ಕರ್ನಾಟಕ ಬಿಜೆಪಿ ಅಧ್ಯಕ್ಷರ ಆಯ್ಕೆ, ಬದಲಾವಣೆ ಈ ಯಾವುದರ ಬಗ್ಗೆಯೂ ದೆಹಲಿ ಮಟ್ಟದಲ್ಲಿ ಯಾವುದೇ ಚರ್ಚೆಗಳಾಗಿಲ್ಲ. ರಾಜ್ಯಾಧ್ಯಕ್ಷರ
ಆಯ್ಕೆ ಇನ್ನು 3-4 ದಿನಗಳಲ್ಲಿ ಆಗಲು ಸಾಧ್ಯವೇ ಇಲ್ಲ. ಬೇಕಾದರೆ ಕಾದು ನೋಡಿ, ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.
ಪಕ್ಷದ ವರಿಷ್ಠರನ್ನು ಭೇಟಿಯಾಗಲು 3 ದಿನಗಳ ಹಿಂದೆ ದೆಹಲಿಗೆ ಆಗಮಿಸಿರುವ ಅವರು, ಇಂದು ಬೆಳಿಗ್ಗೆ ದೆಹಲಿ ಸುದ್ದಿಗಾರರೊ೦ದಿಗೆ ಮಾತನಾಡಿ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕ 3-4 ದಿನಗಳಲ್ಲಿ ಆಗಲಿದೆ ಎಂದೆಲ್ಲ ಮಾಧ್ಯಮಗಳು ವರದಿ ಕೊಟ್ಟಿವೆ. ಇದು ಸಾಧ್ಯವೇ ಇಲ್ಲ. ಪಕ್ಷದ ರಾಷ್ಟ್ರೀಯ ನಾಯಕರು ಕರ್ನಾಟಕ ರಾಜ್ಯದ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆಯನ್ನೇ ನಡೆಸಿಲ್ಲ. ಹೀಗಿರುವಾಗ 3- 4 ದಿನಗಳಲ್ಲಿ ಅಧ್ಯಕ್ಷರ ನೇಮಕ ಆಗುತ್ತದೆ ಎಂಬುದು ಸರಿಯಲ್ಲ. ಬೇಕಾದರೆ ನಾನು 4 ದಿನ ಕಾದು ಮಾತನಾಡುತ್ತೇನೆ.ನೀವೆ ನೋಡಿ ಎಂದು ಆರ್.ಅಶೋಕ್ ಮಾಧ್ಯಮದವರಿಗೆ ಹೇಳಿದರು. ಬೇರೆ ರಾಜ್ಯಗಳ ಬಿಜೆಪಿ ಅಧ್ಯಕ್ಷರ ನೇಮಕದ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆಗಳಾಗಿರುವುದು ನಿಜ ಆದರೆ, ಕರ್ನಾಟಕ ಬಿಜೆಪಿ
ಅಧ್ಯಕ್ಷರ ಆಯ್ಕೆ ನೇಮಕ, ಬದಲಾವಣೆ ಯಾವುದರ ಬಗ್ಗೆಯೂ ಚರ್ಚೆಗಗಳೇ ನಡೆದಿಲ್ಲ. ಹೀಗಿರುವಾಗ 3- 4 ದಿನಗಳಲ್ಲಿ ಅಧ್ಯಕ್ಷರ ನೇಮಕವಾಗುತ್ತದೆ ಎಂಬುದು ಹೇಗೆ ಸಾಧ್ಯ? ಇದು ಸಾಧ್ಯವೇ ಇಲ್ಲ ಎಂದರು. ಬಿಜೆಪಿಯಲ್ಲಿ ತಟಸ್ಥ ಬಣ ಸಕ್ರಿಯವಾಗಿದ್ದು, ವಿಜಯೇಂದ್ರ ಅವರನ್ನು ಕೆಳಗಿಳಿಸುವ ಪ್ರಯತ್ನ ಮಾಡುತ್ತಿದೆ. ಎ೦ಬ ವರದಿಗಳನ್ನು ತಳ್ಳಿ ಹಾಕಿದ ಅವರು, ನಾನು ಈಗಾಗಲೇ ಹೇಳಿದ್ದೇನೆ.
ಅಧ್ಯಕ್ಷರ ಬದಲಾವಣೆ ಚರ್ಚೆಗಳೇ ನಡೆದಿಲ್ಲ ಎಂದು ಸ್ಪಷ್ಟಪಡಿಸಿ, ನಾನಂತೂ ಯಾವುದೇ ಬಣಕ್ಕೆ ಸೇರಿದವನಲ್ಲ. ಪಕ್ಷದ ಹಳೆಯ ಕಾರ್ಯಕರ್ತ,ನಮ್ಮದು ರಾಷ್ಟ್ರೀಯ ಪಕ್ಷ. ನಮ್ಮಲ್ಲೂ ಒಂದು ವ್ಯವಸ್ಥೆ ಇದೆ. ಎಲ್ಲರ ಅಭಿಪ್ರಾಯಗಳನ್ನು ಕೇಳಿ, ನಂತರ ಹೈಕಮಾಂಡ ಎಲ್ಲವನ್ನೂ ತೀರ್ಮಾನಿಸುತ್ತದೆ ಎಂದರು. ಕೇಂದ್ರ ಸಚಿವರಾದ ಪಲ್ಲಾದ್‌ಜೋಶಿಯವರಿಗೆ ಎಲ್ಲ ನಾಯಕರುಗಳು ತಮ್ಮ ಅಭಿಪ್ರಾಯಗಳನ್ನು ಹೇಳುವರು. ಇದಾದ ಬಳಿಕ ಜೋಷಿಯವರು ಹೈಕಮಾಂಡ್‌ಗೆ ಎಲ್ಲವನ್ನೂ ಹೇಳಿ, ಬಳಿಕ ಹೈಕಮಾಂಡ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ತೀರ್ಮಾನ ಮಾಡುತ್ತದೆ. ನನಗಿರುವ ಮಾಹಿತಿ ಪ್ರಕಾರ ದೆಹಲಿಮಟ್ಟದಲ್ಲಿ ಬಿಜೆಪಿ ಅಧ್ಯಕ್ಷರ ಆಯ್ಕೆ ಚರ್ಚೆ ನಡೆದಿಲ್ಲ ಎಂದು ಪುನರುಚ್ಛರಿಸಿದರು. ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದ ಬಗ್ಗೆ ಚರ್ಚಿಸಲು ನಾನು ದೆಹಲಗೆ ಬಂದಿಲ್ಲ.
ವಿಜಯೇಂದ್ರ ಅವರು ವೈಯಕ್ತಿಕ ಕಾರಣಕ್ಕೆ ದೆಹಲಿಗೆ ಬಂದಿದ್ದಾಗಿ ನಿನ್ನೆ ಸ್ಪಷ್ಟನೆ ನೀಡಿದ್ದಾರೆ ಎ೦ದರು. ನಾನ೦ತ ರಾಜ್ಯಾಧ್ಯಕ್ಷರ ಹುದ್ದೆಯ ರೇಸ್‌ನಲ್ಲಿ ಇಲ್ಲ. ಯಾವುದರ ಬಗ್ಗೆಯೂ ದೆಹಲಿಯಲ್ಲಿ ಚರ್ಚೆಗಳಾಗುತ್ತಿಲ್ಲ ಎಂದು ಆರ್. ಅಶೋಕ್ ಹೇಳಿದರು. ದೆಹಲಿಯಲ್ಲಿ ನಾನು ಕಳೆದ 3 ದಿನಗಳಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಸಚಿವರಾದ ರಾಜ್ ನಾಥ್ ಪ್ರಲ್ಲಾದ್ ಜೋಷಿ, ನಾಯಕರುಗಳಾದ ವರಿಷ್ಠ
ಬಿ.ಎಲ ಸಂತೋಷ್, ಧಮೇರ್ಂದ್ರ ಪ್ರಧಾನ್, ಅರುಣ್ ಸಿಂಗ್ ಸೇರಿದಂತೆ 10ಕ್ಕೂ ಹೆಚ್ಚು ನಾಯಕರ ಜತೆ ಮಾತನಾಡಿ ರಾಜ್ಯ ರಾಜಕೀಯ ವಿದ್ಯಮಾ ನಗಳ ಬಗ್ಗೆ ಚರ್ಚಿಸಿದ್ದೇನೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಸಂಬಂಧ ವರಿಷ್ಠರು ಮಾರ್ಗದರ್ಶನ ಸಲಹೆ
ನೀಡಿದ್ದಾರೆ. ಅದರಂತೆ ನಾವುಗಳು ಹೋರಾಟ ರೂಪಿಸುತ್ತೇವೆ. ನಾವು 3 ತಿಂಗಳಿಗೊಮ್ಮೆ ದೆಹಲಿಗೆ ಬಂದು ರಾಜ್ಯ ರಾಜಕೀಯ ವಿದ್ಯಮಾನಗಳ
ಬಗ್ಗೆ ಮಾಹಿತಿ ನೀಡುತ್ತೇನೆ.
ನಾನು ಪದೇ ಪದೇ ದೆಹಲಿಗೆ ಬರುವವನಲ್ಲ ಎಂದರು. ಕೇಂದ್ರ ಸಚಿವ ಅಮಿತ್ ಶಾ ಅವರನ್ನು ನಾನು 4 ದಿನಗಳ ಹಿಂದೆ ಬೆಂಗಳೂರಿಗೆ
ಬಂದಾಗ ಭೇಟಿ ಮಾಡಿ ಎಲ್ಲವನ್ನೂ ಚರ್ಚಿಸಿದ್ದೇನೆ. ಹಾಗಾಗಿ ದೆಹಲಿಯಲ್ಲಿ ಅವರನ್ನು ಬಿಟ್ಟು ಉಳಿದ ಎಲ್ಲ ಪ್ರಮುಖರ ಜತೆ ರಾಜ್ಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದರು.
ರಾಜ್ಯದ ಕಾಂಗ್ರೆಸ ಸರ್ಕಾರ ಹೊರಹೋಗುವ ಸರ್ಕಾರ, ಯಾವಾಗ ಬೇಕಾದರೂ ಸರ್ಕಾರದಲ್ಲಿ ಏನೂ ಬೇಕಾದರು ಆಗುತ್ತದೆ. ಈಗಾಗಲೇ, ಅನುದಾನ ಸಿಗದೆ ಅಸಮಾಧಾನ ಅತೃಪ್ತಿಗೊಂಡಿರುವ ಕಾಂಗ್ರೆಸ್ ಶಾಸಕರು ಬೇರೆ ಕಡೆ ಜಿಗಿಯಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ
ಹೆಚ್ಚು ದಿನ ಉಳಿಯಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅ ಶೋಕ್ ಹೇಳಿದರು. ದೆಹಲಿ 3 ಸುದ್ದಿಗಾರ ರೊ೦ದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುತ್ತಿರುವ ಶಾಕಸರಿಗೆ ಭ್ರಮನಿರಸನವಾಗಿದೆ. ಅವರಿಗೆ ಕಾಂಗ್ರೆಸ್ ಸಾಕಾಗಿದೆ. ಬೇರೆ ಕಡೆ ಎಗರಲು ಸಿದ್ಧರಾಗಿ ದ್ದಾರೆ.ಕಾಂಗ್ರೆಸ್ ಶಾಸಕರೇ ಈ ಸರ್ಕಾ ರ ಸರಿಯಿಲ್ಲ. ಭ್ರಷ್ಟಾಚಾ ರದ ಸರ್ಕಾರ ಎಂದೆಲ್ಲ ಹ’ ೪೨ ತಿದ್ದಾರ. ಪ್ರತಿಪಕ್ಷವಾಗಿ ನಾವೂ ಸಹ ದಿನ ನಿತ್ಯ ಶೇ. 60ರ ಸರ್ಕಾರ ಎಂದು ಹೇಳುತ್ತಿದ್ದೇವೆ. ಇದೆಲ್ಲ ನೋಡಿದರೆ ಈ ಸರ್ಕಾರ ‘ಔಟ್ ಗೋ ಯಿಂಗ್’ ಸರ್ಕಾರ ಎಂದರು.
Ooo