ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಿಂದ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಯುವಕನೊಬ್ಬ ಹಲವು ದಿನಗಳಿಂದ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದ. ವೈದ್ಯರು ಎಕ್ಸ್-ರೇ ಪರೀಕ್ಷೆ ನಡೆಸಿದ ವೇಳೆ, ಆತನ ದೇಹದೊಳಗೆ ಸೋರೆಕಾಯಿ ಸಿಲುಕಿರುವುದು ಪತ್ತೆಯಾಗಿದೆ.
ಈ ಅಚ್ಚರಿಯ ದೃಶ್ಯವನ್ನು ಕಂಡು ರೋಗಿಯ ಜೊತೆಗೆ ವೈದ್ಯರೂ ಕೂಡ ಬೆಚ್ಚಿಬಿದ್ದಿದ್ದಾರೆ. ತಕ್ಷಣ ಚಿಕಿತ್ಸೆ ನೀಡಿ ಶಸ್ತ್ರಚಿಕಿತ್ಸೆಯ ಮೂಲಕ ಸೋರೆಕಾಯಿಯನ್ನು ಹೊರತೆಗೆದು ಯುವಕನ ಪ್ರಾಣ ಉಳಿಸಲಾಗಿದೆ.
ಯುವಕನ ಸ್ಥಿತಿ ಗಂಭೀರವಾಗುತ್ತಿದ್ದ ಹಿನ್ನೆಲೆಯಲ್ಲಿ ವೈದ್ಯರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಸೋರೆಕಾಯಿ ಗುದದ್ವಾರದಲ್ಲಿ ಸಿಲುಕಿಕೊಂಡಿದ್ದು, ಒಳಗಿನ ರಕ್ತನಾಳಗಳಿಗೆ ಹಾನಿ ಉಂಟಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತ ಕಾರಣ ಯಾವುದೇ ಅಪಾಯವಿಲ್ಲದೆ ಆತನ ಆರೋಗ್ಯವನ್ನು ಸ್ಥಿರಗೊಳಿಸಲು ಸಾಧ್ಯವಾಗಿದೆ. ಇದೀಗ ಯುವಕ ನೋವುರಹಿತನಾಗಿ ಚೇತರಿಸಿಕೊಂಡಿದ್ದಾನೆ.
ಈ ಪ್ರಕರಣವು ವೈದ್ಯರಿಗೂ ಗೊಂದಲ ಉಂಟುಮಾಡಿದೆ. ಸೋರೆಕಾಯಿ ದೇಹದೊಳಗೆ ಹೇಗೆ ಪ್ರವೇಶಿಸಿತು ಹಾಗೂ ಯಾವ ಕಾರಣಕ್ಕೆ ಈ ರೀತಿ ಸಿಲುಕಿಕೊಂಡಿತು ಎಂಬ ವಿಚಾರವನ್ನು ವೈದ್ಯರು ಬಹಿರಂಗಪಡಿಸಿಲ್ಲ. ಆದರೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ ಮತ್ತು ಯುವಕ ಸಂಪೂರ್ಣವಾಗಿ ಆರೋಗ್ಯವಾಗಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.






