---Advertisement---

ಜನಪ್ರಿಯತೆಯ ಶಿಖರದಲ್ಲಿದ್ದ ಇನ್ನೋವಾ ಕ್ರೈಸ್ಟಾಗೆ ಅನಿವಾರ್ಯ ವಿದಾಯ..!

On: January 6, 2026 8:49 AM
Follow Us:
---Advertisement---

ಜನರ ಬೇಡಿಕೆ ಹಾಗೂ ಮಾರಾಟದ ಅಗ್ರಸ್ಥಾನದಲ್ಲಿರುವ ಟೋಯೋಟಾ ಇನ್ನೋವಾ ಕ್ರೈಸ್ಟಾ ಕಾರಿನ ಜನಪ್ರಿಯತೆಯನ್ನು ವಿವರಿಸುವ ಅಗತ್ಯವೇ ಇಲ್ಲ. ರಾಜಕಾರಣಿಗಳು, ಉದ್ಯಮಿಗಳು ಮಾತ್ರವಲ್ಲದೆ ಸಾಮಾನ್ಯ ಕುಟುಂಬಗಳಿಗೂ ಇನ್ನೋವಾ ಕ್ರೈಸ್ಟಾ ಮೊದಲ ಆಯ್ಕೆಯಾಗಿದೆ.

ಇದನ್ನು ಓದಿ: 2026 ರ ಅತ್ಯುತ್ತಮ ಮೈಲೇಜ್ ಬೈಕ್‌ಗಳು – ಹೆಸರು, ಮೈಲೇಜ್, ಬೆಲೆ ಮತ್ತು ವಿವರಗಳು

ರಸ್ತೆಯಲ್ಲಿ ಒಂದೇ ಕ್ಷಣ ಕಣ್ಣಾಡಿಸಿದರೂ ಎಲ್ಲೆಡೆ ಕ್ರೈಸ್ಟಾ ಕಾಣಿಸಿಕೊಳ್ಳುತ್ತದೆ. ಆದರೆ ಇಷ್ಟೊಂದು ಜನಪ್ರಿಯತೆಯ ನಡುವೆಯೇ ಈ ಕಾರು ಸ್ಥಗಿತಗೊಳ್ಳುತ್ತಿರುವುದು ಅನೇಕರಿಗೆ ಆಶ್ಚರ್ಯ ತಂದಿದೆ.ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಟೋಯೋಟಾ ಇನ್ನೋವಾ ಕ್ರೈಸ್ಟಾ ಕಾರು 2027ರ ಮಾರ್ಚ್ 1ರಿಂದ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.

2026ರಿಂದ ಉತ್ಪಾದನೆಯನ್ನು ಹಂತ ಹಂತವಾಗಿ ಕಡಿತಗೊಳಿಸಲಾಗುತ್ತದೆ. 2027ರ ಆರಂಭದಿಂದ ಬುಕಿಂಗ್ ಕೂಡ ಸ್ಥಗಿತಗೊಂಡು, ಮಾರ್ಚ್ ತಿಂಗಳಲ್ಲಿ ಉತ್ಪಾದನೆ ಸಂಪೂರ್ಣವಾಗಿ ನಿಲ್ಲಲಿದೆ. ಇನ್ನೋವಾ ಕಾರಿನ ಭಾರಿ ಯಶಸ್ಸಿನ ಹಿನ್ನೆಲೆ, ಟೋಯೋಟಾ 2015ರಲ್ಲಿ ಇನ್ನೋವಾವನ್ನು ‘ಕ್ರೈಸ್ಟಾ’ ರೂಪದಲ್ಲಿ ಪರಿಚಯಿಸಿತು.

ಭಾರತದಲ್ಲಿ ಇದು 2016ರಲ್ಲಿ ಲಾಂಚ್ ಆಯಿತು. ಹೆಚ್ಚು ಆಕರ್ಷಕ ವಿನ್ಯಾಸ, ಆರಾಮದಾಯಕ ಪ್ರಯಾಣ ಅನುಭವದ ಕಾರಣ ಕ್ರೈಸ್ಟಾ ಕಡಿಮೆ ಅವಧಿಯಲ್ಲೇ ಭಾರಿ ಜನಪ್ರಿಯತೆ ಗಳಿಸಿತು. 2025ರಲ್ಲಿ ಕ್ರೈಸ್ಟಾ ತನ್ನ 10ನೇ ವರ್ಷದ ಸಂಭ್ರಮವನ್ನು ಆಚರಿಸಿತು. ಎಂಪಿವಿ ಸೆಗ್ಮೆಂಟ್‌ನಲ್ಲಿ ಇನ್ನೋವ ಕ್ರೈಸ್ಟಾಗೆ ನೇರ ಪೈಪೋಟಿ ನೀಡುವ ಕಾರು ಇನ್ನೂ ಮಾರುಕಟ್ಟೆಯಲ್ಲಿ ಇಲ್ಲವೆಂದೇ ಹೇಳಬಹುದು.
ಆದರೆ ಇನ್ನೋವಾ ಕ್ರೈಸ್ಟಾ ಸ್ಥಗಿತಗೊಳ್ಳಲು ಪ್ರಮುಖ ಕಾರಣವಾಗಿರುವುದು CAFE 3 (ಕಾರ್ಪೊರೇಟ್ ಎವರೇಜ್ ಫ್ಯೂಯೆಲ್ ಎಕಾನಮಿ) ನಿಯಮ.

ಈ ನಿಯಮ ಮುಂದಿನ ವರ್ಷದಿಂದ ಜಾರಿಯಾಗಲಿದ್ದು, ಹಲವಾರು ಕಾರು ಮಾದರಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಮೈಲೇಜ್ ಮತ್ತು ಎಮಿಷನ್ ನಿಯಮಗಳು ಮತ್ತಷ್ಟು ಕಠಿಣವಾಗುತ್ತಿವೆ. 2.4 ಲೀಟರ್ ಡೀಸಲ್ ಎಂಜಿನ್ ಹೊಂದಿರುವ ಕ್ರೈಸ್ಟಾ ಈ ಹೊಸ ನಿಯಮಗಳಿಗೆ ಹೊಂದಿಕೊಳ್ಳುವುದು ಕಷ್ಟಕರವಾಗಿರುವುದರಿಂದ, ಎಂಪಿವಿ ಉತ್ಪಾದನೆ ಮುಂದುವರಿಸುವುದು ಸವಾಲಾಗಿದೆ. ಹೀಗಾಗಿ ಕ್ರೈಸ್ಟಾ ಸ್ಥಗಿತ ಅನಿವಾರ್ಯವಾಗಿದೆ.

ಮೊದಲಿಗೆ 2025ರ ಅಂತ್ಯದೊಳಗೆ ಕ್ರೈಸ್ಟಾವನ್ನು ಸ್ಥಗಿತಗೊಳಿಸುವ ಯೋಜನೆಯನ್ನು ಟೋಯೋಟಾ ಮಾಡಿಕೊಂಡಿತ್ತು. ಆದರೆ ಭಾರಿ ಬೇಡಿಕೆ ಹಾಗೂ ಎಂಪಿವಿ ಮಾರಾಟದಲ್ಲಿ ನಂಬರ್–1 ಸ್ಥಾನದಲ್ಲಿದ್ದ ಕಾರಣ ಈ ನಿರ್ಧಾರವನ್ನು ಮುಂದೂಡಲಾಗಿತ್ತು. ಈಗ CAFE 3 ನಿಯಮ ಜಾರಿ ಖಚಿತಗೊಂಡಿರುವುದರಿಂದ, ಹೆಚ್ಚಿನ ಬೇಡಿಕೆಯಿದ್ದರೂ ಕ್ರೈಸ್ಟಾಗೆ ವಿದಾಯ ಹೇಳಲೇಬೇಕಾಗಿದೆ.
ಈ ನಿಯಮಗಳಿಗೆ ಹೊಂದಿಕೊಳ್ಳುವ ಸಲುವಾಗಿ ಟೋಯೋಟಾ ಈಗಾಗಲೇ ಇನ್ನೋವಾ ಹೈಕ್ರಾಸ್ ಮಾದರಿಯನ್ನು ಪರಿಚಯಿಸಿದೆ. ಹೈಬ್ರಿಡ್ ಎಂಜಿನ್ ಕಾರುಗಳನ್ನು ಮಾರುಕಟ್ಟೆಗೆ ತಂದು, ಕ್ರೈಸ್ಟಾ ಹೊಂದಿದ್ದ ಗ್ರಾಹಕರನ್ನು ಉಳಿಸಿಕೊಳ್ಳಲು ಕಂಪನಿ ಪ್ರಯತ್ನಿಸುತ್ತಿದೆ.
ಇನ್ನೋವಾ ಕ್ರೈಸ್ಟಾವನ್ನು ಹೈಬ್ರಿಡ್ ರೂಪದಲ್ಲಿ ಮರುಬಿಡುಗಡೆ ಮಾಡುವ ಸಾಧ್ಯತೆ ಕುರಿತು ಕೆಲ ಚರ್ಚೆಗಳು ನಡೆದರೂ, ಈ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಕಾರಣ ಈಗಾಗಲೇ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ವೇರಿಯಂಟ್ ರೂಪದಲ್ಲಿ ಲಭ್ಯವಿದೆ. ಹೀಗಾಗಿ ವರ್ಷಗಳ ಕಾಲ ರಸ್ತೆಯಲ್ಲಿ ರಾಜನಂತೆ ಮೆರೆದ ಇನ್ನೋವಾ ಕ್ರೈಸ್ಟಾ, ಇದೀಗ ಅನಿವಾರ್ಯವಾಗಿ ಗುಡ್‌ಬೈ ಹೇಳುತ್ತಿದೆ

Join WhatsApp

Join Now

RELATED POSTS

Leave a Comment