“ನಾಳೆ ಬದುಕಿರ್ತಿನೋ ಇಲ್ವೋ, ಏನ್ ಆಗ್ತದೋ ಗೊತ್ತಿಲ್ಲ” ಎಂದು ರೀಲ್ಸ್ ಮಾಡಿದ್ದ ಸ್ವಾಮೀಜಿ ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿ ನಡೆದಿದೆ. ಆಂಧ್ರ ಮೂಲದ ಸ್ವಾಮೀಜಿ ಲಕ್ಷ್ಮಯ್ಯ ಅವರು ನಿನ್ನೆ (ಭಾನುವಾರ) ರೀಲ್ಸ್ ಮಾಡಿದ್ದ ನಂತರ ಸ್ನಾನಕ್ಕೆ ಹೋಗಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ಮುಳುಗುತ್ತಿದ್ದ ವೇಳೆ ಸ್ಥಳೀಯರು ನೆರವಿಗೆ ಧಾವಿಸಿ ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ ಅಲ್ಲಿ ವೈದ್ಯರು ಲಭ್ಯವಿಲ್ಲದ ಕಾರಣ, ಅವರನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯೆಯೇ ಲಕ್ಷ್ಮಯ್ಯ ಪ್ರಾಣ ಕಳೆದುಕೊಂಡರು.
ಆನೆಗೊಂದಿಯ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋದ ಲಕ್ಷ್ಮಯ್ಯ ಸ್ವಾಮೀಜಿಯು ದೆವ್ವ ಬಿಡಿಸಲು ಅಲ್ಲಿಗೆ ಬಂದಿದ್ದಾನೆ ಎಂಬ ಮಾಹಿತಿ ದೊರೆತಿದೆ. ಆದರೆ ಆತ ಸ್ನೇಹಿತರ ಮನೆಗೆ ಬಂದಿದ್ದೆವು ಎಂದು ಸ್ವಾಮೀಜಿಯ ಗೆಳೆಯರು ಹೇಳುತ್ತಿದ್ದಾರೆ. ನಾಳೆ ಜೀವಂತ ಇರ್ತಿನೋ ಇಲ್ವೋ ಎಂದು ರೀಲ್ಸ್ ಮಾಡಿದ ಸ್ವಾಮೀಜಿಯ ದುಃಖಾಂತ ಸಂಭವಿಸಿದ್ದು, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಕರ್ಕೇಶ್ವರ ಗ್ರಾಮದ ಮೇಲ್ಪಾಲ್ ಮೂಲದ 27 ವರ್ಷದ ಪೂರ್ಣೇಶ್, ಗುರುವಾರ ಗೇರುಬೈಲು ಗ್ರಾಮದ ಬಳಿ ನಡೆದ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಮೇಲ್ಪಾಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೆಲಸ ಮಾಡುತ್ತಿದ್ದ ಪೂರ್ಣೇಶ್, ಗೊಬ್ಬರದ ಚೀಲಗಳನ್ನು ಪಿಕ್ಅಪ್ ವಾಹನದಲ್ಲಿ ತುಂಬಿಕೊಂಡು ಗೇರುಬೈಲಿನ ಖಾಸಗಿ ಎಸ್ಟೇಟ್ಗೆ ಕರೆದೊಯ್ದಿದ್ದರು.







1 thought on “ಕೊಪ್ಪಳ: ನಾಳೆ ಬದುಕಿರ್ತಿನೋ ಇಲ್ವೋ ಎಂದು ರೀಲ್ಸ್ ಹಾಕಿದ್ದ ಸ್ವಾಮೀಜಿ ಮೃತ್ಯು!”