ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಅದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜನರು ಇದರ ಬಗ್ಗೆ ಭಯಭೀತರಾಗಿದ್ದಾರೆ. ಆದರೆ ಇದು AI ವಿಡಿಯೋ ಎಂದು ಹೇಳಲಾಗುತ್ತಿದೆ. ಓರ್ಕಾ ಎಂಬ ಮೀನು ತನ್ನ 23 ವರ್ಷದ ತರಬೇತುದಾರೆಯನ್ನೇ ನುಂಗಿದೆ ಎಂದು ಹೇಳುವ ವೀಡಿಯೊ ವೈರಲ್ ಆಗಿದ್ದೇ ತಡ ನೆಟ್ಟಿಗರು ಹುಬ್ಬೇರಿಸಿದ್ದರು.
ಪೆಸಿಫಿಕ್ ಬ್ಲೂ ಮೆರೈನ್ ಪಾರ್ಕ್‌ನಲ್ಲಿ ಸಾಗರ ತರಬೇತುದಾರಿ ಜೆಸ್ಸಿಕಾ ರಾಡ್‌ಕ್ಲಿಫ್ ಅವರನ್ನು ತರಬೇತಿಗೊಂಡಿದ್ದ ಓರ್ಕಾ ಮೀನು ಕೊಂದಿದೆ ಎಂದು ಹೇಳಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವ್ಯಾಪಕವಾಗಿ ಪ್ರಸಾರವಾಗುತ್ತಿರುವ ವಿಡಿಯೋದಲ್ಲಿ ಓರ್ಕಾ ಮೀನು ಪ್ರದರ್ಶನದ ವೇಳೆಯೇ ತನ್ನ ತರಬೇತುದಾರೆಯನ್ನು ಏಕಾಏಕಿ ಕಚ್ಚಿ, ತಿನ್ನುತ್ತಿರುವುದು ಈ ವಿಡಿಯೋಗಳಲ್ಲಿ ಕಾಣಿಸಿಕೊಂಡಿದೆ.
ವಿಡಿಯೋ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದಂತೆ ಇದು ಜನರ ನಿದ್ದೆಗೆಡಿಸಿದೆ. ಇಂತಹ ಒಂದು ಘಟನೆಯನ್ನು ಜನರು ಅರಗಿಸಿಕೊಳ್ಳಲು ಕೂಡಾ ಸಾಧ್ಯವಾಗದಷ್ಟರ ಮಟ್ಟಿಗೆ ವಿಚಲಿರಾಗಿದ್ದಾರೆ. ವಿಡಿಯೋದಲ್ಲಿ ಮೀನು ಆಕ್ರಮಣಕಾರಿಯಾಗಿ ತರಬೇತುದಾರೆಯ ಮೇಲೆ ಎರಗಿ, ತನ್ನ ಬಾಯೊಳಗೆ ತುಂಬಿ ಪೂಲ್‌ನ ನೀರನ್ನು ಕೂಡಾ ರಕ್ತಸಿಕ್ತವಾಗುವಂತೆ ಮಾಡಿರುವುದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ.
ಆದರೆ ಈ ವಿಡಿಯೋ ಅಸ್ತಿತ್ವದಲ್ಲಿಲ್ಲ ಮತ್ತು ಇದು AI ನಿಂದ ರಚಿತವಾಗಿದೆ ಎಂದು ಹೇಳಲಾಗುತ್ತದೆ. ಈ ಭಯಾನಕ ವಿಡಿಯೋವನ್ನು ರಚಿಸಲಾಗಿದೆ ಮತ್ತು ಅದರ ಪ್ರತಿಯೊಂದು ವಿವರವೂ ನಿಜವೆಂದು ತೋರುತ್ತದೆ.
ಇಂತಹ ಒಂದು ಘಟನೆ ನಡೆದಿದೆ ಎಂದು ಜನರು ನಂಬಿ ತಲ್ಲಣಗೊಂಡಿದ್ದಾರೆ. ಆದರೆ ಅದೆಲ್ಲವೂ ಸುಳ್ಳು ಎಂದು ಜನರಿಗೆ ತಿಳಿಸಲು ಪ್ರಯತ್ನಿಸಿವೆ.
ಫೇಸ್‌ಬುಕ್ ಮತ್ತು ಟಿಕ್‌ಟಾಕ್‌ನಲ್ಲಿ ಹೆಚ್ಚಾಗಿ ಪ್ರಸಾರವಾಗುತ್ತಿರುವ ಈ ವೀಡಿಯೊಗಳು ನಿಖರವಾಗಿ ಘಟನೆಯಲ್ಲಿ ಏನಾಗಿದೆ ಎಂಬುದನು ವಿವರಿಸಿಲ್ಲ. ಜೆಸ್ಸಿಕಾ ರಾಡ್‌ಕ್ಲಿಫ್ ಎಂಬ ತರಬೇತುದಾರೆಯ ಮೇಲೆ ಓರ್ಕಾ ದಾಳಿ ಮಾಡಿದೆ ಎಂಬ ಸುದ್ದಿಯನ್ನು ಇಟ್ಟುಕೊಂಡು ಹಲವು ವಿಡಿಯೋಗಳು ಜನರೇಟ್ ಆಗಿವೆ. ವಿಡಿಯೋದಲ್ಲಿರುವ ಜನರ ಧ್ವನಿ, ನೀರಿನ ಶಬ್ಧಗಳು ಎಲ್ಲವೂ ಎಐನಿಂದ ರಚಿಸಲ್ಪಟ್ಟಿವೆ.
ವಾಸ್ತವವಾಗಿ ಈ ಒಂದು ಘಟನೆಯೇ ಕಟ್ಟುಕಥೆ ಎಂಬುದನ್ನು ಹಲವು ಮಾಧ್ಯಮಗಳು ಫ್ಯಾಕ್ಟ್ ಚೆಕ್ ಮೂಲಕ ಬಹಿರಂಗಪಡಿಸಿವೆ. ಜೆಸ್ಸಿಕಾ ರಾಡ್‌ಕ್ಲಿಫ್ ಹೆಸರಿನ ಯಾವುದೇ ಮೀನು ತರಬೇತುದಾರೆ ಅಸ್ತಿತ್ವದಲ್ಲೇ ಇಲ್ಲ. ಮಾತ್ರವಲ್ಲದೇ ಪೆಸಿಫಿಕ್ ಬ್ಲೂ ಮೆರೈನ್ ಪಾರ್ಕ್ ಎಂಬ ಸ್ಥಳ ಕೂಡಾ ಎಲ್ಲೂ ಅಸ್ತಿತ್ವದಲ್ಲಿಲ್ಲ. ಇದು ಸಂಶ್ಲೇಷಿತ ವಾಸ್ತವದ ಭಯಾನಕ ಉದಾಹರಣೆಯಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದು ತಪ್ಪು ಮಾಹಿತಿಯ ಹರಡುವಿಕೆಗೆ ಕಾರಣವಾಗುತ್ತದೆ ಎಂದಿದ್ದಾರೆ.






