Wedding Dates: ಸಂಖ್ಯಾಶಾಸ್ತ್ರದ ಪ್ರಕಾರ ನಾವು ಮದುವೆಯಾಗುವ ದಿನಾಂಕವು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ಹಾಗಾದರೆ ಯಾವ ದಿನಾಂಕಗಳು ದಾಂಪತ್ಯ ಜೀವನಕ್ಕೆ ಶುಭಕರ ಎನ್ನುವುದನ್ನು ನೋಡೋಣ.
ಸಂಖ್ಯಾಶಾಸ್ತ್ರದ ಪ್ರಕಾರ 1, 10, 19, 28ರಂದು ಮದುವೆಯಾದವರು ಸಂಖ್ಯೆ 1ರ ಪ್ರಭಾವಕ್ಕೆ ಒಳಪಡುವರು. ಈ ದಿನಾಂಕಗಳಲ್ಲಿ ಮದುವೆಯಾದರೆ ದಾಂಪತ್ಯ ಜೀವನ ಸಾಮಾನ್ಯವಾಗಿ ಸ್ಥಿರವಾಗಿರುತ್ತದೆ. ಈ ಜೋಡಿಗಳ ನಡುವೆ ಪರಸ್ಪರ ಗೌರವ ಹೆಚ್ಚು ಇರುತ್ತದೆ. ಸ್ವಲ್ಪ ಅಹಂ ಭಾವ ಇರಬಹುದು, ಆದರೆ ಅದನ್ನು ನಿಯಂತ್ರಿಸಿದರೆ ಜೀವನ ಸಂತೋಷಕರವಾಗಿರುತ್ತದೆ.
ಸಂಖ್ಯೆ 9 ಮದುವೆಗೆ ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ. 9ಕ್ಕೆ ಸೇರಿದ ದಿನಾಂಕಗಳಲ್ಲಿ ಮದುವೆಯಾದವರು ಭಾವನಾತ್ಮಕವಾಗಿ ಗಾಢವಾಗಿ ಬೆಸೆದುಕೊಳ್ಳುತ್ತಾರೆ. ಇವರ ನಡುವೆ ಅಪಾರ ಪ್ರೀತಿ ಮತ್ತು ನಿಷ್ಠೆ ಇರುತ್ತದೆ. ಸಮಾಜಸೇವೆಯ ಮನೋಭಾವವೂ ಇವರಲ್ಲಿರುತ್ತದೆ. ಜೀವನಪೂರ್ತಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತಾರೆ.
ವೈವಾಹಿಕ ಜೀವನಕ್ಕೆ ಸಂಖ್ಯೆ 6 (6, 15, 24) ಅತ್ಯಂತ ಅದೃಷ್ಟಕರ ಎಂದು ಹೇಳಲಾಗುತ್ತದೆ. ಇದರ ಅಧಿಪತಿ ಶುಕ್ರ. ಪ್ರೀತಿ, ಐಶ್ವರ್ಯ ಮತ್ತು ಸಂತಾನ ಭಾಗ್ಯಕ್ಕೆ ಇದು ಸೂಚಕ. ಈ ದಿನಾಂಕಗಳಲ್ಲಿ ಮದುವೆಯಾದವರ ಜೀವನ ರೊಮ್ಯಾಂಟಿಕ್ ಮತ್ತು ಸುಖಸಮೃದ್ಧಿಯಾಗಿರುತ್ತದೆ. ಆರ್ಥಿಕ ಬೆಳವಣಿಗೆಯೂ ಉತ್ತಮವಾಗಿರುತ್ತದೆ.
ಸಂಖ್ಯೆ 3 (3, 12, 21, 30) ಗುರುನ ಪ್ರಭಾವ ಹೊಂದಿದೆ. ಈ ದಿನಾಂಕಗಳಲ್ಲಿ ಮದುವೆಯಾದ ದಂಪತಿಗಳ ನಡುವೆ ಉತ್ತಮ ತಿಳುವಳಿಕೆ ಇರುತ್ತದೆ. ಕುಟುಂಬ ಮತ್ತು ಮಕ್ಕಳ ವಿಷಯದಲ್ಲಿ ಅದೃಷ್ಟ ಸಹಕಾರಿಯಾಗುತ್ತದೆ. ಇವರ ಸಂಬಂಧ ದೀರ್ಘಕಾಲ ಗಟ್ಟಿಯಾಗಿ ಮುಂದುವರಿಯುತ್ತದೆ.
ಮದುವೆಗೆ ತಪ್ಪಿಸಬೇಕಾದ ದಿನಾಂಕಗಳು: ಕೆಲ ಸಂಖ್ಯಾಶಾಸ್ತ್ರಜ್ಞರ ಅಭಿಪ್ರಾಯದಂತೆ 4, 5 ಮತ್ತು 8 ಸಂಖ್ಯೆಗೆ ಸೇರಿದ ದಿನಾಂಕಗಳನ್ನು ಮದುವೆಗೆ ಹೆಚ್ಚು ಶ್ರೇಷ್ಠ ಎಂದು ಪರಿಗಣಿಸಲಾಗುವುದಿಲ್ಲ. 4 ಮತ್ತು 8 ಸಂಖ್ಯೆ ಜೀವನದಲ್ಲಿ ಅಚಾನಕ್ ಬದಲಾವಣೆಗಳು ಅಥವಾ ಸವಾಲುಗಳನ್ನು ತರಬಹುದು ಎನ್ನಲಾಗುತ್ತದೆ. 5 ಸಂಖ್ಯೆ ಹೆಚ್ಚು ಚಂಚಲ ಸ್ವಭಾವವನ್ನು ಸೂಚಿಸುವುದರಿಂದ ಕುಟುಂಬಕ್ಕೆ ಸಮಯ ಕಡಿಮೆಯಾಗುವ ಸಾಧ್ಯತೆ ಇದೆ.






