ಬೆಂಗಳೂರು ನಗರದ ಕೆಂಗೇರಿ ರಿಂಗ್ ರೋಡ್ ನಲ್ಲಿರುವ ಸಾಹಸ ಸಿಂಹ, ನಟ ಡಾ. ವಿಷ್ಣುವರ್ಧನ್ ಸಮಾಧಿ ನೆಲಸಮಗೊಳಿಸಲಾಗಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹೈಕೋರ್ಟ್ ಸೂಚನೆ ಮೇರೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿ ತೆರವುಗೊಳಿಸಲಾಗಿದ್ದು, ಸರ್ಕಾರ ಮತ್ತು ಪೊಲೀಸರ ವಿರುದ್ಧ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.
ಈ ಜಾಗದ ಸಲುವಾಗಿ ಬಾಲಣ್ಣ ಕುಟುಂಬದಲ್ಲಿ ಒಂದಷ್ಟು ವಿರೋಧ
2009 ರಲ್ಲಿ ಬೆಂಗಳೂರಿನ ಹೊರಭಾಗದಲ್ಲಿರುವ ನಟ ಬಾಲಣ್ಣ ಒಡೆತನದ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅಂತ್ಯಕ್ರಿಯೆ ಮಾಡಲಾಗಿದೆ. ಅಲ್ಲಿಯೇ ಸಮಾಧಿ ಕೂಡ ಇತ್ತು ( Dr Vishnuvardhan Samadhi ). ಈಗ ಹೈಕೋರ್ಟ್ ಆಜ್ಞೆ ಮೇರೆಗೆ ರಾತ್ರೋರಾತ್ರಿ ಸಮಾಧಿಯನ್ನು ನೆಲಸಮ ಮಾಡಲಾಗಿದೆ. ಅಭಿಮಾನಿಗಳು ಆಕ್ರೋಶ ಹೊರಹಾಕಲಿದ್ದಾರೆ ಎಂದು ಪೊಲೀಸರು ಕೂಡ ಅಲ್ಲಿ ಭದ್ರತೆ ನೀಡುತ್ತಿದ್ದಾರೆ. ಈ ಜಾಗದ ಸಲುವಾಗಿ ಬಾಲಣ್ಣ ಕುಟುಂಬದಲ್ಲಿ ಒಂದಷ್ಟು ವಿರೋಧ ಇತ್ತು. ವಿಷ್ಣುವರ್ಧನ್ ಸಮಾಧಿ ಜಾಗ ಉಳಿಸಿಕೊಡಿ ಎಂದು ಅಭಿಮಾನಿಗಳು ಹೋರಾಟ ಮಾಡಿದ್ದರೂ ಕೂಡ ಅದೀಗ ವಿಫಲವಾಗಿದೆ. ಈ ಬಗ್ಗೆ ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ.
ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲಾದ ಹಿನ್ನೆಲೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿ ತೆರವುಗೊಳಿಸಲಾಗಿದೆ. ಮೈಸೂರಿನಲ್ಲಿ ಒಟ್ಟು 2.75 ಎಕರೆ ಪ್ರದೇಶದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲಾಗಿದೆ. ರಿಂಗ್ ರೋಡ್ ನಲ್ಲಿರುವ ಸಾಹಸ ಸಿಂಹ, ನಟ ಡಾ. ವಿಷ್ಣುವರ್ಧನ್ ಅವರ ಮೂಲ ಸಮಾಧಿ ನೆಲಸಮಗೊಳಿಸಲಾಗಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ವೀರಕಪುತ್ರ ಶ್ರೀನಿವಾಸ್ ಇದು ಕರಾಳ ದಿನ,
ನಾಚಿಕೆಗೇಡಿನ ಸರ್ಕಾರ. ಬಾಲಣ್ಣನ ದುರಾಸೆಯ ಕುಟುಂಬ, ನಮ್ಮನ್ನು ಅರ್ಥಮಾಡಿಕೊಳ್ಳಲಾಗದ ವಿಷ್ಣು ಕುಟುಂಬ. ಈ ಮೂವರ ಪ್ರಯತ್ನದ ಫಲವಾಗಿ ಈ ರೀತಿ ಆಗಿದೆ. ನಾವು ಪರಿಪರಿಯಾಗಿ ಬೇಡಿಕೊಂಡೆವು, ಹೈಕೋರ್ಟ್‌ನವರು ನಮಗೆ ಆರಂಭದಲ್ಲಿ ನಮ್ಮ ಮನವಿ ಸ್ವೀಕಾರ ಮಾಡಿ, ಆಮೇಲೆ ನಮ್ಮ ಟೈಮ್ ಯಾಕೆ ವೇಸ್ಟ್ ಮಾಡ್ತೀರಾ ಅಂತ ಜಡ್ಜ್ ಹೇಳಿದ್ದರು” ಎಂದು ವೀರಕಪುತ್ರ ಶ್ರೀನಿವಾಸ್ ಮಾಧ್ಯಮದ ಜೊತೆ ಮಾತನಾಡಿ ಹೇಳಿದ್ದಾರೆ.
ಮೂಲ ಸಮಾಧಿ ಇದಾಗಿದ್ದು, ವಿಷ್ಣು ಸ್ಮಾರಕ ನಿರ್ಮಾಣದ ಬಳಿಕ ಈ ರೀತಿಯಾಗಿ ಮಾಡಬಾರದಾಗಿತ್ತು ಎಂಬುದಾಗಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.