ಕಲಬುರಗಿ: ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ, ವಿಧ್ಯಾಭಂಡಾರಿ ಶ್ರೀ ಡಾ. ಶರಣಬಸಪ್ಪ ಅಪ್ಪ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಕಲಬುರಗಿಯ ಖಾಸಗಿ ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಗುರುವಾರ 14 ಆಗಸ್ಟ್ 2025 ರಂದು ಇಹಲೋಕ ತ್ಯಜಿಸಿದ್ದಾರೆ.
ವಿದ್ಯಾಭಂಡಾರಿ ಡಾ. ಶರಣಬಸಪ್ಪ ಅಪ್ಪರವರು ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡಿದ ಕೊಡುಗೆಗಳು ಅಸಂಖ್ಯಾತ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿವೆ. ಅವರ ನೇತೃತ್ವದಲ್ಲಿ ಸಂಸ್ಥಾನವು ಶಿಕ್ಷಣದ ಬೆಳಕನ್ನು ಗ್ರಾಮಾಂತರ ಭಾಗಗಳವರೆಗೂ ಹರಡಿತು.
ಇಂದು ಅವರ ಅಗಲಿಕೆಯಿಂದ ಕಲಬುರಗಿಯ ಭೂಮಿಗೆ ಒಂದು ಕರಾಳ ದಿನವಾಯಿತು. ಭಕ್ತಾದಿಗಳು, ಶಿಷ್ಯರು ಮತ್ತು ಅನೇಕ ಗಣ್ಯರು ಅವರ ಪಾರ್ಥಿವ ಶರೀರದ ದರ್ಶನಕ್ಕಾಗಿ ಆಗಮಿಸುವ ನಿರೀಕ್ಷೆಯಿದೆ.






