ತಮಿಳುನಾಡಿನ ಕೆಳಮಂಗಲಂ ಸಮೀಪದ ಚಿನ್ನಟ್ಟಿಯಲ್ಲಿ ನಡೆದ ಈ ಘಟನೆ ಎಲ್ಲರ ಹುಬ್ಬೇರಿಸಿದೆ. ಮೂವರು ಮಕ್ಕಳ ತಾಯಿಯಾದ ಭಾರತಿ ಎಂಬ ಮಹಿಳೆ, ತನ್ನ ಸಲಿಂಗ ಪ್ರೇಮದ ಹುಚ್ಚಿನಿಂದಲೇ ತನ್ನ 5 ತಿಂಗಳ ಮಗುವಿನ ಜೀವ ತೆಗೆಯುವ ಮಟ್ಟಿಗೆ ಹೋಗಿದ್ದಾಳೆ.
ಯುವತಿಯೊಂದಿಗಿನ ಪ್ರೇಮ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣದಿಂದಲೇ ತಾಯಿಯೇ ಮಗುವಿನ ಮೇಲೆ ಕೈ ಎತ್ತಿದ ದುಃಖಕರ ಘಟನೆ ನಡೆದಿದೆ. ಆರೋಪಿಗಳಾದ ಭಾರತಿ (26) ಮತ್ತು ಸುಮಿತ್ರಾ (22) ಎಂಬ ಇಬ್ಬರನ್ನು ಕೆಳಮಂಗಲಂ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಚಿನ್ನಟ್ಟಿಯ ನಿವಾಸಿಯಾದ ಭಾರತಿ, ಸುರೇಶ್ ಎಂಬ ವ್ಯಕ್ತಿಗೆ ಐದು ವರ್ಷಗಳ ಹಿಂದೆ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಂದು ಗಂಡುಮಗು ಇದ್ದರು. ಇದೇ ಪ್ರದೇಶದ ಯುವತಿ ಸುಮಿತ್ರಾಳೊಂದಿಗೆ ಭಾರತಿ ಪರಿಚಯ ಬೆಳೆಸಿಕೊಂಡು ಬಳಿಕ ಅದು ಪ್ರೀತಿಯಾಗಿ, ನಾಲ್ಕು ವರ್ಷಗಳಿಂದ ಇವರಿಬ್ಬರು ಸಲಿಂಗ ಕಾಮಿಗಳಾಗಿ ಬಾಳುತ್ತಿದ್ದರು. ಪತಿ ಮನೆಯಲ್ಲಿ ಇಲ್ಲದಾಗ ಇಬ್ಬರೂ ಸೇರಿಕೊಂಡು ಸಮಯ ಕಳೆಯುತ್ತಿದ್ದರು ಎಂದು ಮಾಹಿತಿ ಹೊರಬಿದ್ದಿದೆ.
ಭಾರತಿ ಮತ್ತು ಸುಮಿತ್ರಾ ಇಬ್ಬರೂ ತಮ್ಮ ಖಾಸಗಿ ಸಂಭಾಷಣೆಗಾಗಿ, ನಗ್ನ ವಿಡಿಯೋ ಕಾಲ್‌ಗಳು ಹಾಗೂ ಖಾಸಗಿ ಫೋಟೋ ವಿನಿಮಯಕ್ಕಾಗಿ ಪ್ರತ್ಯೇಕ ಮೊಬೈಲ್‌ಗಳನ್ನು ಬಳಸುತ್ತಿದ್ದರು. ಸ್ನಾನದ ವೇಳೆ ವಿಡಿಯೋ ಕಾಲ್ ಮಾಡುವುದು, ಮುತ್ತುಕೊಟ್ಟು ಫೋಟೋ ಕ್ಲಿಕ್ ಮಾಡುವುದು, ಭಾರತಿ ತನ್ನ ಎದೆ ಮೇಲೆ ‘sumi’ ಎಂಬ ಟ್ಯಾಟೂ ಹಾಕಿಸಿಕೊಳ್ಳುವುದು, ಕೈ ಕತ್ತರಿಸಿಕೊಂಡು ರಕ್ತದಿಂದ ಪ್ರೀತಿ ತೋರಿಸುವಂತಹ ಅತಿರೇಕದ ಕೃತ್ಯಗಳು ಇವರ ಜೀವನದ ಭಾಗವಾಗಿದ್ದವು.
ಐದು ತಿಂಗಳ ಹಿಂದೆ ಭಾರತಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಮಗುವಿನ ಜನ್ಮದ ನಂತರ ಸುಮಿತ್ರಾ ಅಸೂಯೆಯಿಂದ ವರ್ತಿಸುತ್ತಿದ್ದಳು. ಮಗುವಿನ ಕಾರಣದಿಂದ ಭಾರತಿ ತನ್ನಿಂದ ದೂರವಾಗುತ್ತಿದ್ದಾಳೆ ಎಂಬ ಭಾವನೆ ಸುಮಿತ್ರಾಳ ಮನಸ್ಸಿನಲ್ಲಿ ಮೂಡಿತ್ತು. ಇದರಿಂದಾಗಿ ಇವರಿಬ್ಬರ ಮಧ್ಯೆ ಪದೇಪದೇ ಜಗಳಗಳು ನಡೆಯುತ್ತಿದ್ದು, ಕೋಪದ ಹೊತ್ತಿನಲ್ಲಿ ಸುಮಿತ್ರಾ ಮಗುವನ್ನು ಕೊಲ್ಲಲು ಪ್ರೇರೇಪಿಸಿದ್ದಳು. ಆಕೆಯ ಮಾತಿಗೆ ಮರುಳಾದ ಭಾರತಿ, ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಮಗು ಹಾಲು ಕುಡಿಯುವಾಗ ಗಂಟಲಲ್ಲಿ ಸಿಕ್ಕಿ ಸಾವನ್ನಪ್ಪಿದೆಯೆಂದು ಸುಳ್ಳು ಕಥೆ ಹೇಳಿ ಕುಟುಂಬಸ್ಥರನ್ನು ನಂಬಿಸಿದ್ದಳು. ಆದರೆ ಕೆಲವು ದಿನಗಳ ನಂತರ, ಭಾರತಿ ಮತ್ತು ಸುಮಿತ್ರಾ ಬಳಸುತ್ತಿದ್ದ ಮೊಬೈಲ್ ಫೋನ್ ಪತಿ ಸುರೇಶ್ ಕೈಗೆ ಸಿಕ್ಕಿತು. ಅದರಲ್ಲಿ ಇರುವ ವಿಡಿಯೋ, ಫೋಟೋ ಮತ್ತು ಆಡಿಯೋಗಳಿಂದ ಅವರ ಸಲಿಂಗ ಪ್ರೇಮದ ರಹಸ್ಯ ಹಾಗೂ ಮಗುವಿನ ಕೊಲೆ ಬಯಲಾಗಿತು. ಬಳಿಕ ಸುರೇಶ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದ್ದು, ಪೊಲೀಸರು ಶವವನ್ನು ಮರುಪರೀಕ್ಷೆಗಾಗಿ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸದ್ಯ ಇಬ್ಬರು ಮಹಿಳೆಯರು ನ್ಯಾಯಾಂಗ ಬಂಧನದಲ್ಲಿದ್ದಾರೆ.







1 thought on “ಸಲ್ಲಿಂಗ ಪ್ರೇಮದ ಮದದಲ್ಲಿ ತಾಯಿಯ ಕ್ರೂರ ಕೃತ್ಯ!! 5 ತಿಂಗಳ ಶಿಶು ಉಸಿರುಗಟ್ಟಿದ ಕೊಂದ ಮಹಿಳೆ…”