---Advertisement---

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ.ನಾಗಲಕ್ಷ್ಮಿ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಭೇಟಿ ಮತ್ತು ಪರಿಶೀಲನೆ. Dr. Nagalakshmi visits and inspects Kalaburagi District Hospital.

By guruchalva

Published on:

Follow Us
Dr. Nagalakshmi visits and inspects Kalaburagi District Hospital.
---Advertisement---

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಅವರು ಕಲಬುರಗಿ ಜಿಲ್ಲಾ ಆಸ್ಪತ್ರೆ ಭೇಟಿ ನೀಡಿ ಅಲ್ಲಿಯ ಕುಂದು ಕೊರತೆ ಪರಿಶೀಲಿಸಿದ ನಂತರ ಸಾರ್ವಜನಿಕರನ್ನು ಮಾತನಾಡಿಸಿ, ಆಸ್ಪತ್ರೇಯ ಸಮಸ್ಯೆಗಳನ್ನು ಸ್ಥಳದಲ್ಲಿದ್ದ ವೈದ್ಯಾಧಿಕಾರಿಗಳಿಗೆ ಸಮಸ್ಯೆಗಳಿಗೆ ಆದಷ್ಟು ಬೇಗ ಸ್ಪಂಧಿಸಲು ಸೂಚನೆ ನೀಡಿದರು.

ಗುರುವಾರದಂದು ಜಿಮ್ಸ್ ಆಸ್ಪತ್ರೆ ಭೇಟಿ ನೀಡಿ ಅಲ್ಲಿನ ಎಲ್ಲಾ ವಾರ್ಡಗಳಲಿದ್ಧ ರೋಗಿಗಳ ಸಮಸ್ಯೆಗಳನ್ನು ಆಲಿಸಿ, ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲಿಸಿ ನ೦ತರ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತಿಯೊಂದು ವಾರ್ಡಗಳಿಗೆ ಸ್ವಚ್ಚ ಕುಡಿಯುವ ನೀರು, ಗಾಳಿ, ಬೆಳಕು ಮತ್ತು ಶೌಚಾಲಯಗಳನ್ನು ನಿರ್ಮಿಸುವುದು ಕಡ್ಡಾಯವಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಾಹಿಸಬೇಕೆಂದು ಅಧಿಕಾರಿಗಳಿಗೆ ಈಗಾಗಲೇ ತಿಳಿ ಹೇಳಲಾಗಿದೆ ಎಂದರು. ಆಸ್ಪತ್ರೆಯಲ್ಲಿ ಹೆರಿಗೆ ವಾರ್ಡಗಳಲ್ಲಿ ಮಹಿಳೆಯರಿಗೆ ಬಿಸಿ ನೀರು ಹಾಗೂ ತಣ್ಣೀರನ್ನು ಪೂರೈಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಮ್ಸ್ ನಿರ್ದೇಶಕ ಉಮೇಶ ರೆಡ್ಡಿ ಅವರಿಗೆ ಸೂಚನೆ ನೀಡಲಾಗಿದೆ.

ಕುಡಿಯುವ ನೀರಿನ ಬಗ್ಗೆ ಅಧಿಕಾರಿಗಳು ಗಮನ ಹರಿಸಿದರಿಂದ ಸುಧಾರಣೆ

ನಾನು ಮೊದಲ ಭಾರಿಗೆ ಈ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಕುಡಿಯುವ ನೀರಿನ ಸಮಸ್ಯೆಯನ್ನು ಗಮನಿಸಿ ಇದಕ್ಕೆ ಬೇಗ ಕ್ರಮವಹಿಸಬೇಕೆಂದು ಸೂಚಿಸಲಾಗಿತ್ತು. ರೋಗಿಗಳಿಗೆ ನೀರಿನ ಹೆಚ್ಚಿನ ಅವಶ್ಯಕತೆ ಇದ್ದು, ಅವರಿಗೆ ಕುಡಿಯಲು ನೀರು ಸರಬರಾಜು ಮಾಡಿದ್ದಾರೆ ಆದರೂ ಕೆಲವು ರೋಗಿಗಳು ನೀರು ತಾವೆ ತೆಗೆದುಕೊಂಡು ಬಂದಿದ್ದಾರೆ. ಕುಡಿಯುವ ನೀರಿನ ಬಗ್ಗೆ ಅಧಿಕಾರಿಗಳು ಗಮನ ಹರಿಸಿದರಿಂದ ಸುಧಾರಣೆ ಕಂಡುಬಂದಿದೆ ಎಂದರು. ಸರ್ಕಾರದಿಂದ ಹಣ ಖರ್ಚು ಮಾಡಿ ಆರ್.ಓ. ಪ್ಲಾಂಟ್ ಹಾಕಿದ್ದಾರೆ ಮತ್ತೂ ಅದರ ಸರಿಯಾದ ಬಳಕೆ ಮಾಡಬೇಕೆಂದು ಈಗಾಗಲೇ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದೇನೆ ಎಂದರು.

ರೋಗಿಗಳ ಆರೋಗ್ಯವನ್ನು ವಿಚಾರಿಸಿದ ಅವರು ಆಸ್ಪತ್ರೆಯಲ್ಲಿ ಪ್ರತಿ ದಿನ ಸ್ವಚ್ಛತೆ ಕಾಯ್ದುಕೊಳ್ಳಬೇಕು, ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಬಡ ಜನರು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಅವರಿಗೆ ಉತ್ತಮ ಸೇವೆಯನ್ನು ಒದಗಿಸುವುದು ನಮ್ಮೆಲರ ಜವಾಬ್ದಾರಿ ಅದೇ ರೀತಿಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲ ಕಡೆ ಸಿಸಿಟಿವಿ ಕ್ಯಾಮ‌ರ್ ಅಳವಡಿಸಲು ಸೂಚನೆ ನೀಡಿದ್ದೇನೆ. ರೋಗಿಗಳಿಗೆ ಉತ್ತಮ ಗುಣಮಟ್ಟ ಆಹಾರ ನೀಡಲು, ಮಾತ್ರೆಗಳನ್ನು ಸರಿಯಾದ ಸಮಯಕ್ಕೆ ವಿತರಿಸಲು ಪ್ರತಿ ದಿನ ಅವರ ಆರೋಗ್ಯದ ನಿಗವಹಿಸಲು ವೈದ್ಯಾಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ ಎಂದರು.

ಮಾತೃವಂದನ ಯೋಜನೆಯಡಿ ಅರ್ಜಿ

ಇದೇ ಸಂದರ್ಭದಲ್ಲಿ ಒಳರೋಗಿಯಾಗಿ ದಾಖಲಾಗಿರುವ ಲಕ್ಷ್ಮಿಯವರ ಗಂಡ ಹನುಮಂತ ಅವರ ಜೋತೆ ಮಾತನಾಡಿ ತಾಯಿ ಮಗುವಿನ ಆರೋಗ್ಯ ವಿಚಾರಿಸಿದರು ಹಾಗೆ ಮಾತೃವಂದನ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಬಗ್ಗೆ ಪ್ರಶ್ನಿಸಿದರು. ಲಕ್ಷ್ಮೀ ಅವರು ಪ್ರತಿಕ್ರಿಯಿಸಿ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಅದರ ಬಗ್ಗೆ ಮಾಹಿತಿ ಇನ್ನೂ ಬಂದಿಲ್ಲ ಎಂದು ಹೇಳಿದರು. ಅಧ್ಯಕ್ಷರು ತಕ್ಷಣವೇ ಸಂಬಂಧಪಟ್ಟ ಶಿಶು ಅಭಿವ್ರದ್ದಿ ಯೋಜನಾಧಿಕಾರಿಗೆ ಮಾತನಾಡಿ ಮಾಹಿತಿ ತಿಳಿಸಬೇಕು ಎಂದರು.ಈ ಸಮಯದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ  ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಖ್ಯಾತನಾಳ, ಜಿಲ್ಲಾ ಸರ್ಜನ್ ರೂಕ್ಕಿಯ್ಯ ಆಸನ್ ರಬ್ಬಾ, ಮಕ್ಕಳ ತಜ್ಞೆ ರೇವಣ್ಣ ಸಿದ್ದಪ್ಪ ಬೋಸ್ಟ ಇತರೆ ವೈದ್ಯಾಧಿಕಾರಿಗಳು ಮತ್ತು  ಶುಶ್ರುಕರು ಸಾಥ್ ನೀಡಿದರು.

---Advertisement---

1 thought on “ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ.ನಾಗಲಕ್ಷ್ಮಿ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಭೇಟಿ ಮತ್ತು ಪರಿಶೀಲನೆ. Dr. Nagalakshmi visits and inspects Kalaburagi District Hospital.”

Leave a Comment