CIBIL ಸ್ಕೋರ್ ನಿಮ್ಮ ಕ್ರೆಡಿಟ್ ಇತಿಹಾಸ, ರೇಟಿಂಗ್ ಮತ್ತು ವರದಿಯ 3 ಅಂಕಿಯ ಸಂಖ್ಯಾತ್ಮಕ ಸಾರಾಂಶವಾಗಿದ್ದು, 300 ರಿಂದ 900 ರವರೆಗೆ ಇರುತ್ತದೆ. ಕನಿಷ್ಠ ಸಿಬಿಲ್ ಸ್ಕೋರ್ ಇಲ್ಲ ಎಂಬ ಕಾರಣಕ್ಕೆ ಮೊದಲ ಬಾರಿಗೆ ಅರ್ಜಿ ಹಾಕಿದವರಿಗೆ ಬ್ಯಾಂಕ್‌ಗಳು ಸಾಲ ನಿರಾಕರಿಸುವಂತಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನದ ಸಾಲದ ನಿಯಮಗಳಲ್ಲಿ ಬದಲಾವಣೆಗಳನ್ನು ಘೋಷಿಸಿದ್ದು, ಇದರ ಕುರುತು ಹೊಸ ನಿಯಮಗಳು 2026ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಚಿನ್ನದ ಮೌಲ್ಯದ ಶೇ. 85ರಷ್ಟು ಸಾಲ ನೀಡಲು ಅನುಮತಿಸಲಾಗಿದೆ. ಸಾಲದ ಮಿತಿ ₹2.5 ಲಕ್ಷಕ್ಕಿಂತ ಕಡಿಮೆ ಇದ್ದರೆ, ಕ್ರೆಡಿಟ್ ಸ್ಕೋರ್ ಪರಿಶೀಲಿಸುವ ಅಗತ್ಯವಿಲ್ಲ. ಸಾಲ ತೀರಿಸಿದ ದಿನವೇ ಆಭರಣಗಳನ್ನು ಹಿಂತಿರುಗಿಸಬೇಕು. ವಿಳಂಬವಾದರೆ ದಿನಕ್ಕೆ ₹5,000 ದಂಡ ವಿಧಿಸಲಾಗುವುದು.
ಇನ್ನು 7 ಕೋಟಿ ರೂ. ಸಾಲ ತೀರಿಸದ ಗ್ರಾಹಕರಿಗೆ ನೋಟಿಸ್ ರದ್ದುಗೊಳಿಸಿದ ಹೈಕೋರ್ಟ್. ಮೈಸೂರಿನ ಕುವೆಂಪುನಗರ ಕೆನರಾ ಬ್ಯಾಂಕ್ ಶಾಖೆಯಿಂದ ಏಳು ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡದ ಗ್ರಾಹಕರಿಗೆ ನೀಡಿದ್ದ ಶೋಕಾಸ್ ನೋಟಿಸ್ ನೀಡಲಗಿತ್ತು. ಇದನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಿದ ಬ್ಯಾಂಕ್ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಿದೆ. ಸಂಬಂಧಿತ ಕಾನೂನು ಪ್ರಕ್ರಿಯೆಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲು ಬ್ಯಾಂಕ್‌ಗೆ ನ್ಯಾಯಾಲಯ ಅನುಮತಿ ನೀಡಿದೆ.
ನೀವು ಚಿನ್ನ ಅಥವಾ ಬೆಳ್ಳಿಯ ಮೇಲೆ ಸಾಲ ಪಡೆಯುವ ಬಗ್ಗೆ ಯೋಚಿಸುತ್ತಿದ್ದರೆ, ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ, ಹಿಂದೆ ಇದ್ದ ನಿಯಮಗಳಿಂದಾಗಿ ಅಗತ್ಯವಿರುವಷ್ಟು ಸಾಲ ಸಿಗುತ್ತಿರಲಿಲ್ಲ. ಈ ಸಮಸ್ಯೆಗೆ ಪರಿಹಾರವಾಗಿ, ಆರ್‌ಬಿಐ ಚಿನ್ನ ಮತ್ತು ಬೆಳ್ಳಿ ಸಾಲಕ್ಕೆ ಸಂಬಂಧಿಸಿದಂತೆ ಕೆಲವು ಹೊಸ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ.






