ಯಶ್ ನಟಿಸಿ, ಸಹ ನಿರ್ಮಾಣ ಮಾಡುತ್ತಿರುವ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಚಿತ್ರದ ಪ್ರಚಾರಕ್ಕೆ ನಿಧಾನವಾಗಿ ಚಾಲನೆ ದೊರಕಿದ್ದು, ಅದರ ಭಾಗವಾಗಿ ಸಿನಿಮಾದಲ್ಲಿ ನಟಿಸಿರುವ ನಟಿಯರ ಕ್ಯಾರೆಕ್ಟರ್ ಪೋಸ್ಟರ್‌ಗಳನ್ನು ಒಂದೊಂದಾಗಿ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಅವರ ಪೋಸ್ಟರ್‌ಗಳು ಬಿಡುಗಡೆಯಾಗಿದ್ದು, ಇದೀಗ ನಟಿ ರುಕ್ಮಿಣಿ ವಸಂತ್ ಅವರ ಕ್ಯಾರೆಕ್ಟರ್ ಪೋಸ್ಟರ್ ಕೂಡ ಬಹಿರಂಗಗೊಂಡಿದೆ.
ಇದನ್ನು ಓದಿ: ವಿವಾಹಿತೆಗೆ ಬೇರೊಂದು ಸಂಬಂಧದಿಂದ ಮಗು ಹುಟ್ಟಿದರೆ ಅಪ್ಪ ಯಾರು? ಸುಪ್ರೀಂಕೋರ್ಟ್ ಮಹತ್ವದ ತೀರ್ಪು
‘ಟಾಕ್ಸಿಕ್’ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅವರ ಪಾತ್ರದ ಹೆಸರು ಮೆಲಿಸಾ. ಯಾವುದೋ ಪಾರ್ಟಿ ಹಿನ್ನೆಲೆಯ ನಡುವೆ ಗಂಭೀರವಾಗಿ ನಡೆದು ಬರುತ್ತಿರುವ ದೃಶ್ಯ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದೆ. ತಾರಾ ಸುತಾರಿಯಾ ಪಾತ್ರ ಕೈಯಲ್ಲಿ ಬಂದೂಕು ಹಿಡಿದಿರುವುದಕ್ಕೆ ಭಿನ್ನವಾಗಿ, ರುಕ್ಮಿಣಿ ಕೈಯಲ್ಲಿ ಪರ್ಸ್ ಹಿಡಿದುಕೊಂಡಿರುವುದು ಗಮನ ಸೆಳೆಯುತ್ತಿದ್ದು, ಅವರ ಪಾತ್ರ ರಫ್ ಆಂಡ್ ಟಫ್ ಅಲ್ಲದಿದ್ದರೂ ಬಲು ಗಂಭೀರ ಮತ್ತು ಪ್ರಭಾವಶಾಲಿಯಾಗಿರಲಿದೆ ಎಂಬ ಊಹೆಗೆ ದಾರಿ ಮಾಡಿಕೊಡುತ್ತದೆ.
‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್ ದಾಸ್ ನಿರ್ದೇಶನ ಮಾಡಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಯಶ್ ಅವರು ತಮ್ಮ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದು, ಕೆಲ ವಿದೇಶಿ ತಂತ್ರಜ್ಞರೂ ಈ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿದ್ದಾರೆ.
ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಸೇರಿದಂತೆ ಪ್ರಮುಖ ತಾರಾಗಣ ಹೊಂದಿರುವ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ತೆರೆಕಾಣಲಿದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್‌ಗಳು ಚಿತ್ರದ ಕುರಿತ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿವೆ.







1 thought on “ಟಾಕ್ಸಿಕ್ ಹೊಸ ಅವತಾರದಲ್ಲಿ ರುಕ್ಮಿಣಿ ವಸಂತ್, ಪಾತ್ರದ ಕುರಿತು ಹೆಚ್ಚಿದ ಕುತೂಹಲ..!”
Comments are closed.