---Advertisement---

ಕೇವಲ ಒಂದೇ ನಿಮಿಷದಲ್ಲಿ ವಾಟ್ಸಪ್ ಮೂಲಕ ಆಧಾರ್ ಕಾರ್ಡ್ ಡೌನ್ಲೋಡ ಮಾಡಿಕೋಳ್ಳುವುದು ಹೇಗೆ

On: January 7, 2026 7:54 AM
Follow Us:
---Advertisement---

ಆಧಾರ್ ಕಾರ್ಡ್ ಇಂದು ಪ್ರತಿಯೊಬ್ಬ ಭಾರತೀಯನಿಗೂ ಅತ್ಯಗತ್ಯ ದಾಖಲೆಯಾಗಿದೆ. ಯಾವಾಗ, ಎಲ್ಲಿಗೆ ಅದು ಬೇಕಾಗುತ್ತದೆ ಎಂಬುದು ಹೇಳಲಾಗದು. ಅದಕ್ಕಾಗಿ ಬಹುತೇಕರು ಆಧಾರ್ ಅನ್ನು ಸದಾ ತಮ್ಮ ಬಳಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಅಗತ್ಯ ಸಂದರ್ಭದಲ್ಲಿ ತಕ್ಷಣ ತೋರಿಸಿದರೆ ಕೆಲಸವೂ ಸುಲಭವಾಗಿ ಮುಗಿಯುತ್ತದೆ.

ಇದನ್ನು ಓದಿ: Best Agriculture Loans and Subsidy Schemes in Karnataka 2025-26

ಇದನ್ನು ಓದಿ: ಮಕ್ಕಳ ಭವಿಷ್ಯಕ್ಕೆ ಭದ್ರ ಉಳಿತಾಯ: ಎಲ್‌ಐಸಿಯ ಜೀವನ್ ತರುಣ್ ಯೋಜನೆ

ಜನರಿಗೆ ಇನ್ನಷ್ಟು ಅನುಕೂಲವಾಗುವಂತೆ ಯುಐಡಿಎಐ (UIDAI) ಹಲವು ಡಿಜಿಟಲ್ ಸೌಲಭ್ಯಗಳನ್ನು ಪರಿಚಯಿಸಿದೆ. ಇದರ ಭಾಗವಾಗಿ, ಆಧಾರ್ ಕಾರ್ಡ್ ಅನ್ನು ಈಗ ಡಿಜಿಟಲ್ ರೂಪದಲ್ಲಿ ಕ್ಷಣಾರ್ಧದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಆಧಾರ್ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮಾತ್ರವಲ್ಲದೆ, ಇದೀಗ ವಾಟ್ಸಪ್ ಮೂಲಕವೂ ಆಧಾರ್ ಡೌನ್ಲೋಡ್ ಮಾಡುವ ಅವಕಾಶ ಲಭ್ಯವಾಗಿದೆ.

ವಾಟ್ಸಪ್ ಮೂಲಕ ಆಧಾರ್ ಡೌನ್ಲೋಡ ಮಾಡಿಕೋಳ್ಳುವುದು ಹೇಗೆ

ನಿಮ್ಮ ಮೊಬೈಲ್‌ನಲ್ಲಿ 9013151515 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಿ ವಾಟ್ಸಪ್ ತೆರೆಯಿರಿ ಮತ್ತು ಆ ಸಂಖ್ಯೆಗೆ “Hi” ಎಂದು ಸಂದೇಶ ಕಳುಹಿಸಿ ಲಭ್ಯವಿರುವ ಸೇವೆಗಳ ಪಟ್ಟಿ ಗೋಚರಿಸುತ್ತದೆ ಅದರಲ್ಲಿ ಡಿಜಿಲಾಕರ್ (DigiLocker) ಆಯ್ಕೆಯನ್ನು ಆರಿಸಿ ಡಿಜಿಲಾಕರ್ ವಿವರಗಳನ್ನು ನೀಡಿ ಪರಿಶೀಲನೆ ಪೂರ್ಣಗೊಳಿಸಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ದೃಢೀಕರಿಸಿ ಡಿಜಿಲಾಕರ್‌ನಲ್ಲಿ ಸಂಗ್ರಹವಾಗಿರುವ ಎಲ್ಲಾ ದಾಖಲೆಗಳು ಕಾಣಿಸಿಕೊಳ್ಳುತ್ತವೆ ಅದರಲ್ಲಿ ಆಧಾರ್ ಆಯ್ಕೆಮಾಡಿ ಸಲ್ಲಿಸಿ ವಾಟ್ಸಪ್ ಮೂಲಕ ಪಿಡಿಎಫ್ ಸ್ವರೂಪದಲ್ಲಿ ನಿಮ್ಮ ಆಧಾರ್ ಕಾರ್ಡ್ ಲಭ್ಯವಾಗುತ್ತದೆ

ಮುಖ್ಯ ಸೂಚನೆ

ವಾಟ್ಸಪ್ ಮೂಲಕ ಆಧಾರ್ ಡೌನ್ಲೋಡ್ ಮಾಡಲು, ನಿಮ್ಮ ಆಧಾರ್ ಕಾರ್ಡ್ ಡಿಜಿಲಾಕರ್‌ಗೆ ಲಿಂಕ್ ಆಗಿರಬೇಕು. ಡಿಜಿಲಾಕರ್‌ಗೆ ಆಧಾರ್ ಲಿಂಕ್ ಮಾಡದಿದ್ದರೆ ಈ ಸೇವೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೊದಲು ಡಿಜಿಲಾಕರ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಿ.

ಹಿಂದೆ ಡಿಜಿಲಾಕರ್ ಅಥವಾ ಎಂ-ಆಧಾರ್ ಅಪ್ಲಿಕೇಶನ್ ಮೂಲಕ ಮಾತ್ರ ಆಧಾರ್ ಡೌನ್ಲೋಡ್ ಮಾಡಬಹುದಾಗಿತ್ತು. ಆದರೆ ಈಗ ವಾಟ್ಸಪ್ ಮೂಲಕವೂ ಈ ಸೌಲಭ್ಯ ಲಭ್ಯವಾಗಿದ್ದು, ತುರ್ತು ಸಂದರ್ಭಗಳಲ್ಲಿ ಸೆಕೆಂಡುಗಳಲ್ಲಿ ಆಧಾರ್ ಪಡೆಯಲು ಇದು ಬಹಳ ಸಹಾಯಕವಾಗಿದೆ.

Join WhatsApp

Join Now

RELATED POSTS