ಬಾಕ್ಸ್‌ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಪ್ರಸ್ತುತ ಸಿನಿಮಾ ಒಟಿಟಿ ವೇದಿಕೆಯಲ್ಲೇ ಪ್ರಸಾರವಾಗುತ್ತಿದೆ. ತೆರೆಕಂಡು ಒಂದು ತಿಂಗಳು ಕಳೆದರೂ, ಚಿತ್ರದ ಕೆಲ ಕಲಾವಿದರು ತಮ್ಮ ವಿತರಿಸಿದ ಹಕ್ಕು ಪಡೆದಿಲ್ಲವೆಂದು ತಿಳಿದು ಬಂದಿದೆ. ಒಬ್ಬ ಕಲಾವಿದ ತಮ್ಮ ನೋವನ್ನು ವಿಡಿಯೋ ಮೂಲಕ ವ್ಯಕ್ತಪಡಿಸಿದ್ದಾರೆ.
ಮಹೇಶ್ ಗುರು ಅವರೊಂದು ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ. ಇದರಲ್ಲಿ ತಮಗೆ ಕೊತ್ತಲವಾಡಿ ಸಿನಿಮಾದಲ್ಲಿನ ನಟನೆಗಾಗಿ ಇನ್ನೂ ಹಣ ಬಂದಿಲ್ಲ ಎಂಬುದನ್ನ ತಿಳಿಸಿದ್ದಾರೆ. “ನನ್ನ ಹೆಸರು ಮಹೇಶ್ ಗುರು. ರಂಗಭೂಮಿ ಕಲಾವಿದ. ಸಿನಿಮಾ, ಸೀರಿಯಲ್‌ಗಳಲ್ಲಿ ಕೂಡ ನಟಿಸುತ್ತೇನೆ. ಆಗಸ್ಟ್ 1ರಂದು ಕೊತ್ತಲವಾಡಿ ಎಂಬ ಸಿನಿಮಾ ರಿಲೀಸ್ ಆಯಿತು. ಅದು ನಮ್ಮ ಪಿಎ ಪ್ರೊಡಕ್ಷನ್‌ನ ಮೊದಲ ನಿರ್ಮಾಣ. ಅದರ ಮಾಲೀಕರು ನಮ್ಮ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್. ಸಿನಿಮಾವನ್ನ ಶ್ರೀರಾಜ್ ನಿರ್ದೇಶನ ಮಾಡಿದ್ದಾರೆ. ನಾನು ಇದರಲ್ಲಿ ಪೃಥ್ವಿ ಅಂಬಾರ್ ಅವರ ಸಹನಟನಾಗಿ ಮೂರು ತಿಂಗಳಿಗೂ ಹೆಚ್ಚು ಕಾಲ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ, ಶೂಟಿಂಗ್‌ನಲಿ ಪಾಲ್ಗೊಂಡಿದ್ದೇನೆ. ನಾನು ಈ ಸಿನಿಮಾಗೆ ನೇರವಾಗಿ ನಿರ್ದೇಶಕರ ಕಡೆಯಿಂದ ಆಯ್ಕೆಯಾದೆ. ಪ್ರೊಡಕ್ಷನ್ ಕಡೆಯಿಂದ ಆಗ್ಲೀ, ಮ್ಯಾನೇಜರ್ ಕಡೆಯಿಂದ ಆಗ್ಲೀ ಬಂದಿರಲಿಲ್ಲ. ನಿರ್ದೇಶಕರು ನಮಗೆ ಒಂದು ಪ್ಯಾಕೇಜ್ ಮಾತನಾಡಿದ್ದರು. ತಿಂಗಳಿಗೆ ಇಂತಿಷ್ಟು ಕೊಡ್ತೇವೆ, ಅಂತೆಲ್ಲ ವಿವರಿಸಿ ಹೇಳಿದ್ರು. ನಾವು ಕೂಡ ಖುಷಿಯಿಂದ ಒಪ್ಪಿಕೊಂಡೆವು. ಸಿನಿಮಾ ಶುರುವಾಗೋದಕ್ಕೂ ಮೊದಲೇ ಅಡ್ವಾನ್ಸ್ ಕೊಡ್ತೇವೆ ಎಂದಿದ್ದರು. ಸಿನಿಮಾ ಮುಹೂರ್ತ ಆದ್ರೂ ಬರಲಿಲ್ಲ. ನಾವು ಕೇಳಿದೆವು. ಇನ್ನೂ ಪ್ರೊಡಕ್ಷನ್‌ನಿಂದ ಹಣ ಬಂದಿಲ್ಲ. ಬಂದ ತಕ್ಷಣ ಮಾಡಿಕೊಡ್ತೇವೆ ಎಂದು ಹೇಳಿದ್ರು.”
“ನಿರ್ದೇಶಕರ ಮಾತಿಗೆ ಒಕೆ ಅಂದು, ಶೂಟಿಂಗ್ ಶುರು ಮಾಡಿದೆವು. ಮೊದಲ ಹಂತ, 2ನೇ ಹಂತ ಆಯ್ತು. ಸಿನಿಮಾ ಪೂರ್ತಿಯಾಗಿ ಮುಗೀತು. ಸಾಂಗ್, ಫೈಟ್ ಎಲ್ಲವೂ ಮುಗಿದವು. ಆದರೆ ಹಣದ ಬಗ್ಗೆ ಎಷ್ಟು ಕೇಳಿದ್ರೂ, ಇನ್ನೂ ಪ್ರೊಡಕ್ಷನ್‌ನಿಂದ ಹಣ ಬಂದಿಲ್ಲ ಎಂದು ನಿರ್ದೇಶಕರು ಹೇಳುತ್ತಿದ್ದರು. ಕೊನೆಗೆ ಸಿನಿಮಾ ಡಬ್ಬಿಂಗ್ ಹಂತಕ್ಕೆ ಬಂತು. ಮತ್ತೆ ಕರೆದರು, ಹೋಗಿ ಡಬ್ಬಿಂಗ್ ಕೂಡ ಮಾಡಿದೆವು. ಆಮೇಲೆ ಮತ್ತೆ ಪೇಮೆಂಟ್ ಬಗ್ಗೆ ಕೇಳಿದೆವು. ಆಗಲೂ ನಿರ್ದೇಶಕರು ಅದನ್ನೇ ಹೇಳಿದರು. ಪ್ರೊಡಕ್ಷನ್‌ನಿಂದ ಹಣ ಬಂದಿಲ್ಲ ಎಂದು ಹೇಳಿದ್ರು. ಆಮೇಲೆ ನಮ್ಮ ಕರೆಗಳನ್ನ ಸ್ವೀಕರಿಸೋದನ್ನೇ ಬಿಟ್ಟರು. ಆಮೇಲೆ ಟೀಸರ್, ಟ್ರೇಲರ್ ಅದ್ಧೂರಿಯಾಗಿ ರಿಲೀಸ್ ಆಯಿತು. ಪ್ರೆಸ್ ಮೀಟ್ ಮಾಡಿದ್ರು. ಅದ್ಯಾವುದನ್ನೂ ನಮ್ಮನ್ನ ಕರೆಯಲಿಲ್ಲ. ಎಲ್ಲವೂ ಮೀಡಿಯಾದಲ್ಲಿ ಬಂದ್ಮೇಲೆ ನಮಗೆ ಗೊತ್ತಾಗ್ತಿತ್ತು. ಆಗೆಲ್ಲ ಕಾಲ್ ಮಾಡ್ತಾನೇ ಇದ್ವಿ, ಒಮ್ಮೆಯೂ ರಿಸೀವ್ ಮಾಡ್ಲಿಲ್ಲ. ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿ, ಈಗ ಒಟಿಟಿಗೂ ಬಂದಿದೆ. ಇಷ್ಟಾದ್ರೂ ನಮಗೆ ನಮ್ಮ ಹಣ ಬಂದಿಲ್ಲ. ಇನ್ನೂ ಯಾವ ತರ ಕೇಳಬೇಕು ಗೊತ್ತಾಗ್ಲಿಲ್ಲ. ನಿರ್ಮಾಪಕರ ಬಳಿ ಹೋಗೋಣ ಅಂದ್ರೆ, ಅವರ ಹತ್ತಿರ ಹೋಗೋದು ಅಷ್ಟು ಸುಲಭ ಆಗಿರ್ಲಿಲ್ಲ. ಈ ವಿಡಿಯೊ ನಮ್ಮ ಪ್ರೊಡ್ಯೂಸರ್ ಮೇಡಂ ಅವರಿಗೆ ತಲುಪೋವರೆಗೂ ಶೇರ್ ಆಗಲಿ”
ಮಹೇಶ್ ಗುರು ಅವರು ತಮ್ಮ ವಿಡಿಯೋದಲ್ಲಿ ಈ ಕುರಿತು ವಿವರ ನೀಡಿದ್ದಾರೆ. ನಿರ್ದೇಶಕರಿಗೆ ಪ್ರೊಡ್ಯೂಸರ್ ಪುಷ್ಪಾ ಅವರಿಂದ ನಿಜವಾಗಿಯೂ ಹಣ ಬಂದಿದೆಯೇ ಅಥವಾ ಹಣ ಬಂದಿದ್ದರೂ ಕಲಾವಿದರಿಗೆ ನೀಡಲಾಗಲಿಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.
ನಮಗೆ ನಮ್ಮ ಹಣ ಬಂದಿಲ್ಲ” ಕೊತ್ತಲವಾಡಿ ಸಿನಿಮಾದಲ್ಲಿ ನಟಿಸಿದ್ದ ಕಲಾವಿದನ ಅಳಲು!
By krutika naik
On: September 17, 2025 8:12 AM
---Advertisement---







2 thoughts on “ನಮಗೆ ನಮ್ಮ ಹಣ ಬಂದಿಲ್ಲ” ಕೊತ್ತಲವಾಡಿ ಸಿನಿಮಾದಲ್ಲಿ ನಟಿಸಿದ್ದ ಕಲಾವಿದನ ಅಳಲು!”