---Advertisement---

ಸಮೀರ್ ಎಂಡಿಗೆ ನಿರೀಕ್ಷಣಾ ಜಾಮೀರು ಮಂಜೂರು!ಇನ್ನೆರಡು ದಿನದಲ್ಲಿ ಹಾಜಾರಾಗಲು ಸೂಚನೆ. Md Sameer gets conditional bail

On: August 22, 2025 8:17 AM
Follow Us:
Md Sameer gets conditional bail
---Advertisement---

ಎಐ ವಿಡಿಯೋ ಸೃಷ್ಟಿಸಿ ಅಪಪ್ರಚಾರ ಮಾಡಿದ ಆರೋಪ ಎದುರಿಸುತ್ತಿರುವ ಯೂಟ್ಯೂಬರ್ ಸಮೀರ್ ಎಂಡಿ ಬಂಧನ ಭೀತಿ ಎದುರಾಗಿತ್ತು. ಆದರೇ ಇವಾಗ ಅದರಿಂದ ಪಾರಾಗಿದ್ದಾರೆ. ಸಮೀರ್ ಬಂಧನಕ್ಕೆ ಧರ್ಮಸ್ಥಳದಿಂದ ಬೆಂಗಳೂರಿಗೆ ಆಗಮಿಸಿದ್ದ ಪೊಲೀಸರು ಸಮೀರ್ ಮನೆ ಹುಡುಕಾಡಿದ್ದರು.

ಅದೇ ವಿಡಿಯೋದಿಂದ ಸಮೀರ್ ಎಂಡಿಗೆ ಬಂಧನದ ಭೀತಿ ಎದುರಿಸುತ್ತಿದ್ದ. ಯಾವಾಗ ಪೊಲೀಸರು ಅರೆಸ್ಟ್ ಮಾಡಲು ಮುಂದಾದ್ದರೋ ಸಮೀರ್ ಕೂಡಲೇ ಮಂಗಳೂರು ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 21 ರಂದು ಅರ್ಜಿ ವಿಚಾರಣೆ ನಡೆಸಿದ ಮಂಗಳೂರು ಕೋರ್ಟ್ ಸಮೀರ್ ಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ. ಸಮೀರ್ ಬಂಧನದಿಂದ ಪಾರಾಗಿದ್ದಾರೆ.

ಪೊಲೀಸರು ಬರುತ್ತಿದ್ದಂತೆ ಎಸ್ಕೇಪ್ ಆಗಿದ್ದ ಸಮೀರ್ ವಕೀಲರ ಮೂಲಕ ಮಂಗಳೂರು ಕೋರ್ಟ್‌ಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಮಂಗಳೂರು ಕೋರ್ಟ್ ಇದೀಗ ಸಮೀರ್ ಎಂಡಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಸಮೀರ್ ಎಂಡಿಗೆ ಮಂಗಳೂರು ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಬಂಧನ ಭೀತಿಯಿಂದ ಸಮೀರ್ ಎಂಡಿ ಪಾರಾಗಿದ್ದಾರೆ. ಆದರೆ ಇದೇ ವೇಳೆ ಕೋರ್ಟ್, ಇನ್ನೆರಡು ದಿನದಲ್ಲಿ ಸಮೀರ್ ಎಂಡಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಕೋರ್ಟ್ ಸೂಚಿಸಿದೆ.

ಧರ್ಮಸ್ಥಳದಲ್ಲಿ ಸಾವಿರಾರು ಹೆಣ್ಣುಮಕ್ಕಳು, ಮಹಿಳೆಯರನ್ನು ಹತ್ಯೆ ಮಾಡಿ ಪ್ರಕರಣ ಮುಚ್ಚಿಹಾಕಿದ್ದಾರೆ. ಈ ಮಾಹಿತಿ ಕೇಳಿ ನಿಮ್ಮ ರಕ್ತ ಕುದಿಯುತ್ತಿಲ್ಲವೇ? ಇದರ ವಿರುದ್ಧ ಜನರು ದಂಗೆ ಏಳಬೇಕು, ಪ್ರತಿಭಟನೆ ಮಾಡಬೇಕು ಎಂದು ಗಂಭೀರ ಆರೋಪ ಮಾಡಿದ್ದರು.

ಧರ್ಮಸ್ಥಳ ಪ್ರಕರಣದಲ್ಲಿ ಸಮೀರ್ ಎಂಡಿ ಎಐ ಟೂಲ್ ಮೂಲಕ ನಕಲಿ ವಿಡಿಯೋ ಸೃಷ್ಟಿಸಿ ಪೋಸ್ಟ್ ಮಾಡಲಾಗಿತ್ತು. ಧರ್ಮಸ್ಥಳದಲ್ಲಿ ಸಾವಿರಾರು ಶವ ಹೂತಿಟ್ಟಿರುವುದಾಗಿ ಆರೋಪಿಸಿದ್ದ. ಮಹಿಳೆಯರು, ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ಈ ಮೃತೇದಹಳನ್ನು ಧರ್ಮಸ್ಥಳ ಕಾಡಿನಲ್ಲಿ ಹೂತಿಡಲಾಗಿದೆ. ಯಾವುದೇ ಕಾನೂನು ಪ್ರಕ್ರಿಯೆ ಮಾಡದೇ ರಹಸ್ಯವಾಗಿ ಹೂತಿಡಲಾಗಿದೆ ಎಂದು ಸಮೀರ್ ಎಂಡಿ ಆರೋಪಿಸಿದ್ದ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಈ ಗಂಭೀರ ಅಪರಾಧಗಳ ಬಗ್ಗೆ ಸಮಾಜ ಪ್ರತಿಭಟನೆ ನಡೆಸಬೇಕು, ನಿಮ್ಮ ರಕ್ತ ಕುದಿಯುತ್ತಿಲ್ಲವೇ ಎಂದು ಸಮೀರ್ ಎಂಡಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದ. ಧರ್ಮಸ್ಥಳ ವಿರುದ್ಧ ಎಐ ವಿಡಿಯೋ ಸೃಷ್ಟಿಸಿ ಅಪಪ್ರಚಾರ ಮಾಡುತ್ತಿರುವ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿತ್ತು.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment