---Advertisement---

ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರೋದು ಉತ್ತಮ’: ಇಲಾಖೆ ವಿರುದ್ಧ ತೀವ್ರ ಅಸಮಾಧಾನ

On: February 2, 2026 7:03 AM
Follow Us:
---Advertisement---

ಕೊಪ್ಪಳ (ಫೆ.02): ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲ್ಲೂಕಿನ ಹನಮಸಾಗರ ಪೊಲೀಸ್ ಠಾಣೆಯ ಪೇದೆ ಬ್ರಹ್ಮಾನಂದ ತಮ್ಮ ವಾಟ್ಸಾಪ್ ಸ್ಟೇಟಸ್ ಮೂಲಕ ಪೊಲೀಸ್ ಕೆಲಸದ ಒತ್ತಡ ಮತ್ತು ರಜೆರಹಿತ ದುಡಿಮೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಪೋಸ್ಟ್‌ನಲ್ಲಿ ಹೇಳಿದಂತೆ, “ವರ್ಷದ 365 ದಿನವೂ ಕೆಲಸ, ಒಂದು ದಿನವೂ ರಜೆ ಇಲ್ಲ. ಇಂತಹ ಕೆಲಸ ಮಾಡುವುದಕ್ಕಿಂತ ರಸ್ತೆಯಲ್ಲಿ ನಿಂತು ಎಗ್ ರೈಸ್ ಮಾರೋದು ಉತ್ತಮ”.

ಇದನ್ನು ಓದಿ: SHOCKING : ‘AI’ ಸಲಹೆ ನಂಬಿ ‘HIV’ ಔಷಧಿ ಸೇವಿಸಿದ ರೋಗಿ ಆಸ್ಪತ್ರೆಗೆ ದಾಖಲು – ವೈದ್ಯರೇ ಶಾಕ್!

ಇದನ್ನು ಓದಿ: ಮದುವೆ ಆಹ್ವಾನ ನೀಡುವ ನೆಪದಲ್ಲಿ ಮನೆಗೆ ನುಗ್ಗಿದ ಗ್ಯಾಂಗ್ ..ಲಕ್ಷಾಂತರ ರೂ. ಮೌಲ್ಯದ ವಸ್ತುಗಳ ದರೋಡೆ!

ಇದು ಇದೀಗ ಇಡೀ ರಾಜ್ಯದ ಗಮನ ಸೆಳೆದಿದ್ದು, ಹೊಸ ನೇಮಕಾತಿಗೆ ಆಸಕ್ತಿ ಹೊಂದಿರುವ ಯುವಕರಿಗೆ ಸಹ ಎಚ್ಚರಿಕೆ ನೀಡುವ ಧಾಟಿಯಲ್ಲಿದೆ. ಬ್ರಹ್ಮಾನಂದನ ಅಭಿಪ್ರಾಯದ ಪ್ರಕಾರ, “ಪೊಲೀಸ್ ಇಲಾಖೆಗೆ ಬರುವ ಮೊದಲು ನೂರು ಬಾರಿ ಯೋಚಿಸಿ, ಬೇರೆ ಇಲಾಖೆ ಸೇರುವುದು ಉತ್ತಮ”.

ವಾಟ್ಸಾಪ್ ಸ್ಟೇಟಸ್ ವೈರಲ್ ಆಗುತ್ತಲೇ, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ತನಿಖೆಗೆ ಆದೇಶಿಸಿದ್ದಾರೆ. ಪೇದೆ ಬ್ರಹ್ಮಾನಂದನ ವರ್ತನೆ ಮತ್ತು ಅವರು ಉಲ್ಲೇಖಿಸಿರುವ ಸಮಸ್ಯೆಗಳ ಕುರಿತು ವರದಿ ಬಂದ ಬಳಿಕ ಶಿಸ್ತು ಕ್ರಮ ಜರುಗಿಸಬಹುದಾದ ಸಾಧ್ಯತೆ ಇದೆ.

ಈ ಘಟನೆಯು ಪೊಲೀಸ್ ಸಿಬ್ಬಂದಿಯ ಕೆಲಸದ ಒತ್ತಡ, ರಜೆಗಳ ಲಭ್ಯತೆ ಮತ್ತು ಮಾನಸಿಕ ಒತ್ತಡ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟಿಸಿದೆ.

ಇನ್ನು ಓದಿ: 18 ತಿಂಗಳಲ್ಲಿ 4 ಕೋಟಿ ತೆರಿಗೆ ಕಟ್ಟಿದ ಉದ್ಯಮಿ, ಈಗ ಭಾರತ ತೊರೆದು ವಿದೇಶಕ್ಕೆ ಕಂಪನಿ ಶಿಫ್ಟ್..ಕಾರಣ ಕೇಳಿದ್ರೆ ಶಾಕ್ಕ್!

ಇದನ್ನು ಓದಿ: ಹೆಂಡತಿಗೆ ಮಾಡಿದ ಅವಮಾನಕ್ಕೆ ಸೇಡು: ಎಲೂರಿನಲ್ಲಿ 7 ಕೋಟಿ ರೂ. ಚಿನ್ನ ಕಳ್ಳತನ ಮಾಡಿದ ಗಂಡ

Join WhatsApp

Join Now

RELATED POSTS