ಅಮೆರಿಕದ ವಾಷಿಂಗ್ಟನ್ ರಾಜ್ಯದಲ್ಲಿ ನಡೆದ ಮೆಕೆನ್ನಾ ಕಿಂಡ್ರೆಡ್ ಪ್ರಕರಣ ಮತ್ತೆ ಭಾರೀ ಚರ್ಚೆಗೆ ಕಾರಣವಾಗಿದೆ. ಸ್ಪೋಕೇನ್ ವ್ಯಾಲಿಯ ‘ಸೆಂಟ್ರಲ್ ವ್ಯಾಲಿ ಹೈ ಸ್ಕೂಲ್’ನಲ್ಲಿ ಸ್ಪ್ಯಾನಿಷ್ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮೆಕೆನ್ನಾ ಕಿಂಡ್ರೆಡ್ (27), ತನ್ನ 17 ವರ್ಷದ ವಿದ್ಯಾರ್ಥಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪ ಎದುರಿಸುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸದಾಗಿ ಬಹಿರಂಗಗೊಂಡ ಮೊಬೈಲ್ ಸಂದೇಶಗಳು ಸಾರ್ವಜನಿಕರಲ್ಲಿ ಆಕ್ರೋಶವನ್ನು ಮತ್ತೊಮ್ಮೆ ಕೆರಳಿಸಿವೆ.
ಇದನ್ನು ಓದಿ: ಸಾಕು ನಾಯಿಯ ಅನಾರೋಗ್ಯದಿಂದ ತೀವ್ರ ಮನನೊಂದು: ಲಖನೌನಲ್ಲಿ ಇಬ್ಬರು ಸಹೋದರಿಯರ
ಇದನ್ನು ಓದಿ: ಆತ್ಮಹತ್ಯೆಹೆಂಡತಿ ಜೊತೆ ಆಕ್ರಮ ಸಂಬಂಧ ಶಂಕೆ ತಂದೆಯನ್ನೇ ಕೊಂದ ಮಗ..!
2022ರಲ್ಲಿ ಮೆಕೆನ್ನಾ ಕಿಂಡ್ರೆಡ್ 23 ವರ್ಷದವರಾಗಿದ್ದಾಗ, ತನ್ನ ವಿದ್ಯಾರ್ಥಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದ್ದು, ಈ ವಿಚಾರ ಡಿಸೆಂಬರ್ 2022ರಲ್ಲಿ ಸಹಪಾಠಿಗಳು ನೀಡಿದ ದೂರಿನ ಮೂಲಕ ಬೆಳಕಿಗೆ ಬಂದಿತ್ತು. ಪ್ರಕರಣ ಹೊರಬಿದ್ದ ಬಳಿಕ ಶಿಕ್ಷಣ ವಲಯದಲ್ಲಿ ಭಾರೀ ಚರ್ಚೆ ನಡೆದಿತ್ತು.
ಇತ್ತೀಚೆಗೆ ಹೊರಬಿದ್ದಿರುವ ವರದಿಗಳ ಪ್ರಕಾರ, ಶಿಕ್ಷಕಿ ಮತ್ತು ವಿದ್ಯಾರ್ಥಿಯ ನಡುವೆ ವಿನಿಮಯಗೊಂಡಿದ್ದ ಮೊಬೈಲ್ ಸಂದೇಶಗಳು ಅತ್ಯಂತ ಅನುಚಿತ ಹಾಗೂ ಗಂಭೀರ ಸ್ವಭಾವದ್ದಾಗಿದ್ದವು. ಈ ಸಂದೇಶಗಳಲ್ಲಿ ಇಬ್ಬರ ನಡುವಿನ ವೈಯಕ್ತಿಕ ಹಾಗೂ ಅಸಂಗತ ಸಂಬಂಧ ಸ್ಪಷ್ಟವಾಗಿದ್ದು, ಶಿಕ್ಷಕಿಯು ವಿದ್ಯಾರ್ಥಿಯ ಮೇಲಿನ ಅತಿರೇಕದ ಆಸಕ್ತಿ ಮತ್ತು ಸ್ವಾಮ್ಯಭಾವವನ್ನು ವ್ಯಕ್ತಪಡಿಸಿದ್ದಾಳೆ ಎಂಬ ಆರೋಪಗಳು ಕೇಳಿಬರುತ್ತಿವೆ. ವಿದ್ಯಾರ್ಥಿಯು ಕೆಲ ಸಂದೇಶಗಳಲ್ಲಿ ಶಿಕ್ಷಕಿಯನ್ನು ‘ಅಮ್ಮ’ ಎಂದು ಸಂಬೋಧಿಸಿದ್ದ ಎನ್ನುವ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂದೇಶಗಳು ಬಹಿರಂಗವಾಗುತ್ತಿದ್ದಂತೆ, ಈ ಪ್ರಕರಣವು ಮತ್ತೊಮ್ಮೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ವೇಳೆ ವಿದ್ಯಾರ್ಥಿಯ ತಾಯಿ ನ್ಯಾಯಾಲಯದ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ತನ್ನ ಮಗನ ಭವಿಷ್ಯವನ್ನು ಶಿಕ್ಷಕಿ ಹಾಳುಮಾಡಿದ್ದಾಳೆ ಎಂದು ಕಣ್ಣೀರಿಟ್ಟಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2024ರ ಮಾರ್ಚ್ನಲ್ಲಿ ಮೆಕೆನ್ನಾ ಕಿಂಡ್ರೆಡ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು. ನ್ಯಾಯಾಲಯವು ಆಕೆಗೆ ಜೈಲು ಶಿಕ್ಷೆ ವಿಧಿಸದೇ, 24 ತಿಂಗಳ ಪ್ರೊಬೇಷನ್ (ಪರಿವೀಕ್ಷಣಾ ಅವಧಿ) ವಿಧಿಸಿದ್ದು, ಜೊತೆಗೆ 10 ವರ್ಷಗಳ ಕಾಲ ಲೈಂಗಿಕ ಅಪರಾಧಿಗಳ ಪಟ್ಟಿಯಲ್ಲಿ (Sex Offender Registry) ತನ್ನ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಆದೇಶಿಸಿದೆ.
ಪ್ರಸ್ತುತ ಮೆಕೆನ್ನಾ ಕಿಂಡ್ರೆಡ್ ತಮ್ಮ ವಕೀಲರಾಗಿರುವ ಪತಿಯೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಬಹಿರಂಗಗೊಂಡ ಸಂದೇಶಗಳ ಹಿನ್ನೆಲೆಯಲ್ಲಿ, ಈ ಪ್ರಕರಣ ಮತ್ತೆ ಜನರ ಗಮನ ಸೆಳೆದಿದ್ದು, ನ್ಯಾಯ ವ್ಯವಸ್ಥೆಯ ಮೇಲೂ ಹಲವು ಪ್ರಶ್ನೆಗಳು ಎದ್ದಿವೆ.






