---Advertisement---

ರಾಯಚೂರು ಡಿಸಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಐಡಿ ತೆಗೆದು ಮೋಸ ; ಯುವಕನ ಬಂಧನ

On: December 30, 2025 2:51 PM
Follow Us:
---Advertisement---

ರಾಯಚೂರು: ಜಿಲ್ಲಾಧಿಕಾರಿ ನಿತೀಶ್ ಕುಮಾರ ಅವರ ಹೆಸರಿನಲ್ಲಿ ಹಾಗೂ ಭಾವಚಿತ್ರ ಬಳಸಿ ನಕಲಿ ಫೇಸ್‌ಬುಕ್ ಐಡಿ ಸೃಷ್ಟಿಸಿ ವಂಚನೆ ನಡೆಸಿದ ಪ್ರಕರಣದಲ್ಲಿ, ರಾಜಸ್ಥಾನ ಮೂಲದ ಯುವಕನನ್ನು ರಾಯಚೂರು ಸೈಬರ್ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ರಾಜಸ್ಥಾನದ ಆಳ್ವಾರ್ ಜಿಲ್ಲೆಯ ಕರೋಲ್‌ನ ಚಂದಬಾಸ್ ಚಿರ್‌ಜಾನಾ ನಿವಾಸಿ ಶಕೀಲ್ ಜೈಕಾಮ್ (19). ಖಾಸಗಿ ಕಂಪನಿಯಲ್ಲಿ ಲೋಡಿಂಗ್ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಪೊಲೀಸರ ಮಾಹಿತಿಯಂತೆ, ಆರೋಪಿ ಜಿಲ್ಲಾಧಿಕಾರಿ ನಿತೀಶ್ ಕುಮಾರ ಅವರ ಭಾವಚಿತ್ರ ಬಳಸಿ ನಕಲಿ ಫೇಸ್‌ಬುಕ್ ಖಾತೆ ತೆರೆದು, ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದ ರಮೇಶ ಚೆನ್ನಪ್ಪ ಹೇಮನೂರು ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಬಳಿಕ ಕಡಿಮೆ ಬೆಲೆಯಲ್ಲಿ ಗೃಹೋಪಯೋಗಿ ಸಾಮಗ್ರಿಗಳನ್ನು ಮಾರಾಟ ಮಾಡುವುದಾಗಿ ನಂಬಿಸಿ ವಂಚನೆ ನಡೆಸಿದ್ದಾನೆ.

ಈ ಜಾಲದಲ್ಲಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸಬ್‌ಇನ್‌ಸ್ಪೆಕ್ಟರ್ ಆಗಿರುವ ಅಜೀತ್ ಸಿಂಗ್ ಅವರ ಹೆಸರನ್ನು ಬಳಸಿಕೊಂಡು, ಸಾಮಗ್ರಿ ಖರೀದಿಸಲು ಸಂಪರ್ಕಿಸುವಂತೆ ಹೇಳಿ ರಮೇಶ ಹಾಗೂ ಅವರ ಗೆಳೆಯ ರಾಘವೇಂದ್ರರನ್ನು ನಂಬಿಸಿದ್ದಾನೆ. ಜೂನ್ 27ರಿಂದ 29ರ ನಡುವಿನ ಅವಧಿಯಲ್ಲಿ ಒಟ್ಟು ₹80,500 ಹಣವನ್ನು ಪಡೆದು ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಮೋಸವಾದುದನ್ನು ಅರಿತ ರಮೇಶ ಚೆನ್ನಪ್ಪ ಅವರು ಜೂನ್ 30ರಂದು ರಾಯಚೂರು ಸೈಬರ್ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ಡಿವೈಎಸ್‌ಪಿ ವೆಂಕಟೇಶ್ ಹೊಗಿಬಂಡಿ ಅವರ ನೇತೃತ್ವದಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ತಿಳಿಸಿದ್ದಾರೆ.

Join WhatsApp

Join Now

RELATED POSTS