ಹುಡುಗಿಯರ ಗಮನ ಸೆಳೆಯಲು ದೊಡ್ಡ ಬೈಸೆಪ್ಸ್ ಬೇಕೆಂಬ ಹುಚ್ಚಿನಲ್ಲಿ, ತನ್ನ ತೋಳುಗಳಿಗೆ ಎಣ್ಣೆ ಮತ್ತು ಪೆಟ್ರೋಲಿಯಂ ಜೆಲ್ಲಿಯನ್ನು ವರ್ಷಗಟ್ಟಲೆ ಇಂಜೆಕ್ಟ್ ಮಾಡಿಸಿಕೊಂಡಿದ್ದ ರಷ್ಯಾದ ಕಿರಿಲ್ ಟೆರಿಶಿನ್ (Kirill Tereshin) ಇದೀಗ ಗಂಭೀರ ಆರೋಗ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. “ರಷ್ಯನ್ ಪೋಪೈ” ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧನಾಗಿದ್ದ ಈ ಯುವಕ, ಈಗ ಎರಡೂ ಕೈಗಳನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾನೆ.
ಬೈಸೆಪ್ಸ್‌ಗೆ ಎಣ್ಣೆ–ಜೆಲ್ಲಿ ತುಂಬಿದ ‘ರಷ್ಯನ್ ಪೋಪೈ’
2017ರಲ್ಲಿ ಪಪ್ಪಾಯ್ ಕಾರ್ಟೂನ್ ಪಾತ್ರದಂತಿರುವ ದೊಡ್ಡ ಬೈಸೆಪ್ಸ್ ಪಡೆಯಲು ಟೆರಿಶಿನ್ ತೋಳುಗಳಿಗೆ ತರಕಾರಿ ಎಣ್ಣೆ, ಬಳಿಕ ಪೆಟ್ರೋಲಿಯಂ ಜೆಲ್ಲಿ ಚುಚ್ಚಿಕೊಳ್ಳಲು ಆರಂಭಿಸಿದ್ದರು. balloon ತರಹ ಉಬ್ಬಿದ ತೋಳುಗಳ ಕಾರಣಕ್ಕೆ “ಬಾಝೂಕಾ ಹ್ಯಾಂಡ್ಸ್” ಅಡ್ಡಹೆಸರು ಕೂಡ ಪಡೆದಿದ್ದರು.
“ಸುಂದರ ಹುಡುಗಿಯರನ್ನು ಸೆಳೆಯಲು ನನಗೆ ಏನಾದರೂ ವಿಶೇಷ ಬೇಕಿತ್ತು. ನನ್ನ ಉಬ್ಬಿದ ಬೈಸೆಪ್ಸ್‌ನಿಂದಲೇ ಹುಡುಗಿಯರ ಗಮನ ಸಿಕ್ಕಿತು,” ಎಂದು ಅವರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.
ಶರೀರದಲ್ಲಿ ಗಂಭೀರ ಹಾನಿ
ಆದರೆ ಈ ಅಸುರಕ್ಷಿತ ಜಲ್/ಎಣ್ಣೆ ಇಂಜೆಕ್ಷನ್‌ಗಳು ಅವರ ದೇಹಕ್ಕೆ ಭಾರೀ ಪ್ರಹಾರ ನೀಡಿವೆ:
ತೋಳುಗಳ ಸ್ನಾಯುಗಳ ಮೇಲೆ ಗಟ್ಟಿಯಾದ ಒತ್ತಡ ರಕ್ತಪರಿಚಲನೆ ಮತ್ತು ಆಮ್ಲಜನಕ ಪೂರೈಕೆಯಲ್ಲಿ ಕಡಿತ ಗೆಡ್ಡೆಗಳು ಬೆಳೆಯುವುದು ತೀವ್ರ ಸ್ನಾಯು ದೌರ್ಬಲ್ಯ ಸೋಂಕು ರಕ್ತದಲ್ಲಿ ಹರಡಿ ಸೆಪ್ಸಿಸ್ ಮೂತ್ರಪಿಂಡ ಹಾನಿ
ಶಸ್ತ್ರಚಿಕಿತ್ಸೆಗಳ ಮೂಲಕ ಕೆಲವು ಜೆಲ್ಲಿಯನ್ನು ತೆಗೆಯಲು ಪ್ರಯತ್ನಿಸಿದರೂ, ಸ್ನಾಯುಗಳೊಳಗೆ ಜಮುಕಿರುವ ಹೆಚ್ಚಿನ ಪ್ರಮಾಣದ ಜೆಲ್ಲಿಯನ್ನು ಸಂಪೂರ್ಣವಾಗಿ ತೆಗೆದುಹಾಕಲು ವೈದ್ಯರಿಗೆ ಸಾಧ್ಯವಾಗಿಲ್ಲ.
ಎರಡೂ ಕೈ ಕತ್ತರಿಸಬೇಕಾದ ಗಂಭೀರ ಪರಿಸ್ಥಿತಿ
ರಷ್ಯಾದ ವೈದ್ಯಕೀಯ ವರದಿಗಳ ಪ್ರಕಾರ, ಸೋಂಕು ಮತ್ತು necrosis (ಸ್ನಾಯುಣಾಶ) ವೇಗವಾಗಿ ವಿಸ್ತರಿಸುತ್ತಿದ್ದು, ಕೈಗಳನ್ನು ಉಳಿಸುವ ಸಾಧ್ಯತೆ ದಿನೇದಿನೇ ಕಡಿಮೆಯಾಗುತ್ತಿದೆ. ಸೋಂಕು ದೇಹದ ಇತರ ಭಾಗಗಳಿಗೆ ಹರಡುವ ಮುನ್ನವೇ ಕೈಗಳನ್ನು ಕತ್ತರಿಸುವುದು (double amputation) ಅಂತಿಮ ಪರಿಹಾರವಾಗಬಹುದು ಎಂದು ವೈದ್ಯರು ಸೂಚಿಸಿದ್ದಾರೆ.
ಅತಿ ದೊಡ್ಡ ಬೈಸೆಪ್ಸ್ ಹುಡುಕಿದ್ದ ಯುವಕ, ಜೀವವನ್ನೇ ಪಣಕ್ಕಿಟ್ಟ ಪರಿಸ್ಥಿತಿ
ಸ್ಥೂಲವಾಗಿ muscular look ಪಡೆಯಲು instant shortcut ಹುಡುಕಿದ ಟೆರಿಶಿನ್ ಇದೀಗ ತನ್ನ ಜೀವಕ್ಕೂ ಹಾನಿಯಾಗುವಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. “ಸಾಮಾನ್ಯ ವ್ಯಾಯಾಮಕ್ಕಿಂತ ಬೇಗನೆ ಫಲ” ಪಡೆಯಬೇಕಿದ್ದ ಬಯಕೆ, ಇದೀಗ ಎರಡೂ ಕೈ ಕಳೆದುಕೊಳ್ಳುವ ಭೀತಿ ಆಗಿ ಮಾರ್ಪಟ್ಟಿದೆ.






