ತಿರುವನಂತಪುರಂ ಸಮೀಪದ ನೆಡುಮಂಗಾಡ್ನಲ್ಲಿ 13 ವರ್ಷದ ಬಾಲಕನ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ 60 ವರ್ಷದ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಈ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.
ಇದನ್ನು ಓದಿ: ವಿಜಯಪುರ: 5 ವರ್ಷದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ, ಶಿವಮೊಗ್ಗದಲ್ಲಿ ಮಗು ಹೆತ್ತ 15ರ ಬಾಲಕಿ!
ಆರೋಪಿ ಶಿಯಾದ್ ಮೊಯ್ದೀನ್ (60) ಎಂಬ ಆಟೋ ಚಾಲಕ ಕಳೆದ ಅಕ್ಟೋಬರ್ನಿಂದ ಪತ್ತಮಕಲ್ಲುವಿನ ಮೈದಾನಕ್ಕೆ ಸೈಕಲ್ ಕಲಿಯಲು ಬರುತ್ತಿದ್ದ ಬಾಲಕನೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ನಂತರ ಆತನನ್ನು ಆಟೋದಲ್ಲಿ ಖಾಲಿ ಹೊಲಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಳಿಕ ಬಾಲಕನಿಗೆ ಕೇವಲ 10 ರೂಪಾಯಿ ನೀಡಿ, ವಿಷಯ ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ನಿನ್ನೆ ಖಾಲಿ ಹೊಲದಲ್ಲಿ ಅನುಮಾನಾಸ್ಪದವಾಗಿ ಆಟೋ ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಪರಿಶೀಲನೆ ನಡೆಸಿದಾಗ ಆರೋಪಿಯ ಕೃತ್ಯ ಬಯಲಾಗಿದೆ. ಆ ವೇಳೆ ಸಾರ್ವಜನಿಕರು ಆರೋಪಿಯನ್ನು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸ್ ವಿಚಾರಣೆಯಲ್ಲಿ ಬಾಲಕನು ತನಗೆ ಪದೇ ಪದೇ ಕಿರುಕುಳ ನೀಡಲಾಗುತ್ತಿತ್ತು ಎಂದು ಹೇಳಿಕೆ ನೀಡಿದ್ದಾನೆ. ಈ ಹೇಳಿಕೆಯ ಆಧಾರದ ಮೇಲೆ ಶಿಯಾದ್ ಮೊಯ್ದೀನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ (ರಿಮಾಂಡ್) ಕಳುಹಿಸಿದ್ದಾರೆ.







2 thoughts on “ಸೈಕಲ್ ಕಲಿಯಲು ಬಂದ 13 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: 60 ವರ್ಷದ ಆಟೋ ಚಾಲಕ ”
Comments are closed.