ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ತಮ್ಮ 53ನೇ ಹುಟ್ಟುಹಬ್ಬವನ್ನು ಇಂದು ಬೆಂಗಳೂರಿನಲ್ಲಿ ಅಭಿಮಾನಿಗಳ ಜೊತೆ ಸೇರಿ ಸಂಭ್ರಮಿಸಿದರು. ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ವಿಶೇಷವಾಗಿಸಿಕೊಂಡ ಅವರು, ಎಲ್ಲರ ಪ್ರೀತಿ ಮತ್ತು ಶುಭಾಶಯಗಳನ್ನು ಸ್ವೀಕರಿಸಿದರು. ಹುಟ್ಟುಹಬ್ಬದ ಸಂದರ್ಭದಲ್ಲಿ ಸ್ಥಳವೇ ಹಬ್ಬದ ವಾತಾವರಣ ತಾಳಿದ್ದು, ಅಭಿಮಾನಿಗಳ ಉತ್ಸಾಹ ಮತ್ತು ಸಂಭ್ರಮದಿಂದ ಕಾರ್ಯಕ್ರಮ ಇನ್ನಷ್ಟು ಭರ್ಜರಿಯಾಗಿತ್ತು. ರಾತ್ರಿ 12 ಗಂಟೆಗೆ ಕೇಕ್ ಕತ್ತರಿಸಿ ಫ್ಯಾನ್ಸ್ ಜೊತೆ ಸಂಭ್ರಮಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಬಂದ ಅಭಿಮಾನಿಗಳು ಬೆಂಗಳೂರಿನ ನಂದಿ ಲಿಂಕ್ ಮೈದಾನದಲ್ಲಿ ಜಮಾಯಿಸಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು. ಎಲ್ಲೆಡೆ “ಕಿಚ್ಚ ಕಿಚ್ಚ” ಘೋಷಣೆಗಳು ಮೊಳಗುತ್ತಿದ್ದರೆ, ಅಭಿಮಾನಿಗಳ ಸಂಭ್ರಮ ಗಗನ ಮುಟ್ಟಿತು. ಸ್ಯಾಂಡಲ್‌ವುಡ್‌ನಲ್ಲಿ 28 ವರ್ಷಗಳ ಪಯಣ ಪೂರೈಸಿರುವ ಸುದೀಪ್ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ಮ್ಯಾಕ್ಸ್ ಚಿತ್ರ ಭರ್ಜರಿ ಯಶಸ್ಸು ಕಂಡು ಸಂಭ್ರಮಕ್ಕೆ ಮತ್ತಷ್ಟು ಕಳೆ ಸೇರಿಸಿತು.
ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮಕ್ಕೆ ಹೆಚ್ಚುವರಿ ಕಳೆ ನೀಡುತ್ತಾ, ಅವರ ಹೊಸ ಸಿನಿಮಾ ಮಾರ್ಕ್ ಚಿತ್ರದ ಟೈಟಲ್ ಟೀಸರ್ ಬಿಡುಗಡೆಗೊಂಡಿದೆ. ಕಿಚ್ಚನ ಹೊಸ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಕ್ರಿಸ್‌ಮಸ್‌ಗೆ ಚಿತ್ರ ಬಿಡುಗಡೆಯಾಗಲಿದ್ದು, ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸುದೀಪ್ ವಿಶೇಷ ಉಡುಗೊರೆ ನೀಡಿದ್ದಾರೆ. ಇದೇ ವೇಳೆ ಸೆಪ್ಟೆಂಬರ್ ಅಂತ್ಯದಿಂದ ಬಿಗ್ ಬಾಸ್ ಆರಂಭವಾಗಲಿದ್ದು, ಕಿರುತೆರೆಯಲ್ಲಿಯೂ ಕಿಚ್ಚ ಮಿಂಚಲಿದ್ದಾರೆ.
ಇನ್ನು,ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಚಿತ್ರರಂಗದ ನಟ್ಟು ಬೋಲ್ಟು ಟೈಟ್ ಹೇಳಿಕೆಯ ಹಿಂದೆ ಹಿರಿಯ ನಟ ಸಾಧು ಕೋಕಿಲ ಕಿತಾಪತಿ ಇದೆ ಎಂದು ನಟ ಕಿಚ್ಚ ಸುದೀಪ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಡಿಕೆಶಿ ಹೇಳಿಕೆಯ ಬಗ್ಗೆ ಪ್ರಸ್ತಾಪ ಮಾಡಿದರು. ಒಂದು ವೇಳೆ ನೀವು ರಾಜಕೀಯಕ್ಕೆ ಬಂದರೆ ನೀವು ಬದಲಾಗುತ್ತೀರೋ ಅಥವಾ ರಾಜಕೀಯವೇ ನಿಮ್ಮನ್ನು ಬದಲಾಯಿಸುತ್ತೋ ಗೊತ್ತಿಲ್ಲ. ಯಾಕೆಂದರೆ ಇಲ್ಲಿಯವರೆಗೆ ಬಂದವರೆಲ್ಲ ರಾಜಕೀಯದೊಳಗೆ ಹೊರಟು ಹೋಗಿದ್ದಾರೆ. ಹೀಗಾಗಿ ನೀವು ಒಂದು ವೇಳೆ ರಾಜಕೀಯಕ್ಕೆ ಬಂದರೆ ನಟ್ಟು ಬೋಲ್ಟ್ ಟೈಟ್ ಮಾಡುತ್ತೀರಿ ಅಂದ್ರೆ ಯಾವ ವಿಚಾರದ್ದಾಗಿರಬಹುದು. ಹಾಗೆಯೇ ಯಾವುದನ್ನು ನೋಡಿದಾಗ ನಿಮಗೆ ರಾಜಕೀಯಕ್ಕೆ ಬರಬೇಕು ಅನಿಸುತ್ತೆ ಎಂದು ಮಾಧ್ಯಮ ಮಿತ್ರರೊಬ್ಬರು ಪ್ರಶ್ನೆ ಹಾಕಿದ್ದಾರೆ.
ಇದಕ್ಕೆ ಉತ್ತರಿಸಿದ ಕಿಚ್ಚ, ಈವಾಗ ನೀವು ಹೇಳಿದ್ರಲ್ವ ಹೋದವರೆಲ್ಲ ಚೇಂಜ್ ಆಗುತ್ತಾರೆ ಅಂತ. ಆ ಚೇಂಜ್ ಆಗದಂತೆ ನಾನು ಟೈಟ್ ಮಾಡಿಕೊಳ್ಳುತ್ತೇನೆ ಎಂದರು.
ನಟ್ಟು ಬೋಲ್ಟು ಎಂದ್ರೆ ಡಿಕೆ ಶಿವಕುಮಾರ್ ಸಾಹೇಬ್ರು ಮಾತ್ರವೇ ನೆನಪಿಗೆ ಬರ್ತಾರಾ? ನಿಜ ಹೇಳಬೇಕು ಅಂದ್ರೆ ನಟ್ಟು ಬೋಲ್ಟು ವಿಚಾರದಲ್ಲಿ ಡಿಕೆ ಶಿವಕುಮಾರ್ ಅವರದ್ದು ಏನಿಲ್ಲ. ಈ ಎಲ್ಲ ಕಿತಾಪತಿ ಮಾಡಿದವರು ಸಾಧುಕೋಕಿಲ ಎಂದು ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಎಲ್ಲರನ್ನೂ ಕಾರ್ಯಕ್ರಮಕ್ಕೆ ಕರೆದರೆ ನಾನು ಹೇಗೆ ನಿಭಾಯಿಸಲಿ? ಯಾರಿಗೆ ಸೆಕ್ಯುರಿಟಿ ಕೊಡಲಿ? ಎಂದು ಸಾಧು ಕೋಕಿಲ ಅವರು ಆ ಮೇಲೆ ಹೇಳ್ತಾರೆ. ಇದನ್ನು ಅವರು ಮೊದಲೇ ಹೇಳಬಹುದಿತ್ತಲ್ವಾ? ಅಂದು ಡಿಕೆ ಶಿವಕುಮಾರ್ ಅವರು ಹೇಳಿದಾಗ ಸಾಧು ಸುಮ್ಮನೆ ನಿಂತಿದ್ರು ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ.
53ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್!ಅಭಿಮಾನಿಗಳ ಜೊತೆ ಹುಟ್ಟುಹಬ್ಬದ ಸಂಭ್ರಮ.
By krutika naik
On: September 2, 2025 8:26 AM
---Advertisement---






