ಬಸ್ ಮೂಲಕ ಪ್ರಯಾಣಿಸಿದ್ದಾರೆ. ಮಕ್ಕಳು ಮನೆಗೆ ಮರಳದ ಕಾರಣ ಆತಂಕಗೊಂಡ ಪೋಷಕರು ಅವರನ್ನು ಹುಡುಕಾಡಿ, ನಂತರ HAL ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು.
ದೂರು ದಾಖಲಾದ ತಕ್ಷಣ ಪೊಲೀಸರು ಶೋಧ ಕಾರ್ಯ ಆರಂಭಿಸಿದರು. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮಕ್ಕಳು ಬ್ಯಾಗ್ ಹಿಡಿದು ಮನೆ ಹೊರಟು ಮಾರತ್ತಹಳ್ಳಿ ಬ್ರಿಡ್ಜ್ ಸ್ಕೈವಾಕ್ ಮೂಲಕ ಮೆಜೆಸ್ಟಿಕ್ ಕಡೆ ತೆರಳಿರುವುದು ದೃಢಪಟ್ಟಿತು. ಈ ಮಾಹಿತಿ ಆಧರಿಸಿ ರಾಜ್ಯಾದ್ಯಂತ ಪೊಲೀಸರಿಗೆ ಅಲರ್ಟ್ ನೀಡಲಾಗಿತ್ತು. ಜೊತೆಗೆ ಮಕ್ಕಳ ಫೋಟೋ ಮತ್ತು ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಂಚಲಾಗಿತ್ತು.
ಈ ನಡುವೆ ಭದ್ರಾವತಿಯಲ್ಲಿ ಸಾರ್ವಜನಿಕರ ಗಮನಕ್ಕೆ ಈ ಮಕ್ಕಳು ಬಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಮಾಹಿತಿಯನ್ನು ಗಮನಿಸಿದ ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸರು ಮಕ್ಕಳನ್ನು ರಕ್ಷಿಸಿ, ವಿಷಯವನ್ನು HAL ಠಾಣೆಗೆ ತಿಳಿಸಿದರು.
ಇದನ್ನು ಓದಿ: ಸರಪಂಚ ಚುನಾವಣೆಯಲ್ಲಿ ಸ್ಪರ್ಧಿಸುವ ಹಂಬಲಕ್ಕೆ ಆರು ವರ್ಷದ ಮಗಳನ್ನೇ ಕೊಂದ ತಂದೆ…!
ಅಂತಿಮವಾಗಿ ಭದ್ರಾವತಿಯಿಂದ ಬೆಂಗಳೂರಿನ HAL ಠಾಣೆಗೆ ಅಕ್ಕ–ತಮ್ಮನನ್ನು ಕರೆತಂದು, ಪೋಷಕರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ. ಈ ಘಟನೆ ಮಕ್ಕಳ ಮೇಲಿನ ಗಮನ, ಸಂಭಾಷಣೆ ಮತ್ತು ಪೋಷಕರ ಜಾಗೃತೆಯ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.
ಇದನ್ನು ಓದಿ: ಬಸ್ನಲ್ಲಿ ಮಹಿಳೆಗೆ ಸ್ಪರ್ಶದ ಆರೋಪ, ವೀಡಿಯೊ ವೈರಲ್… ಮನನೊಂದ ವ್ಯಕ್ತಿ ಆತ್ಮಹತ್ಯೆ…!





