---Advertisement---

ವಿಶ್ವದ ಅತ್ಯಂತ ದುಬಾರಿ ಅಕ್ಕಿ ಯಾವ್ದು ಗೊತ್ತಾ?ಕಿಲೋಗೆ 15 ಸಾವಿರ ರೂಪಾಯಿ!

On: February 12, 2026 2:08 PM
Follow Us:
---Advertisement---

ನಮ್ಮ ಆಹಾರ ಪದ್ಧತಿಯಲ್ಲಿ ಅಕ್ಕಿಗೆ ಅತಿ ಪ್ರಮುಖ ಸ್ಥಾನವಿದೆ. ರಾಗಿ, ಜೋಳ, ಸಜ್ಜೆ, ನವಣೆ ಇದ್ದರೂ ದಿನನಿತ್ಯದ ಊಟದಲ್ಲಿ ಬಹುತೇಕರು ಭತ್ತದನ್ನೇ ಹೆಚ್ಚು ಅವಲಂಬಿಸುತ್ತಾರೆ. ಭಾರತದಲ್ಲಿ ಅನೇಕ ಬಗೆಯ ಅಕ್ಕಿಗಳು ಲಭ್ಯವಿದ್ದು, ಸಾಮಾನ್ಯವಾಗಿ 50 ರೂಪಾಯಿಯಿಂದ ಬೆಲೆ ಆರಂಭವಾಗುತ್ತದೆ. ಆದರೆ ಅಕ್ಕಿಗಳಲ್ಲೇ ಒಂದು ಪ್ರಭೇದ ಇದೆ, ಅದರ ಬೆಲೆ ಕೇಳಿದರೆ ಅಚ್ಚರಿಯಾಗುವುದು ಸಹಜ.

ಇಷ್ಟೊಂದು ದುಬಾರಿ ಅಕ್ಕಿಯನ್ನು ಯಾರು ಖರೀದಿಸುತ್ತಾರೆ ಎಂಬ ಪ್ರಶ್ನೆಯೂ ಮನಸ್ಸಿಗೆ ಬರುತ್ತದೆ. ವಿಶ್ವದ ಅತ್ಯಂತ ದುಬಾರಿ ಅಕ್ಕಿಯ ಬಗ್ಗೆ ತಿಳಿದುಕೊಳ್ಳೋಣ. ಕಿನ್‌ಮೆಮೈ ಪ್ರೀಮಿಯಂ ಎಂಬ ಅಕ್ಕಿ ಜಗತ್ತಿನಲ್ಲೇ ಅತ್ಯಂತ ದುಬಾರಿಯಾದ ಪ್ರಭೇದವೆಂದು ಪ್ರಸಿದ್ಧಿ ಪಡೆದಿದೆ. ಇದು ಕೇವಲ ಬೆಲೆಯ ಕಾರಣದಿಂದಷ್ಟೇ ಅಲ್ಲ, ಅದರ ಬೆಳವಣಿಗೆ ವಿಧಾನ ಹಾಗೂ ವಿಶಿಷ್ಟ ಸುಗಂಧದ ಕಾರಣಕ್ಕೂ ವಿಶೇಷ ಸ್ಥಾನ ಪಡೆದಿದೆ. 2016ರಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪಟ್ಟಿಯಲ್ಲೂ ಇದಕ್ಕೆ ಸ್ಥಾನ ಲಭಿಸಿತ್ತು. ಈ ವಿಶೇಷ ಅಕ್ಕಿ ಜಪಾನ್ ದೇಶದಲ್ಲಿ ಉತ್ಪಾದನೆ ಆಗುತ್ತದೆ ಮತ್ತು ಅಲ್ಲಿ ಮಾತ್ರ ದೊರೆಯುತ್ತದೆ.

ಇದನ್ನು ಓದಿ: ಸಾಕು ನಾಯಿಯ ಅನಾರೋಗ್ಯದಿಂದ ತೀವ್ರ ಮನನೊಂದು: ಲಖನೌನಲ್ಲಿ ಇಬ್ಬರು ಸಹೋದರಿಯರ ಆತ್ಮಹತ್ಯೆ

ಇದನ್ನು ಓದಿ: ತೆಂಗಿನಕಾಯಿಯಿಂದ ಬೋರ್‌ವೆಲ್ ಪಾಯಿಂಟ್ ಪತ್ತೆ ಸಾಧ್ಯವೇ? ವಿಜ್ಞಾನ ಹೇಳುವ ನಿಜಾಂಶ ಇಲ್ಲಿದೆ

ಇದನ್ನು ಓದಿ: ಯುವತಿಯ ಖಾಸಗಿ ಫೋಟೋಗಳನ್ನು ಬಳಸಿ ಬೆದರಿಕೆ ಹಾಕಿ ಹಣ ವಸೂಲಿ ಯತ್ನ

ಜಪಾನ್‌ನಲ್ಲಿ 840 ಗ್ರಾಂ ಕಿನ್‌ಮೆಮೈ ಪ್ರೀಮಿಯಂ ಅಕ್ಕಿಯ ಒಂದು ಪ್ಯಾಕ್‌ ಬೆಲೆ ಸುಮಾರು 10,800 ಯೆನ್. ಭಾರತೀಯ ಕರೆನ್ಸಿಯಲ್ಲಿ ಇದನ್ನು ಪರಿಗಣಿಸಿದರೆ ಸುಮಾರು 6,000ರಿಂದ 7,000 ರೂಪಾಯಿವರೆಗೆ ಬರುತ್ತದೆ. ಮಾರುಕಟ್ಟೆಯ ಪ್ರಕಾರ ಪ್ರತಿ ಕೆ.ಜಿಗೆ 12,500ರಿಂದ 15,000 ರೂಪಾಯಿವರೆಗೆ ಬೆಲೆ ಏರಿಳಿತವಾಗುತ್ತದೆ. ವಿಶೇಷವಾಗಿ, ಈ ಅಕ್ಕಿಯನ್ನು ಬೇಯಿಸುವ ಮೊದಲು ತೊಳೆಯುವ ಅಗತ್ಯವಿಲ್ಲ ಎಂಬುದು ಇದರ ಮತ್ತೊಂದು ವಿಶೇಷತೆ.

ಜಪಾನ್‌ನ ಟೊಯೊ ರೈಸ್ ಕಾರ್ಪೊರೇಷನ್ ಎಂಬ ಕಂಪನಿಯೇ ಈ ಕಿನ್‌ಮೆಮೈ ಪ್ರೀಮಿಯಂ ಅಕ್ಕಿಯನ್ನು ಉತ್ಪಾದಿಸುತ್ತದೆ. ಸಾಮಾನ್ಯ ಅಕ್ಕಿಗಿಂತ ಇದು ಹೆಚ್ಚಿನ ಪೌಷ್ಟಿಕಾಂಶ ಹೊಂದಿದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಲಿಪೊಪೊಲಿಸ್ಯಾಕರೈಡ್‌ಗಳು (LPS) ಎನ್ನುವ ಘಟಕಗಳು ಸಾಮಾನ್ಯ ಅಕ್ಕಿಗಿಂತ ಆರು ಪಟ್ಟು ಹೆಚ್ಚಾಗಿದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಜಪಾನ್‌ನ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಈ ವಿಶೇಷ ಭತ್ತವನ್ನು ಬೆಳೆಸಲಾಗುತ್ತದೆ.

ಇದನ್ನು ಓದಿ: ಬೆಂಗಳೂರು: ಮದುವೆ ಭರವಸೆ ನೀಡಿ ಯುವತಿಯನ್ನ ವಂಚಿಸಿದ ಇನ್ಸ್‌ಪೆಕ್ಟರ್!! ಮೆಸೇಜ್‌ ಚಾಟಿಂಗ್‌ ಪ್ರದರ್ಶಿಸಿದ ಯುವತಿ..

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment