ಮಾನವನ ಜೀವನದಲ್ಲಿ ಧರ್ಮವು ಅತ್ಯಂತ ಮುಖ್ಯವಾದ ಸ್ಥಾನವನ್ನು ಹೊಂದಿದೆ. ಧರ್ಮವೆಂದರೆ ಕೇವಲ ಧಾರ್ಮಿಕ ಆಚರಣೆ ಅಥವಾ ಪಾಠವಲ್ಲ. ಅದು ಒಬ್ಬನ ನೈತಿಕತೆ, ಸತ್ಯ, ನೀತಿ, ಕರ್ತವ್ಯ ಮತ್ತು ಮೌಲ್ಯಗಳ ಸಂಕಲನವಾಗಿದೆ.
ಭಾರತದ ಸಂಸ್ಕೃತಿಯಲ್ಲಿ ಧರ್ಮಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ನಮ್ಮ ಶ್ರುತಿಗಳು ಹೇಳುತ್ತವೆ. ಅಂದರೆ ಧರ್ಮವನ್ನು ರಕ್ಷಿಸುವವನು, ಧರ್ಮವೇ ಅವನನ್ನು ರಕ್ಷಿಸುತ್ತದೆ ಎಂಬರ್ಥ.
ಧರ್ಮವು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯಗಳ ಮೂಲಕ ವ್ಯಕ್ತವಾಗುತ್ತದೆ. ಪೋಷಕರಿಗೆ ವಿಧೇಯರಾಗುವುದು, ಸಮಾಜದಲ್ಲಿ ಸತ್ಯನಿಷ್ಠರಾಗಿರುವುದು, ಪರಿಸರವನ್ನು ಕಾಪಾಡುವುದು, ಪ್ರಾಣಿಗಳಿಗೆ ದಯೆ ತೋರಿಸುವುದು – ಇವೆಲ್ಲವೂ ಧರ್ಮದ ಅಂಗಗಳೇ.
ಆದರೇ ಇಂದಿನ ಪ್ರಪಂಚದಲ್ಲಿ ಧ್ರಮದ ಬಗ್ಗೆ ನಂಬಿಕೆ ತುಂಬಾ ಸೂಕ್ಷ್ಮವಾದ ವಿಷಯ. ಇತ್ತೀಚಿನ ದಿನಗಳಲ್ಲಿ ವಿಭಿನ್ನ ಜನರಿಗೆ ನಂಬಿಕೆ ವಿಭಿನ್ನವಾಗಿದೆ. ಈ ವಿಷಯವು ಇತ್ತೀಚಿನ ದಿನಗಳಲ್ಲಿ ಬಹಳ ವಿವಾದಾತ್ಮಕವಾಗಿದೆ. ಅನೇಕರು ಧರ್ಮದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾರೆ, ಚರ್ಚೆಗಳನ್ನು ನಡೆಸುತ್ತಾರೆ ಮತ್ತು ಕಳವಳಗಳನ್ನು ವ್ಯಕ್ತಪಡಿಸುತ್ತಾರೆ.
ನಾವು ಅದರ ಬಗ್ಗೆ ಯೋಚಿಸಿದರೆ, ಯಾವುದೇ ಧರ್ಮವನ್ನು ಅನುಸರಿಸುವುದು ಈ ಕಾಲದಲ್ಲಿ ಸ್ವಂತ ಆಯ್ಕೆಯಾಗಿದ್ಧು ಮತ್ತು ಅದು ಜನರ ಮೇಲೆ ಅವಲಂಬಿತವಾಗಿರುತ್ತದೆ. ಕೆಲವರು ಧಾರ್ಮಿಕ ಆಚರಣೆಗಳನ್ನು ಅನುಸರಿಸುತ್ತಾರೆ, ಇನ್ನು ಕೆಲವರು ಅನುಸರಿಸುವುದಿಲ್ಲ.
ಆದರೆ ಇಲ್ಲೊಂದು ಸ್ಥಳವು ಧಾರ್ಮಿಕ ಆಚರಣೆಗಳನ್ನು ಅನುಸರಿಸದಿದ್ದಕ್ಕಾಗಿ ಶಿಕ್ಷೆಯನ್ನು ನೀಡುತ್ತಿದೆ!! ಹೌದು ಇಲ್ಲಿ ನೀವೇನಾದರು ಪ್ರಾರ್ಥನೆ ಬಿಟ್ಟರೆ ಜೈಲು ಶಿಕ್ಷೆ ಕಂಡಿತ. ಈ ಮುಸ್ಲಿಂ ದೇಶವು ಕಠಿಣ ಷರಿಯಾ ಕಾನೂನುಗಳನ್ನು ಪರಿಚಯಿಸಿದೆ.
ಮಲೇಷ್ಯಾದ ಟೆರೆಂಗಾನು ರಾಜ್ಯದಲ್ಲಿ, ಹೊಸ ಮತ್ತು ಗಂಭೀರವಾದ ಕಾನೂನನ್ನು ಅಳವಡಿಸಿಕೊಳ್ಳಲಾಗಿದೆ. ಈ ಕಾನೂನಿನಡಿಯಲ್ಲಿ, ಶುಕ್ರವಾರದ ಪ್ರಾರ್ಥನೆಗಳಿಗೆ ಹಾಜರಾಗದಿದ್ದರೆ ಮುಸ್ಲಿಂ ಪುರುಷರಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಕ್ರಮವನ್ನು ಸಂಪೂರ್ಣ ಷರಿಯಾ ಕಾನೂನನ್ನು ಜಾರಿಗೆ ತರುವ ದಿಟ್ಟ ಹೆಜ್ಜೆ ಎಂದು ಕರೆಯಲಾಗುತ್ತದೆ.
ಮಲೇಷಿಯನ್ ಇಸ್ಲಾಮಿಕ್ ಪಕ್ಷ ಆಡಳಿತದಲ್ಲಿರುವ ಟೆರೆಂಗಾನು, ಜುಮ್ಮಾ ಪ್ರಾರ್ಥನೆಗೆ ಹಾಜರಾಗದಿದ್ದರೆ ಜೈಲು ಶಿಕ್ಷೆ, 3,000 ರಿಂಗಿಟ್ (US$710) ವರೆಗೆ ದಂಡ ಅಥವಾ ಎರಡನ್ನೂ ಎದುರಿಸಬೇಕಾಗುತ್ತದೆ ಎಂದು ಘೋಷಿಸಿತು. 1 USD = ರೂ 86 ತೆಗೆದುಕೊಳ್ಳುವುದರಿಂದ, ಆದ್ದರಿಂದ, US$710 ≈ ರೂ 61,060 ಆಗುತ್ತದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಮಲೇಷ್ಯಾದ ಟೆರೆಂಗಾನು ರಾಜ್ಯವು ಶರಿಯಾ ಕಾನೂನನ್ನು ಜಾರಿಗೊಳಿಸಲು ಪ್ರಾರಂಭಿಸುವುದಾಗಿ ಘೋಷಿಸಿದೆ, ಇದರಲ್ಲಿ ಮಾನ್ಯ ಕಾರಣವಿಲ್ಲದೆ ಶುಕ್ರವಾರದ ಪ್ರಾರ್ಥನೆಗಳಿಗೆ ಹಾಜರಾಗದ ಮುಸ್ಲಿಂ ಪುರುಷರು ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಅನುಭವಿಸ ಬೇಕು.






