ಧರ್ಮಸ್ಥಳದಲ್ಲಿ ಪತ್ತೆಯಾದ ಅಸ್ಥಿಪಂಜರದ ಭಾಗಗಳ ತಾಂತ್ರಿಕ ಅದ್ಯಯನವು ಇದೀಗ ಫಾರೆನ್ಸಿಕ್ ತಜ್ಞರಿಗೆ ಒಂದು ಪ್ರಶ್ನೆಯಾಗಿದೆ. ಮಣಿಪಾಲದ ಕೆಎಂಸಿಯಲ್ಲಿ ಈ ಪರೀಕ್ಷೆ ನಡೆಯಲಿದ್ದು ಅಸ್ಥಿಪಂಜರದ ಅವಶೇಷಗಳಿಂದ ಲಿಂಗ, ವಯಸ್ಸು, ಹತ್ಯೆಯ ಕಾರಣ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆಯಲು ತಜ್ಞರು ಯತ್ನಿಸಲಿದ್ದಾರೆ.
ಸ್ಪಾಟ್ ಸಂಖ್ಯೆ 6ರ ಹತ್ತಿರ ಪತ್ತೆಯಾಗಿದ್ದ ಅಸ್ಥಿಪಂಜರದ ಭಾಗಗಳು ಈ ತನಿಖೆಗೆ ಮುಖ್ಯ ತಿರುವು ತಂದಿವೆ. ಈ ಅಸ್ಥಿಪಂಜರದ ತಾಂತ್ರಿಕ ವಿಶ್ಲೇಷಣೆ ನಡೆಸುವುದು ಫಾರೆನ್ಸಿಕ್ ಶಾಸ್ತ್ರಜ್ಞರಿಗೂ ದೊಡ್ಡ ಪ್ರಶ್ನೆಯಾಗಿದ್ದು, ಮಣಿಪಾಲ ಕೆಎಂಸಿಯ ನುರಿತ ವೈದ್ಯರೊಂಧಿಗೆ ಎಫ್‌ಎಸ್‌ಎಲ್ (FSL) ತಂಡ ಈ ಪರೀಕ್ಷೆಯನ್ನು ನಡೆಸಲಿದೆ. ಪಾಯಿಂಟ್ ನಂ. 6ರಲ್ಲಿ ಎಸ್‌ಐಟಿ (SIT) ತಂಡ ಶೋಧಿಸಿದ ಶವದ ಅಸ್ಥಿಪಂಜರವನ್ನು ಉಡುಪಿಯ ಮಣಿಪಾಲದಲ್ಲಿರುವ ಕೆಎಂಸಿ ಮೆಡಿಕಲ್ ಕಾಲೇಜಿಗೆ ರಾವಣಿಸಲಗಿದೆ. ಈ ಕಾಲೇಜಿನಲ್ಲಿ ಫಾರೆನ್ಸಿಕ್ ಪರೀಕ್ಷೆ(Forensic Examination) ನಡೆಯುವ ಸಾಧ್ಯತೆ ಇದೆ. ಈ ಹಿಂದೆ ಶಿರೂರು ಸ್ವಾಮೀಜಿಯ ಪ್ರಕರಣದಲ್ಲಿ ಸಹ ಇದೇ ಸಂಸ್ಥೆಯ ತಜ್ಞರಿಂದ ಫಾರೆನ್ಸಿಕ್ ಪರೀಕ್ಷೆ ನಡೆದಿತ್ತು. ಅದರ ಹಿನ್ನಲೆಯಲ್ಲಿ ಈ ಪರೀಕ್ಷೆ ಜರುಗಲಿದೆ.
ಅಸ್ಥಿಪಂಜರದ ಫಾರೆನ್ಸಿಕ್ ಪರೀಕ್ಷೆ ಹೇಗೆ ನಡೆಸಲಾಗುತ್ತದೆ?
ಪ್ರಾಥಮಿಕವಾಗಿ ದೃಶ್ಯ ಪರಿಶೀಲನೆ (Visual Examination) ಮೂಲಕ ಆರಂಭವಾಗುತ್ತದೆ. ಎಲ್ಲಾ ಎಲುಬುಗಳ ದೃಶ್ಯ ಪರಿಶೀಲನೆ ಮಾಡಲಗುತ್ತದ್ದೆ. ಈ ಅಸ್ಥಿಪಂಜರ ಮಾನವನದ್ದೇನಾ ಅಥವಾ ಪ್ರಾಣಿಯದ್ದೇನಾ ಎಂಬುದನ್ನು ಸ್ಪಷ್ಟಪಡಿಸಲಾಗುತ್ತದೆ.
ಎಲುಬಿನ ಬಣ್ಣ, ವಕ್ರತೆ, ಗಟ್ಟಿತನ ಇತ್ಯಾದಿಗಳನ್ನು ಪರಿಗಣಿಸಲಗುತ್ತದೆ
- ಎಲುಬುಗಳಲ್ಲಿನ ಪೆಟ್ಟು, ಬಿರುಕುಗಳ ಪರಿಶೀಲನೆ ಎಫ್‌ಎಸ್‌ಎಲ್ ತಂಡವು ಎಲುಬಿನಲ್ಲಿ ಗಂಭೀರ ಪೆಟ್ಟುಗಳು, ಬಿರುಕುಗಳ ಲಕ್ಷಣಗಳಿವೆಯಾ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಇದರ ಮೂಲಕ ಹತ್ಯೆ ಆಗಿದೆಯೇ ಅಥವಾ ನೈಸರ್ಗಿಕ ಸಾವಾಗಿದೆಯೇ ಎಂಬುದು ತಿಳಿಯಲಗುತ್ತದೆ.
- ಲಿಂಗ, ವಯಸ್ಸು ಮತ್ತು ಎತ್ತರದ ಅಂದಾಜು ಅಸ್ಥಿಪಂಜರದ ಭಾಗಗಳ ಆಧಾರದಿಂದ ಶವದ ಲಿಂಗ, ವಯಸ್ಸು, ಎತ್ತರ ಹಾಗೂ ಕೆಲವೊಮ್ಮೆ ವಂಶೀಯ ಗುಣಲಕ್ಷಣವನ್ನು (Ethnic Estimation) ಪತ್ತೇ ಮಾಡಬಹುದು. ವಿಶೇಷವಾಗಿ Pelvis (ಶೋಣಿಭಾಗ), Skull (ಮಸ್ತಿಷ್ಕದ ಮೂಳೆ) ಮತ್ತು Femur (ಜಠರ ಮೂಳೆ) ಇವು ಪ್ರಮುಖ ಮಾಹಿತಿಯನ್ನು ನೀಡಬಲ್ಲವು.
- ಹತ್ಯೆಯ ವಿಧಾನ ಪತ್ತೆಹಚ್ಚುವುದು ಮೂಳೆಗಳಲ್ಲಿ ಗಂಭೀರ ಪೆಟ್ಟುಗಳಿರುವ ಸ್ಥಿತಿಯಲ್ಲಿ, ಏಟು ಯಾವ ರೀತಿಯ ಆಯುಧದಿಂದ ಆಗಿರಬಹುದು ಎಂಬುದರ ಕುರಿತು ವಿಶ್ಲೇಷಣೆ ಮಾಡಲಾಗುತ್ತದೆ. ಈ ಮೂಲಕ ಚಾಕು, ತೀವ್ರವಾದ ಆಯುಧ ಅಥವಾ ಗನ್ ಶಾಟ್ ಬಳಕೆಯ ಬಗ್ಗೆ ನಿಖರ ಮಾಹಿತಿ ಲಭ್ಯವಾಗಬಹುದು.
- ಡಿಎನ್‌ಎ ಪರೀಕ್ಷೆ ಶವದ ಗುರುತನ್ನು ಪತ್ತೆಹಚ್ಚಲು, ಎಲುಬಿನ ಒಳಗಿನ Bone Marrow ಅಥವಾ Dense Bone ನಿಂದ DNA ಸಂಗ್ರಹಿಸಿ ಪರೀಕ್ಷಿಸಲಾಗುತ್ತದೆ. ಇದರಿಂದ ಮೂಲ ಗುರುತು ಪತ್ತೆ ಹಚ್ಚಬಹುದು.
- ಶವದ ಅವಧಿ ಅಂದಾಜು ಶವ ಎಷ್ಟು ವರ್ಷಗಳ ಹಿಂದೆ ಹೂತುಹಾಕಲಾಗಿದೆಯೆಂಬ , Radiocarbon Dating ಅಥವಾ Bone Degradation Analysis ಮೂಲಕ ಸಾವಿನ ಅವಧಿ ಅಂದಾಜಿಸಲಾಗುತ್ತದೆ. ಶವಕ್ಕೆ ವಿಷ ನೀಡಲಾಗಿದೆ ಎಂಬ ಶಂಕೆ ಇದ್ದರೆ, ಅಸ್ಥಿಯಲ್ಲಿ ಉಳಿದಿರುವ ಅಣುಚಿಹ್ನೆಗಳ (Toxic Element Traces) ಆಧಾರದ ಮೇಲೆ ವಿಷದ ಬಗ್ಗೆ ತಿಳಿದುಕೊಳ್ಳಲಾಗುತ್ತದೆ.
ಎಫ್‌ಎಸ್‌ಎಲ್ ವರದಿ ಸಲ್ಲಿಕೆಯ ಅವಧಿಗಳು
- ಪ್ರಾರ್ಥಮಿಕ ದೃಶ್ಯ ವರಧಿ (Initial Visual Report): 2 ರಿಂದ 5 ದಿನಗಳಲ್ಲಿ ಎಸ್‌ಐಟಿ ತಂಡಕ್ಕೆ ಲಭ್ಯವಾಗಬಹುದು.
- ಅಂತರಕಾಲೀನ ಡಿಎನ್‌ಎ ವರದಿ (Interim DNA Summary): ಸುಮಾರು 15 ದಿನಗಳಲ್ಲಿ ನಿರೀಕ್ಷಿಸಲಾಗುತ್ತದೆ.
- ಅಂತಿಮ ಎಫ್‌ಎಸ್‌ಎಲ್ ವರದಿ (Final FSL Report): 45 ರಿಂದ 60 ದಿನಗಳ ಒಳಗೆ ನಿರೀಕ್ಷೆ.
ಪತ್ತೆಯಾದ ಅಸ್ಥಿಪಂಜರದ ಮಹಿತಿಗಳು ಸ್ಪಾಟ್ ಸಂಖ್ಯೆ 6ರಲ್ಲಿ ಎಸ್‌ಐಟಿ ತಂಡ 7 ಅಡಿ ಆಳದ ಗುಂಡಿ ತೋಡಿ ಶೋಧನೆ ನಡೆಸಿತು. 3 ಅಡಿ ಆಳದವರೆಗೂ ಗುಂಡಿ ತೋಡಿದ ನಂತರ ದೂರುದಾರನು ಕಾರ್ಯ ನಿಲ್ಲಿಸಿ ಮುಂದಿನ ಪಾಯಿಂಟ್ ಕಡೆ ಸಾಗಬೇಕೆಂದು ಸೂಚನೆ ನೀಡಿದರೂ, ಮಿನಿ ಜೆಸಿಬಿ ಮೂಲಕ 7 ಅಡಿ ಆಳದವರೆಗೆ ಮುಂದುವರಿಸಲಾಯಿತು.
ಈ ವೇಳೆ ಅಸ್ಥಿಪಂಜರದ ಭಾಗಗಳು ಯಾವುವು?
- 5 ಹಲ್ಲುಗಳು
- ದವಡೆಯ (Jaw) ಮೂಳೆ
- ಎರಡು ತೊಡೆ ಭಾಗದ (Thigh) ಮೂಳೆಗಳು
- ಬುರುಡೆಯ ಎರಡು ತುಂಡುಗಳು ಹಾಗೂ ಇನ್ನಿತರ ಎಲುಬುಗಳು ಸೇರಿವೆ.
ಪರಿಶೋಧನೆಯ ನಂತರ ಪಾಯಿಂಟ್ ನಂ. 6ರ ಗುಂಡಿಯನ್ನು ಎಸ್‌ಐಟಿ ತಂಡ ಮುಚ್ಚಿದೆ. ಇಂದಿನಿಂದ ಮತ್ತಷ್ಟು ಪಾಯಿಂಟ್‌ಗಳಲ್ಲಿ ಪರಿಶೋಧನೆ ಮುಂದುವರೆಯಲಿದೆ.
1 thought on “ಧರ್ಮಸ್ಥಳ ಸಮಾಧಿ ಪ್ರಕರಣ: ಅಸ್ಥಿಪಂಜರದ ಫಾರೆನ್ಸಿಕ್ ಪರೀಕ್ಷೆ ಹೇಗೆ ನಡೆಸಲಾಗುತ್ತದೆ? How is the forensic examination of the skeleton conducted?”