ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ಸಾಕ್ಷಿ ದೂರುದಾರ ತೋರಿಸಿದ ಹೊಸ ಸ್ಥಳದಲ್ಲಿ ಇಂದು ಶೋಧ ಕಾರ್ಯ ನಡೆಸಲು ಎಸ್.ಐಟಿ ಮುಂದಾಗಿದೆ. ಕನ್ಯಾಡಿಯ ದ್ವಾರಕಾಶ್ರಮದ ಗೇಟ್ ನ ಒಳಗೆ ಶೋಧ ಕಾರ್ಯಕ್ಕಾಗಿ ಎಸ್.ಐ.ಟಿ ಅಧಿಕಾರಿಗಳು ಸಾಕ್ಷಿ ದೂರುದಾರನೊಂದಿಗೆ ತೆರಳಿದ್ದಾರೆ.
ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ ಮಾಸ್ಕ್‌ಮ್ಯಾನ್
“ನನಗೆ ಬಹಳ ಸಮಯದಿಂದ ಪಾಪಪ್ರಜ್ಞೆ ಕಾಡುತ್ತಿತ್ತು, ನಾನು ಹೂತು ಹಾಕಿದ್ದ ತಲೆಬರುಡೆಗಳು ಕನಸ್ಸಿನಲ್ಲಿ ನನಗೆ ಕಾಡಲು ಆರಂಭಿಸಿದ್ದವು. ನಾನು ಹೂಳಿದ್ದ ಶವಗಳಿಗೆ ಸತ್ತ ನಂತರ ಯಾವುದೇ ಕರ್ಮ ಆಗಿರಲಿಲ್ಲ. ಆ ಹೆಣಗಳನ್ನ ತೆಗೆದು ಸರಿಯಾಗಿ ಕರ್ಮ ಪೂಜೆಗಳನ್ನ ಮಾಡಿದರೆ ನನಗೆ ಪುಣ್ಯ ಸಿಗಬಹುದು ಹಾಗೂ ನೆಮ್ಮದಿ ಸಿಗುತ್ತದೆ. ಹಾಗಾಗಿ ಪೂಜೆ ಮಾಡಿಸುವ ಉದ್ದೇಶದಿಂದ ನಾನು ಬಂದಿದ್ದೇನೆ” ಎಂದು ಹೇಳಿದ್ದಾರೆ.
“ಅರಣ್ಯ ಪ್ರದೇಶದಲ್ಲಿ ಹೆಣ ಹೂಳೂತ್ತಿದ್ದೆವು
ಧರ್ಮಸ್ಥಳದ ಆಗಿನ ಪರಿಸ್ಥಿತಿ ಬೇರೆ ಇತ್ತು. ಈಗ ಬಹಳ ಬದಲಾಗಿದೆ. ಆಗ ಕಾಡು ಬಹಳ ಕಡಿಮೆ ಇತ್ತು. ಆದರೆ ಈಗ ಜಾಸ್ತಿ ಇದೆ. ನಾನು ನನಗೆ ಗೊತ್ತಿರುವ ಹಾಗೆ ಸರಿಯಾದ ಜಾಗಗಳನ್ನ ಕೆಲ ಪ್ರದೇಶಗಳಲ್ಲಿ ಗುರುತು ಮಾಡಿದ್ದೆ. ಆದರೆ ಕೆಲ ಬದಲಾವಣೆ ಆಗಿರುವುದರಿಂದ ಅಲ್ಲಿ ಹೆಣಗಳು ಸಿಕ್ಕಿಲ್ಲ.”
“ನಾನು ಅದೇ ಜಾಗದಲ್ಲಿ ಹೆಣ ಹೂಳಿದ್ದೆ, ಆದರೆ ಅಲ್ಲಿ ಈಗ ಸಿಗಲಿಲ್ಲ ಎಂದರೆ ನಾನು ಏನು ಮಾಡಲಿ. ಮತ್ತೊಂದು ಮುಖ್ಯವಾದ ವಿಚಾರ ಎಂದರೆ ನನಗೆ ಗ್ರಾಮ ಪಂಚಾಯಿತಿ ಅವರು ಶವ ಹೂಳಲು ಹೇಳಿಯೇ ಇಲ್ಲ. ಮಾಹಿತಿ ಕಚೇರಿಯವರು ಈ ಕೆಲಸ ಮಾಡಲು ಹೇಳುತ್ತಿದ್ದರು. ಹಾಗಾಗಿ ನಾವು ಆ ಕೆಲಸ ಮಾಡಿದ್ದೇವೆ. ನಾನು ಬಹುತೇಕ ಅರಣ್ಯ ಪ್ರದೇಶದಲ್ಲಿ ಮಾತ್ರ ಹೆಣಗಳನ್ನ ಹೂಳಿದ್ದೇನೆ. ಸ್ಮಶಾನ ಜಾಗದಲ್ಲಿ ಹೆಣ ಹೂಳಿಲ್ಲ. ನೇತ್ರಾವತಿ ಹೊಳೆ ಬದಿಯೇ ಹೂತು ಹಾಕಿದ್ದೇವು” ಎಂದು ಹೇಳಿಕೊಂಡಿದ್ದಾರೆ.
“ನಾನು ಎಲ್ಲಾ ಸ್ಥಳಗಳು ಸರಿಯಾಗಿ ಗುರುತಿಸಿದ್ದೇನೆ. ಆದರೆ ಕೆಲವೊಂದು ಜಾಗದಲ್ಲಿ ಮಿಸ್ ಆಗಿದೆ. ನನಗೆ ಈಗ ಕೆಲ ಜಾಗಗಳು ಗುರುತು ಸಿಕ್ಕಿಲ್ಲ. ಈಗ ಅನೇಕ ಪ್ರದೇಶದಲ್ಲಿ ಮಣ್ಣು ಕುಸಿದು ಹೋಗಿದೆ. ಹಾಗಾಗಿ ಅಲ್ಲಿ ಹೆಣ ಇರೋದು ಡೌಟ್. ಆದರೆ ಕಾರ್ಯಾಚರಣೆ ಮಾಡಲಾಗುತ್ತಿದೆ. ಹೆಣ ಸಿಗಲಿಲ್ಲ ಎಂದರೆ ನಾನು ಏನು ಮಾಡಲು ಆಗುತ್ತದೆ. ಆ ಸಮಯದಲ್ಲಿ ನಾನು ಹೆಣ ಹೂತು ಹಾಕಿದಾಗ ಅಲ್ಲಿ ಹಳೆಯ ರಸ್ತೆ ಇತ್ತು. ಆದರೆ ಈಗ ಹೊಸ ರಸ್ತೆ ಆಗಿದೆ. ಮಣ್ಣಿನ ಕೆಲಸ ಸಹ ಆಗಿದೆ. ನನಗೆ ಚೆನ್ನಾಗಿ ನೆನಪಿದೆ ನೇತ್ರಾವತಿಯಲ್ಲಿ 70 ಮೃತದೇಹ ಮಣ್ಣು ಮಾಡಿದ್ದೇನೆ, ಅಲ್ಲಿ ಮಣ್ಣು ತುಂಬಿ ಹೋಗಿದೆ ಹಾಗಾಗಿ ನನಗೆ ಗುರುತು ಸಿಗಲಿಲ್ಲ” ಎಂದು ಅನಾಮಿಕ ತಿಳಿಸಿದ್ದಾರೆ.
“ಇನ್ನೂ 1 ರಿಂದ 5 ಸ್ಥಳದಲ್ಲಿ ಹುಡುಕಾಟ ಮಾಡುವುದು ಬಾಕಿ ಇದೆ. ಮಣ್ಣು ಮಾಡುವ ಸಮಯದಲ್ಲಿ ನನ್ನ ಜೊತೆ ಐದಾರು ಮಂದಿ ಇದ್ದರು. ನನಗೆ ನೆಮ್ಮದಿ ಸಿಗಲಿಲ್ಲ, ಹಾಗಾಗಿ ನಾನು ಎದುರು ಬಂದಿದ್ದೇನೆ. ನಾನು 11 ರಿಂದ 16 ವರ್ಷ ಹಾಗೂ 35 ವರ್ಷದ ವರೆಗಿನ ವಯಸ್ಸಿನವರ ದೇಹಗಳನ್ನ ಸಹ ಹೂತು ಹಾಕಿದ್ದೆ. 13ನೇ ಸ್ಥಳ ಬಹಳ ಮುಖ್ಯವಾಗಿದೆ. ಅಲ್ಲಿ 70 ಹೆಣಗಳನ್ನ ಹೂತು ಹಾಕಿದ್ದಾನೆ. ನನ್ನ ಬಗ್ಗೆ ಆನೇಕ ಮಾತುಗಳನ್ನ ಆಡುತ್ತಿದ್ದಾರೆ. ಯಾರೂ ಏನು ಬೇಕಾದರೂ ಹಾಗೂ ಎಷ್ಟು ಬೇಕಾದರೂ ಹೇಳಬಹುದು. ಅದು ಆಗಲಿಲ್ಲ ಎಂದ ಮೇಲೆ ನಾನು ಮನುಷ್ಯ. ನಾನು ಏನು ಮಾಡೋಕೆ ಆಗುತ್ತೆ” ಎಂದು ಹೇಳಿದ್ದಾನೆ.






