“ತಾಯಿಯನ್ನು ನಂಬುವವರು, ಪೂಜಿಸುವವರು ಎಲ್ಲಾ ಧರ್ಮ ಮತ್ತು ಜಾತಿಗಳಲ್ಲಿದ್ದಾರೆ. ಆದ್ದರಿಂದ ತಾಯಿ ಎಲ್ಲರಿಗೂ ಸಮಾನ. ತಾಯಿ ದರ್ಶನ ಪಡೆಯುವ ಹಕ್ಕು ಎಲ್ಲರಿಗೂ ಇದೆ. ನನ್ನ ಮಾತಿನ ನಿಜವಾದ ಅರ್ಥ ಇದೇ, ಆದರೆ ಬಿಜೆಪಿ ಮಾತ್ರ ಅದನ್ನು ರಾಜಕೀಯ ವಿವಾದವನ್ನಾಗಿ ಮಾಡುತ್ತಿದೆ” ಎಂದು ಅವರು ಹೇಳಿದರು.
“ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮ ಮತ್ತು ಸಮಾಜದ ಜನರು ಹಿಂಜರಿಯದೆ ಬರುತ್ತಾರೆ. ಎಲ್ಲರೂ ದೇವಿಯ ದರ್ಶನ ಪಡೆದು ಪ್ರಾರ್ಥಿಸುತ್ತಾರೆ. ನಮ್ಮ ದುರ್ಗಾ ದೇವಿ ಎಲ್ಲರ ಕಷ್ಟವನ್ನು ನೀಗಿಸುವ ತಾಯಿ. ನಾಡಹಬ್ಬ ದಸರಾವನ್ನು ನೋಡಲು ದೇಶ ವಿದೇಶಗಳಿಂದ ಜನ ಬರುತ್ತಾರೆ. ಇದಕ್ಕೆ ರಾಜವಂಶಸ್ಥರೇ ಸಾಕ್ಷಿಯಾಗಿದ್ದಾರೆ. ಆದ್ದರಿಂದ ದಸರಾ ಎಲ್ಲ ಧರ್ಮದವರಿಗೂ ಸೇರಿದ ಹಬ್ಬ.
ಧರ್ಮವನ್ನು ರಾಜಕೀಯಕ್ಕೆ ಎಳೆಯಬಾರದು, ದೇವಿಗೂ ಇಷ್ಟವಾಗುವುದಿಲ್ಲ” ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದರು.
ವಿಪಕ್ಷಗಳ ವಿರೋಧದ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಚಾಮುಂಡಿಬೆಟ್ಟ ಕೇವಲ ಹಿಂದೂಗಳ ಆಸ್ತಿಯಲ್ಲ. ಎಲ್ಲಾ ಸಮುದಾಯದವರೂ ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ. ಹಿಂದೂಗಳು ಮಸೀದಿ, ಚರ್ಚ್, ಗುರುದ್ವಾರಕ್ಕೆ ಹೋಗುತ್ತಾರೆ. ರಾಮಮಂದಿರಕ್ಕೆ ಹಿಂದೂಗಳಷ್ಟೇ ಬರಬೇಕು ಎಂದು ಯಾಕೆ ಬೋರ್ಡ್ ಹಾಕಿಲ್ಲ. ಅಷ್ಟಕ್ಕೂ ದಸರಾ ಧಾರ್ಮಿಕ ಆಚರಣೆಯಲ್ಲ ಅದೊಂದು ಸಾಂಸ್ಕೃತಿಕ ಆಚರಣೆ ಎಂದು ಡಿಕೆಶಿ ಹೇಳಿದ್ದರು.
ಚಾಮುಂಡಿ ತಾಯಿ ಎಲ್ಲರಿಗೂ ಸೇರಿದವರು, ಯಾರೊಬ್ಬರಿಗೂ ಮಾತ್ರ ಸೀಮಿತ ಅಲ್ಲ- ಡಿಕೆಶಿ ಸ್ಪಷ್ಟೀಕರಣ
By krutika naik
On: August 28, 2025 9:36 AM
---Advertisement---







3 thoughts on “ಚಾಮುಂಡಿ ತಾಯಿ ಎಲ್ಲರಿಗೂ ಸೇರಿದವರು, ಯಾರೊಬ್ಬರಿಗೂ ಮಾತ್ರ ಸೀಮಿತ ಅಲ್ಲ- ಡಿಕೆಶಿ ಸ್ಪಷ್ಟೀಕರಣ”