---Advertisement---

ಮತ್ತೆ ಸದ್ದು ಮಾಡಲು ಸಜ್ಜಾದ ‘ಲವ್ ಮಾಕ್ಟೆಲ್ 3’ ರಿಲೀಸ್ ಯಾವಾಗ

On: January 6, 2026 2:27 PM
Follow Us:
---Advertisement---

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿಯ ಯಶಸ್ವಿ ಸಿನಿಮಾ ಸರಣಿ ‘ಲವ್ ಮಾಕ್ಟೆಲ್’ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದೆ. ‘ಲವ್ ಮಾಕ್ಟೆಲ್’ ಮತ್ತು ‘ಲವ್ ಮಾಕ್ಟೆಲ್ 2’ ಚಿತ್ರಗಳ ಯಶಸ್ಸಿನ ಬಳಿಕ, ಇದೀಗ ‘ಲವ್ ಮಾಕ್ಟೆಲ್ 3’ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

ಇದನ್ನು ಓದಿ: ಒಂದೇ ವರ್ಷದಲ್ಲಿ ಅಕ್ಷಯ್ ಖನ್ನಾ ಸಿನಿಮಾಗಳಿಂದ 2 ಸಾವಿರ ಕೋಟಿ ರೂ. ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಅಪರೂಪದ ದಾಖಲೆ

ಕೋವಿಡ್ ಸಮಯದಲ್ಲಿ ಒಟಿಟಿಯಲ್ಲಿ ಭರ್ಜರಿ ಯಶಸ್ಸು ಕಂಡ ಮೊದಲ ‘ಲವ್ ಮಾಕ್ಟೆಲ್’ ಸಿನಿಮಾ, ಡಾರ್ಲಿಂಗ್ ಕೃಷ್ಣ ಅವರಿಗೆ ನಟನಾಗಿ ಮಾತ್ರವಲ್ಲದೆ ನಿರ್ದೇಶಕರಾಗಿಯೂ ದೊಡ್ಡ ಗೆಲುವು ತಂದುಕೊಟ್ಟಿತ್ತು. ನವಿರು ಪ್ರೇಮಕಥೆ, ಹಾಸ್ಯ, ಭಾವುಕತೆ ಮತ್ತು ಮನಮುಟ್ಟುವ ಸಂಗೀತದಿಂದ ಈ ಸಿನಿಮಾ ಪ್ರೇಕ್ಷಕರ ಮನ ಗೆದ್ದಿತ್ತು. 2022ರಲ್ಲಿ ಬಿಡುಗಡೆಯಾದ ‘ಲವ್ ಮಾಕ್ಟೆಲ್ 2’ ಕೂಡ ಉತ್ತಮ ಪ್ರತಿಕ್ರಿಯೆ ಪಡೆದು ಹಿಟ್ ಆಗಿತ್ತು.

ಇದೀಗ ಅದೇ ಜೋಡಿ ‘ಲವ್ ಮಾಕ್ಟೆಲ್ 3’ ಮೂಲಕ ಮತ್ತೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಮುಂದಾಗಿದೆ. ಇತ್ತೀಚೆಗೆ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಇದೀಗ ಹೊಸ ವರ್ಷದ ಉಡುಗೊರೆಯಾಗಿ ಡಾರ್ಲಿಂಗ್ ಕೃಷ್ಣ ಅವರು ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಏಪ್ರಿಲ್ 10ರಂದು ‘ಲವ್ ಮಾಕ್ಟೆಲ್ 3’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಬಾರಿ ಕಥೆ ಮತ್ತು ನಿರೂಪಣೆಯಲ್ಲಿ ಹೊಸತನ ಇರಲಿದೆ ಎಂದು ಡಾರ್ಲಿಂಗ್ ಕೃಷ್ಣ ತಿಳಿಸಿದ್ದಾರೆ. ಹಿಂದಿನ ಎರಡು ಭಾಗಗಳಿಗಿಂತ ವಿಭಿನ್ನವಾದ ಪ್ರೇಮಕಥೆಯನ್ನು ‘ಲವ್ ಮಾಕ್ಟೆಲ್ 3’ ಒಳಗೊಂಡಿರಲಿದೆ ಎಂಬ ಭರವಸೆ ನೀಡಿದ್ದಾರೆ.

ಈ ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ತಮ್ಮದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದು, ನಕುಲ್ ಅಭಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಹಾಗೂ ಸಂಕಲನ ಈ ಸಿನಿಮಾಕ್ಕಿದೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಜೊತೆಗೆ ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಸೇರಿದಂತೆ ಹಲವರು ನಟಿಸಿದ್ದಾರೆ.

ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಪ್ರೇಕ್ಷಕರ ನಿರೀಕ್ಷೆಯ ನಡುವೆ ‘ಲವ್ ಮಾಕ್ಟೆಲ್ 3’ ಏಪ್ರಿಲ್ 10ರಂದು ತೆರೆಗೆ ಬರಲು ಸಜ್ಜಾಗಿದೆ.

Join WhatsApp

Join Now

RELATED POSTS

1 thought on “ಮತ್ತೆ ಸದ್ದು ಮಾಡಲು ಸಜ್ಜಾದ ‘ಲವ್ ಮಾಕ್ಟೆಲ್ 3’ ರಿಲೀಸ್ ಯಾವಾಗ”

Comments are closed.