---Advertisement---

ಟ್ರಂಪ್‌ ‘ಡೆಡ್ ಎಕಾನಮಿ’ ಹೇಳಿಕೆಗೆ ಮೋದಿ ತಿರುಗೇಟು Modi hits back at Trump’s ‘Dead Economy’ remark

By guruchalva

Published on:

Follow Us
Modi hits back at Trump's 'Dead Economy' remark
---Advertisement---

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ‘ಭಾರತ ಸತ್ತ ಆರ್ಥಿಕತೆ’ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯುತ್ತರವಾಗಿ “ಭಾರತ ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸುವ ಮೂಲಕ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.

ನಮ್ಮ ಸರ್ಕಾರವು ದೇಶದ ಬೆಳವಣಿಗೆಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಟ್ರಂಪ್‌ರ 25% ಟ್ಯಾರಿಫ್ ಘೋಷಣೆಗೆ ಇಂದು ವಾರಣಾಸಿಯಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ವಿಶ್ವ ಆರ್ಥಿಕತೆಯು ಅನೇಕ ಗೊಂದಲಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಭಾರತ ತನ್ನ ರೈತರು, ಸಣ್ಣ ಕೈಗಾರಿಕೆಗಳು ಮತ್ತು ಯುವಕರ ಉದ್ಯೋಗಕ್ಕೆ ಪ್ರಮುಖ್ಯತೇ ನೀಡುತ್ತಿದೆ.

ಸ್ವದೇಶಿ ವಸ್ತುಗಳಿಗೆ ಪ್ರಮುಖತೇ

ಪ್ರಧಾನಿ ಮೋದಿ ಎಲ್ಲ ಭಾರತೀಯರಿಗೆ ‘ಸ್ವದೇಶಿ’ ಉತ್ಪನ್ನಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ. ‘ಜಗತ್ತು ಅಸ್ಥಿರತೆಯ ವಾತಾವರಣವನ್ನು ಎದುರಿಸುತ್ತಿರುವಾಗ, ಸ್ವದೇಶಿ ವಸ್ತುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವುದು ದೇಶಕ್ಕೆ ನಿಜವಾದ ಉಪಯೋಗವಾಗಲಿದೆ. ಇದು ಮಹಾತ್ಮ ಗಾಂಧಿಯವರಿಗೆ ನಾವು ತೋರುವ ಒಂದು ಗೌರವವಾಗಿರುತ್ತದೆ’ ಎಂದರು.

ಟ್ರಂಪ್‌ ಟೀಕೆಗೆ ಮೋದಿ ತಿರುಗೇಟು

ಜುಲೈ 31 ರಂದು ಟ್ರಂಪ್ ಭಾರತದ ಆಮದುಗಳ ಮೇಲೆ 25% ಟ್ಯಾರಿಫ್ ವಿಧಿಸುವುದಾಗಿ ಹೇಳಿದ್ದರು. ಒಂದು ದಿನದ ನಂತರ, ಭಾರತ-ರಷ್ಯಾ ಸಂಬಂಧಗಳನ್ನು ಟೀಕಿಸಿ, ಎರಡೂ ದೇಶಗಳನ್ನು ‘ಸತ್ತ ಆರ್ಥಿಕತೆಗಳು’ ಎಂದು ಟ್ರೂತ್ ಸೋಶಿಯಲ್‌ನಲ್ಲಿ ಕರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಭಾರತದ ಆರ್ಥಿಕ ಪ್ರಗತಿ ಬೆಳವಣಿಗೆ ಏರಿಕೆಯಾಗುತ್ತಿದೆ. ದೇಶದ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ತಮ್ಮ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.

ಇನ್ನು ನೋಡುವುದಾದರೆ ರಷ್ಯಾ ಜೊತೆಗಿನ ಭಾರತದ ಸ್ನೇಹ ಸಂಬಂಧ, ವಾಣಿಜ್ಯ ವಹಿವಾಟುಗಳು ಡೊನಾಲ್ಡ್ ಟ್ರಂಪ್ ಸಹಿಸಲಗದೆ ಅವರ ನಿದ್ದೆಗೆಡಿಸಿದೆ. ಇನ್ನೊಂದು ಕಾರಣವೆನೆಂದರೆ ಅಮೆರಿಕಾದ ಮಾಂಸಾಹಾರ ಹಾಲು ಭಾರತದ ಮಾರುಕಟ್ಟೆ ಪ್ರವೇಶಿಸಲು ಭಾರತ ಒಪ್ಪದೇ ಇರುವುದು ಟ್ರಂಪ್ ಬೆಸರಕ್ಕೆ ಕಾರಣವಾಗಿದೆ. ಈ ಎಲ್ಲಾ ಕಾರಣಗಳಿಗೆ ಭಾರತಕ್ಕೆ ಹಿಡಿಶಾಪ ಹಾಕಿ ಭಾರೀ ಸುಂಕ ನಿಗದಿಗೊಳಿಸಿದ್ದಾರೆ.

ಈ ಸುಂಕ ಕಾರಣದಿಂದ ನಮಲ್ಲಿ ಔಷಧೀಯ ವಸ್ತುಗಳು, ಜವಳಿ ಉದ್ಯಮ, ರತ್ನಗಳು, ಆಭರಣಗಳು, ಎಲೆಕ್ಟ್ರಾನಿಕ್ಸ್, ತೈಲೋದ್ಯಮ ಇತರೆ ಉದ್ಯಮಗಳಿಗೆ ಹೊಡೆತ. ಭಾರತದ ಪ್ರಮುಖ ಸಂಸ್ಥೆಗಳಿಗೆ ಅಮೆರಿಕಾಗೆ ರಫ್ತು ಮಾಡುವ ವಸ್ತುಗಳಿಂದಲೇ ಆದಾಯ ಸಿಗುತ್ತಿದೆ. ಈ ಉದ್ಯಮಗಳಿಗೆ ಹೊಡೆತವಾಗಲಿದೆ. ಇನ್ನು ತೈಲ ಖರೀದಿ ಮತ್ತಷ್ಟು ದುಬಾರಿಯಾಗಲಿದೆ.

---Advertisement---

Leave a Comment