---Advertisement---

ಅಸಲಿ ಚಿನ್ನವನ್ನೇ ಮರುಳುಮಾಡುವ ಬಾಂಗ್ಲಾ ಫೇಕ್ ಗೋಲ್ಡ್! ನೀವು ಖರೀದಿಸುತ್ತಿರುವ ಚಿನ್ನ ನಿಜವಾಗಿಯೂ ಅಸಲೆಯೇ?

On: January 12, 2026 5:26 AM
Follow Us:
---Advertisement---

ಭಾರತದಲ್ಲಿ ಬಡತನದ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಭಾರತೀಯರ ಚಿನ್ನದ ಪ್ರೀತಿ ಮಾತ್ರ ಯಾವತ್ತೂ ಕಡಿಮೆಯಾಗಿಲ್ಲ. ವರದಿಗಳ ಪ್ರಕಾರ, 2025ರಲ್ಲಿ ಭಾರತೀಯ ಆಭರಣ ಮಾರುಕಟ್ಟೆಯ ಮೌಲ್ಯ ಸುಮಾರು 90 ಬಿಲಿಯನ್ ಡಾಲರ್ ಆಗಲಿದೆ. ಅಂದರೆ, ಪ್ರತಿವರ್ಷ ಭಾರತೀಯರು ಬಿಲಿಯನ್ ಡಾಲರ್ ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸುತ್ತಿದ್ದಾರೆ ಎಂಬುದೇ ಇದರ ಅರ್ಥ.

ಇದನ್ನು ಓದಿ: 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಪರಾರಿಯಾಗಿದ್ದ ಪೊಲೀಸ್ ಕಾನ್‌ಸ್ಟೇಬಲ್ ಬುರ್ಕಾ ವೇಷದಲ್ಲಿ ಅರೆಸ್ಟ್

10 ಗ್ರಾಂ ಚಿನ್ನದ ಬೆಲೆ ಲಕ್ಷದ ಗಡಿ ದಾಟಿದ್ದರೂ, ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಚಿನ್ನಾಭರಣ ಅಂಗಡಿಗಳ ಮುಂದೆ ಕಾಣುವ ಜನಸಂದಣಿ ಅಚ್ಚರಿ ಹುಟ್ಟಿಸುವಂತಿದೆ. “ಇಷ್ಟೊಂದು ಸಿರಿವಂತರು ನಿಜವಾಗಿಯೂ ಇದ್ದಾರಾ?” ಎಂಬ ಪ್ರಶ್ನೆ ಮಧ್ಯಮ ವರ್ಗದವರ ಮನಸ್ಸಿನಲ್ಲಿ ಮೂಡುವುದು ಸಹಜ. ಇದೇ ಕಾರಣಕ್ಕೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ಪ್ರತಿಷ್ಠಿತ ಪ್ರದೇಶಗಳಲ್ಲಿ ಚಿನ್ನಾಭರಣ ಶೋರೂಮ್‌ಗಳು ನಾಯಿಕೊಡೆಗಳಂತೆ ಹೆಚ್ಚುತ್ತಿರುವುದೂ ಹಲವರಿಗೆ ವಿಚಿತ್ರವಾಗಿ ಕಾಣುತ್ತಿದೆ.

ಈ ಎಲ್ಲದರ ನಡುವೆಯೇ ಇದೀಗ ಒಂದು ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಅದೇನೆಂದರೆ, ಬಾಂಗ್ಲಾದೇಶದಿಂದ ನಕಲಿ ಚಿನ್ನವು ಹಲವು ದೇಶಗಳಿಗೆ ಮಾರಾಟವಾಗುತ್ತಿದೆ ಎಂಬ ಆರೋಪ. ಈ ನಕಲಿ ಚಿನ್ನಕ್ಕೆ “ಬಾಂಗ್ಲಾ ರೆಡ್ ಗೋಲ್ಡ್” (Bangal Red Gold) ಎಂದು ಹೆಸರು ಇಡಲಾಗಿದೆ.

ಅಚ್ಚರಿಯ ಸಂಗತಿ ಎಂದರೆ, ಈ ಚಿನ್ನವು ಅಸಲಿ ಚಿನ್ನದಂತೆಯೇ ಕಾಣಿಸಿಕೊಳ್ಳುತ್ತದೆ. ಬಣ್ಣ, ಹೊಳಪು, ತೂಕ, ಕರಗಿಸುವ ಗುಣ – ಎಲ್ಲವೂ ಅಸಲಿ ಚಿನ್ನದಂತೆಯೇ ಇರುವುದು ಇದರ ವಿಶೇಷತೆ. ಹೀಗಾಗಿ ಇದನ್ನು ಗುರುತಿಸುವುದು ಖುದ್ದು ಚಿನ್ನಾಭರಣ ವ್ಯಾಪಾರಿಗಳು ಹಾಗೂ ತಜ್ಞರಿಗೂ ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಇದನ್ನು ಮಾರಾಟಗಾರರು “ವರದಾನ” ಎಂದುಕೊಳ್ಳುತ್ತಿದ್ದಾರೆ.

ಕೆಲವೇ ಸಾವಿರ ರೂಪಾಯಿಗಳಲ್ಲಿ ಈ ನಕಲಿ ಚಿನ್ನವನ್ನು ಖರೀದಿ ಮಾಡಿ, ಅದನ್ನೇ ಅಸಲಿ ಚಿನ್ನವೆಂದು ಹೇಳಿ 10 ಗ್ರಾಂಗೆ ಲಕ್ಷ ಲಕ್ಷ ರೂಪಾಯಿಗಳ ಬೆಲೆಯಲ್ಲಿ ಮಾರಾಟ ಮಾಡಿದರೆ, ಕೆಲವೇ ದಿನಗಳಲ್ಲಿ ಕೋಟ್ಯಧಿಪತಿಗಳಾಗುವುದು ಸಾಧ್ಯವೆನ್ನುವುದು ತಜ್ಞರ ಆತಂಕ.

ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ದೊಡ್ಡ ಸಂಕಷ್ಟ?

ಅಸಲಿ ಚಿನ್ನವೆಂದು ನಂಬಿ ನಕಲಿ ಚಿನ್ನವನ್ನು ಖರೀದಿಸುವ ಗ್ರಾಹಕರೇ ಈ ವಂಚನೆಯ ನಿಜವಾದ ಬಲಿಪಶುಗಳು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಏಕೆಂದರೆ, ಬಾಂಗ್ಲಾ ರೆಡ್ ಗೋಲ್ಡ್ ಅನ್ನು ಕರಗಿಸಿದರೂ ಅಸಲಿ ಚಿನ್ನದಂತೆಯೇ ಕಾಣಿಸುತ್ತದೆ. ರಾಸಾಯನಿಕ ದ್ರಾವಣಗಳಲ್ಲಿ ಪರೀಕ್ಷಿಸಿದರೂ ಅಸಲಿ–ನಕಲಿ ನಡುವಿನ ವ್ಯತ್ಯಾಸ ಸುಲಭವಾಗಿ ಗೊತ್ತಾಗುವುದಿಲ್ಲ ಎನ್ನಲಾಗುತ್ತಿದೆ.

ಆದರೆ, ಗ್ರಾಹಕರು ತಮ್ಮ ಕಷ್ಟದ ಸಮಯದಲ್ಲಿ ಈ ಚಿನ್ನವನ್ನು ಅಡವಿಡಲು ಅಥವಾ ಮಾರಾಟ ಮಾಡಲು ಹೋದಾಗ ಮಾತ್ರ ನಿಜವಾದ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಆ ಕ್ಷಣದಲ್ಲಿ ಇದು ನಕಲಿ ಎಂದು ತೋರಿದರೆ, ಅವರ ಹಣವೂ ಹೋಗುತ್ತದೆ, ನಂಬಿಕೆಯೂ ಕುಸಿಯುತ್ತದೆ.

ಈ ಹಿನ್ನೆಲೆ, ಗ್ರಾಹಕರು ಚಿನ್ನ ಖರೀದಿಸುವಾಗ ಹೆಚ್ಚು ಎಚ್ಚರಿಕೆ ವಹಿಸುವುದು, ವಿಶ್ವಾಸಾರ್ಹ ಶೋರೂಮ್‌ಗಳಿಂದ ಮಾತ್ರ ಖರೀದಿ ಮಾಡುವುದು ಹಾಗೂ ಸರಿಯಾದ ಪ್ರಮಾಣಪತ್ರಗಳನ್ನು ಪರಿಶೀಲಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.

Join WhatsApp

Join Now

RELATED POSTS