ಗುಜರಾತ್‌ನ ಸೂರತ್‌ನಲ್ಲಿ ಅತಿವೇಗದ ರೀಲ್ಸ್ ಚಿತ್ರೀಕರಣ ಜೀವಕಳೆದುಕೊಂಡ ದಾರುಣ ಘಟನೆ ನಡೆದಿದೆ. KTM ಬೈಕ್ ಅನ್ನು 140 ಕಿಮೀ/ಗಂ ವೇಗದಲ್ಲಿ ಓಡಿಸುತ್ತಿದ್ದ 18 ವರ್ಷದ ಯುವಕ ಪ್ರಿನ್ಸ್ ಪಟೇಲ್, ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಅಪಘಾತದ ಕ್ಷಣಗಳನ್ನು ಸೆರೆಹಿಡಿದ CCTV ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿವೆ.
ಘಟನೆ ಹೇಗೆ ನಡೆದಿದೆ?
ಸೂರತ್‌ನ ಖಟೋದರ ಪ್ರದೇಶದ ಬ್ರೆಡ್‌ಲೈನರ್ ಸರ್ಕಲ್ ಬಳಿ ಇರುವ ಓವರ್‌ಬ್ರಿಡ್ಜ್ ಇಳಿದು ಬರುತ್ತಿದ್ದ ವೇಳೆ ಬೈಕ್ ನಿಯಂತ್ರಣ ತಪ್ಪಿ ನೇರವಾಗಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.
ತೀವ್ರ ವೇಗದ ಪರಿಣಾಮವಾಗಿ ಪ್ರಿನ್ಸ್ ಬೈಕ್‌ನಿಂದ ಎಸೆಯಲ್ಪಟ್ಟು, ತಲೆ ದೇಹದಿಂದ ಪ್ರತ್ಯೇಕಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಸಮಯದಲ್ಲಿ ಪ್ರಿನ್ಸ್ ಹೆಲ್ಮೆಟ್ ಧರಿಸಿರಲಿಲ್ಲ.
ಸೋಶಿಯಲ್ ಮೀಡಿಯಾ ‘ರೀಲ್ಸ್’ ಹುಚ್ಚಾಟ
ಪ್ರಿನ್ಸ್ ಪಟೇಲ್ ಸಾಮಾಜಿಕ ಜಾಲತಾಣಗಳಲ್ಲಿ “PKR Blogger” ಎಂಬ ಹೆಸರಿನಲ್ಲಿ ಪ್ರಸಿದ್ಧನಾಗಿದ್ದು, ಅತೀವೇಗದ ಬೈಕ್ ಸವಾರಿ ಮತ್ತು ರೀಲ್ಸ್‌ಗಾಗಿ ಜನಪ್ರಿಯತೆ ಪಡೆದಿದ್ದ.
ಅಪಘಾತಕ್ಕೂ ಎರಡು ದಿನ ಮೊದಲು, ಆತ ತನ್ನ ಹೊಸ KTM ಬೈಕ್‌ಗೆ “ಲೈಲಾ” ಎಂದು ಹೆಸರಿಟ್ಟು ವೀಡಿಯೊ ಕೂಡಾ ಪೋಸ್ಟ್ ಮಾಡಿದ್ದ.
ಪೊಲೀಸರ ಕ್ರಮ
ಪೊಲೀಸರು ಪ್ರಕರಣ ದಾಖಲಿಸಿ, ಅತಿವೇಗ, ಹೇಲ್ಮೆಟ್ ನಿಯಮ ಉಲ್ಲಂಘನೆ ಮತ್ತು ಅಪಾಯಕಾರಿ ಚಾಲನೆ ಕುರಿತು ತನಿಖೆ ಆರಂಭಿಸಿದ್ದಾರೆ.
ಅರಿವು ಮೂಡಿಸುವ ಸಲುವಾಗಿ, ಅಧಿಕಾರಿಗಳು ಯುವಕರಿಗೆ “ರೀಲ್ಸ್ ಮತ್ತು ಸ್ಟಂಟ್‌ಗಳಿಗಾಗಿ ಜೀವವನ್ನು ಅಪಾಯಕ್ಕೆ ತಳ್ಳಬೇಡಿ” ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.






