ಭಾರತದ ವಿವಿಧ ಗ್ರಾಮಾಂತರ ಭಾಗಗಳಲ್ಲಿ ವಾಸಿಸುವ ಜನರಿಗೆ ಕೆಲವೊಂದು ವಿಶಿಷ್ಟ ಲಕ್ಷಣಗಳು ದೊರಕುತ್ತವೆ ಎಂದು ಹಲವಾರು ಬಾರಿ ವರದಿಯಾಗಿರುವುದು ನಮಗೆ ತಿಳಿದಿದೆ. ದೀರ್ಘಾಯುಷ್ಯ, ಉತ್ತಮ ಆರೋಗ್ಯ, ಎತ್ತರ ಇತ್ಯಾದಿ ವಿಶೇಷತೆಗಳು ಸಾಮಾನ್ಯವಾಗಿ ಕೇಳಿಬರ್ತವೆ. ಆದರೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಕಳೆದ ಎರಡು ದಶಕಗಳಿಂದ ವಿಚಿತ್ರ ಘಟನೆ ಕಾಣಿಸಿಕೊಂಡಿದೆ. ಯಾರೂ ಸಾವನ್ನಪ್ಪಿಲ್ಲ, ಯಾರೂ ಸ್ಥಳಾಂತರವಾಗಿಲ್ಲ, ಮದುವೆಯಾದ ಹೆಣ್ಣುಮಕ್ಕಳೂ ತಮ್ಮ ಮೂಲ ವಿಳಾಸವನ್ನೇ ಮುಂದುವರೆಸಿದ್ದಾರೆ. ಇತ್ತೀಚೆಗೆ ಈ ಅಚ್ಚರಿಯ ಹಿನ್ನೆಲೆ ಬಹಿರಂಗಗೊಂಡಿದೆ.
SIR ಪರಿಶೀಲನೆ ರಹಸ್ಯ ಬಯಲುಗೊಳಿಸಿದ ವಿಧಾನ
ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಜ. ಆದರೆ ಭಯಪಡಬೇಕಾಗಿಲ್ಲ. ಚುನಾವಣಾ ಆಯೋಗ ನಡೆಸುತ್ತಿರುವ SIR (Special Summary Revision) ಪ್ರಕ್ರಿಯೆಯ ವೇಳೆ ಈ ವಿಚಿತ್ರತೆ ಗಮನಕ್ಕೆ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ಮತದಾರರ ಪಟ್ಟಿಗಳ ಪರಿಷ್ಕರಣೆ ನಡೆಯುತ್ತಿದ್ದು, ವಿರೋಧಗಳ ನಡುವೆಯೂ ಈ ಪರಿಶೀಲನೆ ಮುಂದುವರಿದಿದೆ. ಈ ಪ್ರಕ್ರಿಯೆಯಲ್ಲಿ ಕಳೆದ 20 ವರ್ಷಗಳಿಂದ ಮತದಾರರ ಪಟ್ಟಿಯಲ್ಲಿ ಹೆಸರು ಬದಲಾವಣೆಯೇ ಆಗಿಲ್ಲ, ಮದುವೆಯಾದ ಮಹಿಳೆಯರ ಹೆಸರುಗಳೂ ಹಳೆಯ ವಿಳಾಸದಲ್ಲೇ ಮುಂದುವರಿದಿವೆ ಎಂಬುದು ಅಧಿಕಾರಿಗಳಿಗೆ ಅನುಮಾನ ಎಬ್ಬಿಸಿದೆ. ಆಯೋಗ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲು ಸೂಚಿಸಿದ ನಂತರ ನಿಜವಾದ ಪರಿಸ್ಥಿತಿ ಬೆಳಕಿಗೆ ಬಂದಿದೆ.
ದಕ್ಷಿಣ 24 ಪರಗಣ ಜಿಲ್ಲೆಯ ಕೆಲವು ಬೂತ್ಗಳಲ್ಲಿ ಕಂಡುಬಂದ ಅಸಾಧಾರಣತೆ
ಆಯೋಗದ ಸೂಚನೆಯಂತೆ ಜಿಲ್ಲಾಧಿಕಾರಿಗಳು ಸಲ್ಲಿಸಿದ ವರದಿಯಲ್ಲಿ ದೊಡ್ಡ ವ್ಯತ್ಯಾಸಗಳು ತಿಳಿದುಬಂದಿವೆ. ದಕ್ಷಿಣ 24 ಪರಗಣ ಜಿಲ್ಲೆಯಲ್ಲಿದ್ದ 2,208 ಬೂತ್ಗಳ ಸಂಖ್ಯೆ ಈಗ 480ಕ್ಕೆ ಕುಸಿದಿದೆ. 20 ವರ್ಷಗಳ ಹಿಂದೆ ಸಾವನ್ನಪ್ಪಿದವರ ಹೆಸರುಗಳನ್ನೂ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿರಲಿಲ್ಲ. ಸ್ಥಳಾಂತರಗೊಂಡವರ ಹೆಸರನ್ನೂ ಅಳಿಸಲಾಗಿರಲಿಲ್ಲ. ಈ ಎಲ್ಲರು ಕಳೆದ ಚುನಾವಣೆಗಳಲ್ಲಿ ಮತ ಹಾಕಿರುವ ಸಾಧ್ಯತೆಯ ಕುರಿತು ಈಗ ತನಿಖೆ ನಡೆಯುತ್ತಿದೆ.
ಬಿಜೆಪಿಯಿಂದ ‘ಇದು ಯಾವ ಮಾಯೆ?’ ಎಂಬ ಪ್ರಶ್ನೆ
ಈ ಬೆಳವಣಿಗೆ ಬಗ್ಗೆ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಸುಕಾಂತ ಮಜುಂದಾರ್ ಟ್ವೀಟ್ ಮೂಲಕ ಪ್ರಶ್ನೆ ಎತ್ತಿದ್ದಾರೆ. 2,200ಕ್ಕೂ ಹೆಚ್ಚು ಬೂತ್ಗಳ SIR ಅರ್ಜಿಗಳನ್ನು ಪರಿಶೀಲಿಸಿದಾಗಲೇ ಹಲವು ಅಚ್ಚರಿ ಸಂಗತಿಗಳು ಹೊರಬಿದ್ದಿವೆ ಎಂದು ಅವರು ಹೇಳಿದ್ದಾರೆ. ಜಿಲ್ಲಾಧಿಕಾರಿಗಳ ವರದಿ ಕೋರಿದ ನಂತರ ಬೂತ್ ಸಂಖ್ಯೆ 480ಕ್ಕೆ ಇಳಿದಿರುವುದನ್ನು ಕಂಡು ಅವರು ಇದನ್ನೇ ‘ಮ್ಯಾಜಿಕ್’ ಎಂದು ವ್ಯಂಗ್ಯ ಮಾಡಿದ್ದಾರೆ.
ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ಅನೇಕ ಜಿಲ್ಲೆಗಳಿಂದ ಈಗ ಮೃತಪಟ್ಟವರು, ಸ್ಥಳಾಂತರಗೊಂಡವರು, ನಾಪತ್ತೆಯಾದವರು ಎಲ್ಲಾ ಇವರ ಸಂಪೂರ್ಣ ವಿವರಗಳನ್ನು ಕೇಳಿಕೊಂಡಿದೆ.






