---Advertisement---

ಅನುಮಾನ ಭೂತಕ್ಕೆ ಅಮಾನವೀಯ ಕೃತ್ಯ: ಪತ್ನಿಯ ತಲೆ ಬೋಳಿಸಿದ ಪತಿ

On: February 3, 2026 1:33 PM
Follow Us:
---Advertisement---

ಬಾಗಲಕೋಟೆ, ಫೆ.03: ಪತಿ–ಪತ್ನಿಯ ಸಂಬಂಧ ನಂಬಿಕೆಯ ಮೇಲೆ ನಿಂತಿರಬೇಕು. ಆದರೆ ಆ ನಂಬಿಕೆಗೆ ಸಂಶಯ ಬೆರೆತರೆ ಎಂತಹ ದುರ್ಘಟನೆಗಳು ನಡೆಯಬಹುದು ಎಂಬುದಕ್ಕೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.

ವಿನಾಕಾರಣ ಪತ್ನಿಯ ನಡತೆಯ ಮೇಲೆ ಸಂಶಯ ಪಟ್ಟು, ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಪತಿ ಪತ್ನಿಯ ತಲೆ ಕೂದಲನ್ನು ಬಲವಂತವಾಗಿ ಬೋಳಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಉಮೇಶ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ ಎಂದು ಗುರುತಿಸಲಾಗಿದೆ.

ಇದನ್ನು ಓದಿ: SHOCKING : ‘AI’ ಸಲಹೆ ನಂಬಿ ‘HIV’ ಔಷಧಿ ಸೇವಿಸಿದ ರೋಗಿ ಆಸ್ಪತ್ರೆಗೆ ದಾಖಲು – ವೈದ್ಯರೇ ಶಾಕ್!

ಇದನ್ನು ಓದಿ: ಮದುವೆಯಾಗಿ 13 ತಿಂಗಳಲ್ಲೇ ವಿಚ್ಛೇದನ: ಪತ್ನಿಗೆ ತಿಂಗಳಿಗೆ ₹5 ಲಕ್ಷ ಜೀವನಾಂಶ ನೀಡಲು ಪತಿಗೆ ಕೋರ್ಟ್ ಆದೇಶ

ಆರೋಪಿಗೆ ತನ್ನ ಪತ್ನಿ ಲಕ್ಷ್ಮೀಬಾಯಿ ಅವರ ಶೀಲದ ಬಗ್ಗೆ ಅಸಂಬದ್ಧ ಅನುಮಾನಗಳು ಇದ್ದು, ಇದೇ ವಿಚಾರವಾಗಿ ದಂಪತಿಗಳ ನಡುವೆ ನಿರಂತರ ಜಗಳಗಳು ನಡೆಯುತ್ತಿದ್ದುದು ತಿಳಿದುಬಂದಿದೆ. ಘಟನೆ ನಡೆದ ದಿನ ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದ ಉಮೇಶ್, ಪತ್ನಿಯೊಂದಿಗೆ ಜಗಳ ಆರಂಭಿಸಿದ್ದಾನೆ. ಜಗಳ ತೀವ್ರ ಸ್ವರೂಪ ಪಡೆದಾಗ, ಮನೆಯಲ್ಲಿದ್ದ ಕಬ್ಬು ಕಡಿಯುವ ಕೊಯ್ತಾವನ್ನು ತೆಗೆದುಕೊಂಡು ಪತ್ನಿಗೆ ಪ್ರಾಣ ಬೆದರಿಕೆ ಹಾಕಿದ್ದಾನೆ. ನಂತರ ಅವರನ್ನು ಎಳೆದಾಡಿ, ಬಲವಂತವಾಗಿ ತಲೆ ಕೂದಲನ್ನು ಸಂಪೂರ್ಣವಾಗಿ ಬೋಳಿಸಿದ್ದಾನೆ ಎನ್ನಲಾಗಿದೆ.

ಇದನ್ನು ಓದಿ: ಮಂಗಳೂರು: ಪತ್ನಿಯ ಅಶ್ಲೀಲ ವಿಡಿಯೋ ತೆಗೆದ ಸ್ನೇಹಿತನ ಕೊಲೆ ಮಾಡಿ ಎಸ್ ಟಿಪಿ ಟ್ಯಾಂಕ್‌ನಲ್ಲಿ ಹಾಕಿದ ಆರೋಪಿಯ ಬಂಧನ.

ಈ ಘಟನೆ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪತಿಯೇ ಪತ್ನಿಯ ಮೇಲೆ ಇಂತಹ ಹೀನ ಕೃತ್ಯ ಎಸಗಿರುವುದು ಸಮಾಜ ತಲೆತಗ್ಗಿಸುವಂತದ್ದು ಎಂದು ಸಾರ್ವಜನಿಕರು ಖಂಡಿಸಿದ್ದಾರೆ. ನೊಂದ ಮಹಿಳೆ ತಮಗಾದ ಅವಮಾನ ಮತ್ತು ಕಿರುಕುಳದಿಂದ ತೀವ್ರವಾಗಿ ಮನನೊಂದಿದ್ದಾರೆ.

ಘಟನೆಯ ಮಾಹಿತಿ ದೊರಕಿದ ತಕ್ಷಣ ಸಾವಳಗಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ನೊಂದ ಮಹಿಳೆಯಿಂದ ದೂರು ಸ್ವೀಕರಿಸಿದ್ದಾರೆ. ಆರೋಪಿಯ ವಿರುದ್ಧ ಮಹಿಳೆಯ ಮೇಲಿನ ದೌರ್ಜನ್ಯ, ಪ್ರಾಣ ಬೆದರಿಕೆ ಹಾಗೂ ಹಲ್ಲೆ ಸಂಬಂಧ ವಿವಿಧ ಕಲಂಗಳು ಅಡಿಯಲ್ಲಿ ಪ್ರಕರಣ ದಾಖಲಿಸಿ, ಉಮೇಶ್‌ನನ್ನು ಬಂಧಿಸಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ಮುಂದುವರಿದಿದೆ.

ಮಹಿಳೆಯರ ಮೇಲೆ ನಡೆಯುವ ಇಂತಹ ದೌರ್ಜನ್ಯಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಾರ್ವಜನಿಕರು ಹಾಗೂ ಮಹಿಳಾ ಸಂಘಟನೆಗಳು ಆಗ್ರಹಿಸಿದ್ದಾರೆ.

ಇದನ್ನು ಓದಿ: ಹೆಂಡತಿಗೆ ಮಾಡಿದ ಅವಮಾನಕ್ಕೆ ಸೇಡು: ಎಲೂರಿನಲ್ಲಿ 7 ಕೋಟಿ ರೂ. ಚಿನ್ನ ಕಳ್ಳತನ ಮಾಡಿದ ಗಂಡ

Join WhatsApp

Join Now

RELATED POSTS