---Advertisement---

ನಟಿ ರಮ್ಯಾ ಕೃಷ್ಣನ್ ಡಿವೋರ್ಸ್? ವದಂತಿಗೆ ಸ್ಪಷ್ಟನೆ ನೀಡಿದ ಗಂಡ ಕೃಷ್ಣ ವಂಶಿ

On: January 5, 2026 7:07 PM
Follow Us:
---Advertisement---

ಸೌತ್ ಸಿನಿಮಾರಂಗದ ಖ್ಯಾತ ನಟಿ ರಮ್ಯಾ ಕೃಷ್ಣನ್ ಹಾಗೂ ನಿರ್ದೇಶಕ ಕೃಷ್ಣ ವಂಶಿ ಅವರ ವಿಚ್ಛೇದನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವರ್ಷಗಳಿಂದ ವದಂತಿಗಳು ಹರಿದಾಡುತ್ತಿವೆ. ಈ ವಿಚಾರದ ಬಗ್ಗೆ ಇದೀಗ ಮೊದಲ ಬಾರಿಗೆ ಕೃಷ್ಣ ವಂಶಿ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ : ಕನಸಿನಲ್ಲಿ ದೇವರು ಬಂದಿದ್ದಾನೆ ಎಂದ ಬಾಲಕ: ದಿಬ್ಬ ಅಗೆದಾಗ ಪತ್ತೆಯಾದ ಪಂಚಲೋಹದ ವಿಗ್ರಹಗಳು..!

ಕನ್ನಡ, ತಮಿಳು, ತೆಲುಗು ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ರಮ್ಯಾ ಕೃಷ್ಣನ್, ಬಾಹುಬಲಿ ಚಿತ್ರದ ರಾಜಮಾತೆ ಶಿವಗಾಮಿ ಪಾತ್ರದ ಮೂಲಕ ದೇಶವ್ಯಾಪಿ ಜನಪ್ರಿಯತೆ ಗಳಿಸಿದ್ದರು. ವೃತ್ತಿಜೀವನದಲ್ಲಿ ಯಶಸ್ಸಿನ ಶಿಖರದಲ್ಲಿರುವ ಈ ನಟಿಯ ವೈಯಕ್ತಿಕ ಜೀವನ ಇತ್ತೀಚೆಗೆ ಮತ್ತೆ ಚರ್ಚೆಗೆ ಬಂದಿದೆ.

ರಮ್ಯಾ ಕೃಷ್ಣನ್ ಅವರು ನಿರ್ದೇಶಕ ಕೃಷ್ಣ ವಂಶಿಯನ್ನು ಪ್ರೀತಿಸಿ 2003ರಲ್ಲಿ ಕುಟುಂಬಸ್ಥರ ಒಪ್ಪಿಗೆಯೊಂದಿಗೆ ವಿವಾಹವಾಗಿದ್ದರು. ಮದುವೆಯಾದ ಬಳಿಕವೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿಯೇ ಮುಂದುವರೆದಿದ್ದಾರೆ. ಈ ದಂಪತಿಗೆ ರಿತ್ವಿಕ್ ಎಂಬ ಮಗನಿದ್ದು, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಇಬ್ಬರೂ ಸಾರ್ವಜನಿಕವಾಗಿ ಹೆಚ್ಚು ಮಾತನಾಡುವುದಿಲ್ಲ.

ಇದನ್ನು ಓದಿ: ಮಹಿಳೆಯರ ಪರ ನಿಲ್ಲುತ್ತೇನೆ ಎಂದಿದ್ದ ಅಶ್ವಿನಿ ಗೌಡ ವಿರುದ್ಧ ಆಕ್ರೋಶ

ಕಳೆದ ಐದು ವರ್ಷಗಳಿಂದ ಇವರ ವಿಚ್ಛೇದನದ ವದಂತಿಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಕೃಷ್ಣ ವಂಶಿ ಸ್ಪಷ್ಟನೆ ನೀಡಿದ್ದು, “ನಮ್ಮಿಬ್ಬರ ನಡುವೆ ಯಾವುದೇ ಸಮಸ್ಯೆಗಳಿಲ್ಲ. ನಾವು ವಿಚ್ಛೇದನ ಪಡೆದಿಲ್ಲ” ಎಂದು ತಿಳಿಸಿದ್ದಾರೆ.

“ರಮ್ಯಾ ಚೆನ್ನೈನಲ್ಲಿ ಇದ್ದಾರೆ, ನಾನು ಹೈದರಾಬಾದ್‌ನಲ್ಲಿ ಇದ್ದೇನೆ. ಕೆಲಸದ ಕಾರಣಗಳಿಂದಾಗಿ ಬೇರೆ ಬೇರೆ ಸ್ಥಳಗಳಲ್ಲಿ ಇರುವುದರಿಂದ ಈ ವದಂತಿಗಳು ಹುಟ್ಟಿಕೊಂಡಿವೆ. ನಮ್ಮ ನಡುವೆ ಪ್ರೀತಿ ಮತ್ತು ಪರಸ್ಪರ ಗೌರವ ಎಂದಿನಂತೆಯೇ ಇದೆ” ಎಂದು ಕೃಷ್ಣ ವಂಶಿ ಹೇಳಿದ್ದಾರೆ.

Join WhatsApp

Join Now

RELATED POSTS

1 thought on “ನಟಿ ರಮ್ಯಾ ಕೃಷ್ಣನ್ ಡಿವೋರ್ಸ್? ವದಂತಿಗೆ ಸ್ಪಷ್ಟನೆ ನೀಡಿದ ಗಂಡ ಕೃಷ್ಣ ವಂಶಿ”

Comments are closed.