ಹಿಂದೂ ಸಂಪ್ರದಾಯದಲ್ಲಿ ಮಕರ ಸಂಕ್ರಾಂತಿ ಅತ್ಯಂತ ಪವಿತ್ರ ಹಾಗೂ ವಿಶಿಷ್ಟ ಮಹತ್ವ ಹೊಂದಿರುವ ಹಬ್ಬವಾಗಿದೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು ಪ್ರಕೃತಿ ಮತ್ತು ಮಾನವ ಜೀವನದಲ್ಲಿ ಹೊಸ ಆರಂಭದ ಸೂಚಕವೆಂದು ಪರಿಗಣಿಸಲಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ಹೆಸರುಗಳು ಮತ್ತು ಸಂಪ್ರದಾಯಗಳೊಂದಿಗೆ ಆಚರಿಸಲ್ಪಟ್ಟರೂ, ಹಬ್ಬದ ಅರ್ಥ ಹಾಗೂ ಉದ್ದೇಶ ಎಲ್ಲೆಡೆ ಒಂದೇ ಆಗಿದೆ.
ಇದನ್ನು ಓದಿ ಬೀದರ್: ಸಂಕ್ರಾಂತಿ ಹಬ್ಬಕ್ಕೆ ಮಗಳನ್ನ ಕರೆತರಲು ಹೊರಟ ತಂದೆ ಗಾಳಿಪಟದ ಮಾಂಜಾ ದಾರಕ್ಕೆ ಬಲಿ ..!
ಈ ದಿನಗಳಲ್ಲಿ ದೇಶದಾದ್ಯಂತ ಸಂಕ್ರಾಂತಿ ಸಂಭ್ರಮ ಮನೆ ಮಾಡಿದ್ದು, ಎಳ್ಳು–ಬೆಲ್ಲ ಹಂಚಿಕೊಂಡು ಸಿಹಿ ಮಾತುಗಳ ಮೂಲಕ ಆತ್ಮೀಯತೆ ಬೆಳೆಸುವ ಪರಂಪರೆ ಮುಂದುವರಿಯುತ್ತಿದೆ. ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿ ಕಿಚ್ಚು ಓಡಿಸುವ ಆಚರಣೆ, ಗಾಳಿಪಟ ಹಾರಿಸುವ ಸಂಭ್ರಮ ಈ ಹಬ್ಬಕ್ಕೆ ವಿಶೇಷ ಛಾಯೆಯನ್ನು ನೀಡುತ್ತದೆ.
ಇದನ್ನು ಓದಿ: ಹಿಂದೂ ದೇವತೆಗಳ ಕುರಿತು ರೇವಂತ್ ರೆಡ್ಡಿಯ ವಿವಾದಾತ್ಮಕ ಹೇಳಿಕೆ ಎರಡು ಬಾರಿ ಮದುವೆಯಾಗುವವರಿಗೆ ಬೇರೆ ದೇವರಿದ್ದಾರೆ..!
ಸೂರ್ಯ ದೇವನಿಗೆ ಸಮರ್ಪಿತವಾಗಿರುವ ಈ ಹಬ್ಬವನ್ನು ಸಾಮಾನ್ಯವಾಗಿ ಪ್ರತಿವರ್ಷ ಜನವರಿ 14ರಂದು ಆಚರಿಸಲಾಗುತ್ತದೆ. ಆದರೆ ಈ ಬಾರಿ ಮಕರ ಸಂಕ್ರಾಂತಿ ಜನವರಿ 15ರಂದು ಬಂದಿದೆ. ಗುಜರಾತ್‌ನಲ್ಲಿ ಉತ್ತರಾಯಣ, ತಮಿಳುನಾಡಿನಲ್ಲಿ ಪೊಂಗಲ್, ಹಿಮಾಚಲ ಪ್ರದೇಶ, ಹರಿಯಾಣ ಹಾಗೂ ಪಂಜಾಬ್‌ನಲ್ಲಿ ಮಾಘಿ ಎಂಬ ವಿಭಿನ್ನ ಹೆಸರುಗಳಿಂದ ಈ ಹಬ್ಬವನ್ನು ಕರೆಯಲಾಗುತ್ತದೆ.
ಹೆಸರುಗಳು ಬದಲಾಗಿದರೂ ಹಬ್ಬದ ಪವಿತ್ರತೆ ಮತ್ತು ಮಹತ್ವ ಒಂದೇ ಆಗಿದೆ. ಮಕರ ಸಂಕ್ರಾಂತಿಯ ಹಿಂದೆ ಪೌರಾಣಿಕ ಹಿನ್ನೆಲೆಯೂ ಇದೆ. ದಂತಕಥೆಗಳ ಪ್ರಕಾರ ಸಂಕ್ರಾಂತಿ ಎಂಬ ದೇವಿಯು ಶಂಕರಾಸುರ ಎಂಬ ರಾಕ್ಷಸನನ್ನು ಈ ದಿನ ಸಂಹರಿಸಿದಳು ಎಂಬ ನಂಬಿಕೆ ಇದೆ. ಇದರಿಂದಲೇ ಮಕರ ಸಂಕ್ರಾಂತಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
ಮುಂದಿನ ದಿನವನ್ನು ಕರಿದಿನ್ ಅಥವಾ ಕಿಂಕ್ರಾಂತ್ ಎಂದು ಕರೆಯಲಾಗುತ್ತಿದ್ದು, ಆ ದಿನ ಕಿಂಕರಾಸುರನ ವಧೆ ನಡೆದಿದೆ ಎಂಬ ನಂಬಿಕೆಯೂ ಜನಪ್ರಚಲಿತದಲ್ಲಿದೆ. ಇನ್ನೊಂದು ನಂಬಿಕೆಯ ಪ್ರಕಾರ, ಮಕರ ಸಂಕ್ರಾಂತಿಯಂದು ದೇವತೆಗಳು ಭೂಮಿಗೆ ಇಳಿದು ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ. ಆದ್ದರಿಂದ ಈ ದಿನ ಗಂಗಾ ಸ್ನಾನ ಮಾಡಿದರೆ ವಿಶೇಷ ಪುಣ್ಯಫಲ ದೊರೆಯುತ್ತದೆ ಎಂದು ಭಾವಿಸಲಾಗುತ್ತದೆ.
ಮಹಾಭಾರತ ಕಾಲದಲ್ಲಿ ಭೀಷ್ಮ ಪಿತಾಮಹನು ಉತ್ತರಾಯಣದ ಶುಭಕಾಲದವರೆಗೆ ಕಾಯ್ದು ತನ್ನ ದೇಹತ್ಯಾಗವನ್ನು ಮಾಡಿದನೆಂಬ ಕಥೆಯೂ ಪ್ರಸಿದ್ಧವಾಗಿದೆ. ಜ್ಯೋತಿಷ್ಯ ಹಾಗೂ ಪುರಾಣಗಳ ಪ್ರಕಾರ ಮಕರ ಸಂಕ್ರಾಂತಿಯೊಂದಿಗೆ ಉತ್ತರಾಯಣ ಆರಂಭವಾಗುತ್ತದೆ. ಈ ಅವಧಿಯನ್ನು ಅತ್ಯಂತ ಶುಭಕಾಲವೆಂದು ಪರಿಗಣಿಸಲಾಗುತ್ತಿದ್ದು, ಈ ಸಮಯದಲ್ಲಿ ಸ್ವರ್ಗದ ದ್ವಾರಗಳು ತೆರೆದಿರುತ್ತವೆ ಎಂಬ ನಂಬಿಕೆ ಇದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಉತ್ತರಾಯಣವನ್ನು ಶ್ರೇಷ್ಠ ಕಾಲವೆಂದು ವರ್ಣಿಸಿದ್ದಾನೆ.
ಪೌರಾಣಿಕ ಕಥೆಗಳ ಪ್ರಕಾರ ಶಿವ–ಪಾರ್ವತಿಯ ವಿವಾಹ, ಬ್ರಹ್ಮನಿಂದ ಸೃಷ್ಟಿಯ ಆರಂಭ, ವಿಷ್ಣುವಿನ ವರಾಹ ಅವತಾರದಲ್ಲಿ ಭೂಮಿಯ ಉದ್ಧಾರ, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿಯ ಅವತಾರ ಉತ್ತರಾಯಣದಲ್ಲೇ ನಡೆದವೆಂದು ನಂಬಲಾಗಿದೆ. ಈ ಕಾರಣದಿಂದ ವಿವಾಹ, ಗೃಹಪ್ರವೇಶ, ನಾಮಕರಣ ಸೇರಿದಂತೆ ಶುಭ ಕಾರ್ಯಗಳನ್ನು ಈ ಕಾಲದಲ್ಲಿ ನೆರವೇರಿಸುವುದು ಮಂಗಳಕರವೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಮಕರ ಸಂಕ್ರಾಂತಿಯಂದು ವಿಷ್ಣುವನ್ನು ಪೂಜಿಸುವುದು, ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಹಾಗೂ ದಾನ–ಧರ್ಮಗಳನ್ನು ನೆರವೇರಿಸುವುದು ವಿಶೇಷ ಫಲ ನೀಡುತ್ತದೆ ಎಂಬ ನಂಬಿಕೆ ಇಂದಿಗೂ ಜನರಲ್ಲಿ ಗಾಢವಾಗಿ ಉಳಿದಿದೆ.






