ರಾಜ್ಯ ಸರ್ಕಾರದ ಬೆಲೆ ಏರಿಕೆ ಹಾಗೂ ತೆರಿಗೆ ನೀತಿಯನ್ನು ಟೀಕಿಸಿದ ಡಾ. ಸುಧಾಕರ್, ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಲ್ಲಿ ಜಿಎಸ್ಟಿ ಸುಧಾರಣೆಗಳನ್ನು ಕೈಗೊಂಡಿದ್ದರೂ, ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ನಿರ್ಧಾರಗಳಿಂದ ಸಾಮಾನ್ಯ ಜನರು ಬೆಲೆ ಏರಿಕೆಯ ತಾಪ ಅನುಭವಿಸುತ್ತಿದ್ದಾರೆ ಎಂದು ಖಂಡಿಸಿದರು.
“ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಶೇ.18 ರ ತೆರಿಗೆಯನ್ನು ಶೇ.5ಕ್ಕೆ ಇಳಿಸಿದೆ. ಆ ಮೂಲಕ ಬಹಳಷ್ಟು ಸರಕು, ಸೇವೆಗಳಲ್ಲಿ ತೆರಿಗೆ ವಿನಾಯಿತಿ ಲಭಿಸಿದೆ. ಇದು ದೇಶದ ಮಧ್ಯಮವರ್ಗ ಹಾಗೂ ಬಡಜನರ ಪರವಾಗಿ ಕೈಗೊಂಡ ಮಹತ್ವದ ನಿರ್ಧಾರವಾಗಿದೆ ಎಂದು ಬಣ್ಣಿಸಿದ್ದಾರೆ. ಆದ್ರೆ ಕರ್ನಾಟಕದಲ್ಲಿ ಮಾತ್ರ ರಾಜ್ಯ ಸರ್ಕಾರ ಜನರ ಸುಲಿಗೆ ಮಾಡಲು ಮುಂದಾಗಿದೆ” ಎಂದಿದ್ದಾರೆ.
“ರಾಜ್ಯದಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಪಕ್ಷ ಗ್ಯಾರೆಂಟಿಗಳನ್ನು ಘೋಷಣೆ ಮಾಡಿ, ಇದೀಗ ಆ ಗ್ಯಾರೆಂಟಿಗಳನ್ನು ನಿಭಾಯಿಸಲು ಸಾಧ್ಯವಾಗದೇ ರಾಜ್ಯದ ಜನರ ಸುಲಿಗೆಗೆ ಮುಂದಾಗಿದೆ. ಹೀಗಾಗಿ ಜಿ.ಎಸ್.ಟಿ ಅಂದ್ರೆ ಸರಕು ಮತ್ತು ಸೇವಾ ತೆರಿಗೆ ಅಲ್ಲ, ಬದಲಾಗಿ ಗ್ಯಾರೆಂಟಿ ಸುಲಿಗೆ ಟ್ಯಾಕ್ಸ್” ಎಂದು ವ್ಯಂಗ್ಯವಾಡಿದ್ದಾರೆ.
ಹಾಲು, ಪೆಟ್ರೋಲ್, ಡೀಸೆಲ್, ಸ್ಟ್ಯಾಂಪ್ ಡ್ಯೂಟಿ, ಬಸ್ ಟಿಕೆಟ್ ದರ ಸೇರಿದಂತೆ ಎಲ್ಲಾ ಬೆಲೆ ಏರಿಕೆ ಮಾಡಿ ಗ್ಯಾರೆಂಟಿ ಸುಳಿಗೆ ನಡೆಸುತ್ತಿದೆ ಎಂದು ಸಂಸದ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.






