ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ. ಭೀಮಸೇನರಾವ ಶಿಂಧೆ ಔರಾದನಲ್ಲಿ ಮತ್ತೂ ಕಮಲನಗರ ತಾಲೂಕಿನಲ್ಲಿ ಅತಿವೃಷ್ಟಿಯಿಂದ ರಸ್ತೆ, ಚರಂಡಿ ಹಾಗೂ ಸೇತುವೆ ಅಪಾರ ಪ್ರಮಾಣ ಹಾನಿಯಾಗಿದೆ, ಹಾಗು 10 ಕೋಟಿ ಅನುದಾನ ನೀಡುವಂತೆ ಕೋರಿದ್ದಾರೆ.
ಈ ವಿಷಯದ ಬಗ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ರೋಡು, ಚರಂಡಿ ಹಾಗೂ ಸೇತುವೆ ಎಲ್ಲಾ ದುರಸ್ಥಿಯಾಗಿದ್ದು, ಇದರಿಂದ ಓಡಾಟ ಸ್ಥಗಿತಗೊಂಡಿದೆ. ಈ ಕಾರಣ ಅವರು ಸಿಎಂ ನಿಧಿಯಿಂದ ಹತ್ತು ಕೋಟಿ ಅನುಧಾನ ಕೊಡಬೇಕು ಎಂದು ಕೋರಿದ್ದಾರೆ. ಕೂಡಲೆ ಕಾಮಗಾರಿ ಪ್ರಾರಂಭಿಸಬೇಕೆಂದು ಕೋರಿ ಮನವಿ ಮಾಡಿದ್ದಾರೆ.
ವಾಡಿಕೆಗಿಂತ ಹೆಚ್ಚಾಗಿ ಮಳೆ ಸುರಿದ ಪರಿಣಾಮವಾಗಿ ಸಾರ್ವಜನಿಕ ಸೌಕರ್ಯಗಳಿಗೆ ಭಾರಿ ಹಾನಿ ಉಂಟಾಗಿದೆ. ಮಳೆಯಿಂದಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಪ್ರಮುಖ ರಸ್ತೆ, ಚರಂಡಿಗಳು ಹಾಗೂ ಸೇತುವೆಗಳು ಮುರಿದು ಹೋಗಿವೆ. ಕೆಲ ಕಡೆಗಳಲ್ಲಿ ಸೇತುವೆಗಳು ಕೊಚ್ಚಿಹೋಗಿದ್ದು ಜನಸಾಮಾನ್ಯರ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಶಾಲಾ ವಿದ್ಯಾರ್ಥಿಗಳ ಓಡಾಟ, ಕೃಷಿ ಉತ್ಪನ್ನಗಳ ಸಾಗಾಟ ಹಾಗೂ ತುರ್ತು ಅವಶ್ಯಕತೆಗಳಿಗೆ ಸಾರ್ವಜನಿಕರು ತೀವ್ರವಾದ ಸಮಸ್ಯೆಗಳು ಅನುಭವಿಸುವಂತಾಗಿದೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಔರಾದ್, ಕಮಲನಗರ ತಾಲೂಕು ವ್ಯಾಪ್ತಿಯಲ್ಲಿ ಹಾಳಾಗಿರುವ ರಸ್ತೆ, ಚರಂಡಿ ಮತ್ತು ಸೇತುವೆಗಳ ದುರಸ್ತಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಕೃಷಿ ಸಚಿವರಿಗೆ ಮನವಿ
ನಿರಂತರವಾಗಿ ಎಡೆಬಿಡದೆ ಸುರಿದ ಅತೀ ಮಳೆಯಿಂದಾಗಿ ಫಲವತ್ತಾದ ಭೂಮಿಯ ಮಣ್ಣೆಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿದ್ದು, ರೈತರ ಫಲವತ್ತಾದ ಜಮೀನುಗಳು ಬರಡಾಗಿರುತ್ತವೆ. ರೈತರು ಸಾಕಿದ್ದ ಹಸು, ಕರು, ಮೇಕೆ, ಎಮ್ಮೆ ಇತ್ಯಾದಿ ಸಾಕು ಪ್ರಾಣಿಗಳು ನೀರಿನಲ್ಲಿ ಕೊಚ್ಚಿ ರೈತರು ಹೋಗಿರುತ್ತವೆ. ಬೆಳೆದಂತಹ ಕೃಷಿ ಬೆಳೆಗಳಾದ ತೊಗರಿ, ಉದ್ದು, ಹತ್ತಿ, ಸೋಯಾಬೀನ್ ಹಾಗೂ ಹೆಸರು ಬೆಳೆಗಳು ಸಂಪೂರ್ಣ ಹಾನಿಗೊಳಾಗುತ್ತಿದೆ. ಇದರಿಂದಾಗಿ ರೈತರು ಭಾರೀ ನಷ್ಟ ಅನುಭವಿಸಿದ್ದು, ಸಾವಿರಾರು ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಭವಿಷ್ಯದ ಜೀವನ ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಅತೀ ಮಳೆಯ ಪರಿಣಾಮವಾಗಿ ಬೆಳೆಗಳಿಗೆ ಹಾನಿಯಾಗಿರುವ ಕಾರಣದಿಂದಾಗಿ ರೈತರ ಕುಟುಂಬ ಬೀದಿಗೆ ಬಂದಿವೆ. ರೈತರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ತಕ್ಷಣದಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಬೇಕು ಹಾಗೂ ಹಾನಿಗೊಳಗಾದ ಬೆಳೆಗಳಿಗೆ ಗರಿಷ್ಟ ಮೊತ್ತದ ಪರಿಹಾರ ಪಟ್ಟಿಯನ್ನು ಬಿಡುಗಡೆ ಮಾಡಬೇಕೆಂದೂ ಅವರು ಒತ್ತಾಯಿಸಿದರು.






