---Advertisement---

ಕಂಪನಿಯ ವರ್ತನೆಗೆ ಅಸಮಾಧಾನ: ಟಾಯ್ಲೆಟ್ ಪೇಪರ್‌ನಲ್ಲಿ ರಾಜೀನಾಮೆ ಬರೆದು ಉದ್ಯೋಗ ತೊರೆದ ವ್ಯಕ್ತಿ

On: December 29, 2025 8:49 AM
Follow Us:
---Advertisement---

ಸಾಮಾನ್ಯವಾಗಿ ಉದ್ಯೋಗ ತೊರೆಯುವಾಗ ಉದ್ಯೋಗಿಗಳು ಔಪಚಾರಿಕ ರಾಜೀನಾಮೆ ಪತ್ರವನ್ನು ಸಲ್ಲಿಸುವುದು ರೂಢಿ. ಆದರೆ ಇಲ್ಲೊಬ್ಬ ಉದ್ಯೋಗಿ ವಿಭಿನ್ನ ರೀತಿಯಲ್ಲಿ ರಾಜೀನಾಮೆ ನೀಡಿ ಎಲ್ಲರ ಗಮನ ಸೆಳೆದಿದ್ದಾನೆ. ಈ ವ್ಯಕ್ತಿ ಟಾಯ್ಲೆಟ್ ಪೇಪರ್‌ನಲ್ಲಿ ರಾಜೀನಾಮೆ ಪತ್ರ ಬರೆದು ಕೆಲಸ ತೊರೆದಿದ್ದು, ಅದರ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಕಂಪನಿಯಲ್ಲಿ ಕೆಲಸ ಮಾಡುವ ಅನೇಕ ಉದ್ಯೋಗಿಗಳು ಕೆಲಸದ ಒತ್ತಡ ಹಾಗೂ ಸಂಸ್ಥೆಯ ವರ್ತನೆಯಿಂದ ಮಾನಸಿಕ ಕಿರುಕುಳ ಅನುಭವಿಸುತ್ತಾರೆ. ಕೆಲವೊಮ್ಮೆ ಕಂಪನಿಗಳ ಅಸಮಂಜಸ ನಡೆ ಉದ್ಯೋಗಿಗಳನ್ನು ರಾಜೀನಾಮೆ ನೀಡುವ ಹಂತಕ್ಕೆ ತಳ್ಳುತ್ತದೆ. ಇದೇ ಕಾರಣದಿಂದ ಈ ಉದ್ಯೋಗಿಯೂ ಕೆಲಸ ತೊರೆಯುವ ನಿರ್ಧಾರ ಕೈಗೊಂಡಿದ್ದಾನೆ.

ವೈರಲ್ ಆಗಿರುವ ರಾಜೀನಾಮೆ ಪತ್ರದಲ್ಲಿ, “ಕಂಪನಿ ನನ್ನನ್ನು ಹೇಗೆ ನಡೆಸಿಕೊಂಡಿತ್ತೋ ಅದರ ಸಂಕೇತವಾಗಿ ನಾನು ಈ ಟಾಯ್ಲೆಟ್ ಪೇಪರ್‌ನಲ್ಲಿ ರಾಜೀನಾಮೆ ಬರೆಯಲು ಆಯ್ಕೆ ಮಾಡಿಕೊಂಡಿದ್ದೇನೆ. ನಾನು ಈ ಕೆಲಸವನ್ನು ತ್ಯಜಿಸುತ್ತಿದ್ದೇನೆ” ಎಂದು ಉಲ್ಲೇಖಿಸಲಾಗಿದೆ. ಈ ಅಸಾಮಾನ್ಯ ರಾಜೀನಾಮೆ ಪತ್ರವೇ ಇದೀಗ ನೆಟ್ಟಿಗರ ಗಮನ ಸೆಳೆದಿದೆ.

ಈ ಫೋಟೋವನ್ನು Whotfismick ಎಂಬ ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ ಡಿಸೆಂಬರ್ 23ರಂದು ಹಂಚಿಕೊಳ್ಳಲಾಗಿದ್ದು, ಇದುವರೆಗೆ 1.6 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಪೋಸ್ಟ್‌ಗೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಒಬ್ಬ ಬಳಕೆದಾರ, “ಈ ವ್ಯಕ್ತಿ ಕಂಪನಿಯ ವರ್ತನೆಯನ್ನು ತುಂಬಾ ವೈಯಕ್ತಿಕವಾಗಿ ತೆಗೆದುಕೊಂಡಂತೆ ಕಾಣುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ಕಂಪನಿಗೆ ತಕ್ಕ ಉತ್ತರ ನೀಡಿರುವ ಉದ್ಯೋಗಿ” ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, “ಇದು ಅತ್ಯದ್ಭುತ ಪ್ರತಿಭೆ ಮತ್ತು ಧೈರ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವಿಚಿತ್ರ ರಾಜೀನಾಮೆ ಇದೀಗ ಕೆಲಸದ ಸ್ಥಳದ ಒತ್ತಡ ಮತ್ತು ಉದ್ಯೋಗಿಗಳ ಗೌರವದ ಕುರಿತು ಚರ್ಚೆಗೆ ಕಾರಣವಾಗಿದೆ.

Join WhatsApp

Join Now

RELATED POSTS