ಬೆಳಗಾವಿ: ಬಸವಣ್ಣ ‘ಲಿಂಗಾಯತ ಧರ್ಮ’ವನ್ನು ಸ್ಥಾಪಿಸಿದ್ದಾರೆ ಎಂಬುದಕ್ಕೆ ಯಾವುದೇ ದಾಖಲೆ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಅವರು ಬುಧವಾರ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, “ಬಸವಣ್ಣ ಶಿವನ ಆರಾಧನೆ ಮಾಡುತ್ತಿದ್ದರು. ಅವರ ವಚನಗಳಲ್ಲಿ ಕೂಡಲ ಸಂಗಮದೇವನ ಉಲ್ಲೇಖ ಇದೆ. ಆದರೆ ಬಸವಣ್ಣ ಧರ್ಮವನ್ನು ಪ್ರತ್ಯೇಕವಾಗಿ ಸ್ಥಾಪಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ” ಎಂದರು.
ಯತ್ನಾಳ್ ಅವರು ಇನ್ನೂ ಮುಂದೆ ಮಾತನಾಡುತ್ತ, “ಕೂಡಲ ಸಂಗಮ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮಿಗಳನ್ನು ಉಚ್ಛಾಟನೆ ಮಾಡಲು ಸಾಧ್ಯವಿಲ್ಲ. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಮತ್ತು ಕೂಡಲ ಸಂಗಮ ಪೀಠಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದರು.






